For the best experience, open
https://m.hosakannada.com
on your mobile browser.
Advertisement

Temple Bill: ಹಿಂದೂ ಧಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕ ವಾಪಸ್

08:26 AM Mar 21, 2024 IST | ಹೊಸ ಕನ್ನಡ
UpdateAt: 09:31 AM Mar 21, 2024 IST
temple bill  ಹಿಂದೂ ಧಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕ ವಾಪಸ್

Temple Bill: ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರಮುಖ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಕಡಿಮೆ ಆದಾಯ ಇರುವ 'ಸಿ' ವರ್ಗದ ದೇವಾಲಯಗಳಿಗೆ ಬಳಸುವ ಉದ್ದೇಶದ ಕಾನೂನು ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಸರಕಾರಕ್ಕೆ ವಾಪಸ್ ಕಳಿಸಿದ್ದಾರೆ.

Advertisement

ಇದನ್ನೂ ಓದಿ: D.V.Sadananda Gowda: ಬಂಡೆದ್ದ ಡಿವಿಎಸ್‌ ತವರಿನಲ್ಲಿ ದೈವದ ಮೊರೆ; ಮಾಜಿ ಮುಖ್ಯಮಂತ್ರಿಯ ಮುಂದಿನ ನಡೆ ಇಂದು ನಿರ್ಧಾರ?

ಅರ್ಚಕರಿಗೆ ವಿಮೆ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುವ ಜತೆಗೆ ಆದಾಯವಿಲ್ಲದ ದೇವಾಲಯಗಳಿಗೆ ನೀಡುವ ಉದ್ದೇಶದಿಂದ ಕಳೆದ ಅಧಿವೇಶನದಲ್ಲಿ 'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ -2024' ಅನ್ನು ರೂಪಿಸಲಾಗಿತ್ತು.

Advertisement

ಇದನ್ನೂ ಓದಿ: Illegal Madrasa: ನೋಂದಣಿಯಾಗದೆ ಮಕ್ಕಳ ಶಿಕ್ಷಣ ನೀಡುವ ಮದರಸ ಚರ್ಚ್‌ಗಳಿಗೆ ಇನ್ನು ಮುಂದೆ ಬೀಳುತ್ತೆ ಭಾರೀ ದೊಡ್ಡ ಬೀಗ

1997ರಲ್ಲಿ ಈ ಕಾಯಿದೆಗೆ ತರಲಾಗಿದ್ದ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಈ ಹಂತದಲ್ಲಿ ಮತ್ತೆ ಕಾಯಿದೆಗೆ ತಿದ್ದುಪಡಿ ಮಾಡಬಹುದೇ ಎಂಬ ಕುರಿತು ಹೆಚ್ಚಿನ ವಿವರಣೆ ಮತ್ತು ಸ್ಪಷ್ಟನೆ ಅಗತ್ಯವಿದೆ ಎಂದು ರಾಜ್ಯಪಾಲರು ವಿಧೇಯಕ ವಾಪಸ್ ಕಳಿಸಿರುವುದಕ್ಕೆ ಕಾರಣ ನೀಡಿದ್ದಾರೆ.

Advertisement
Advertisement