ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Temple Bell: ನಿಮಗಿದು ಗೊತ್ತಾ! ದೇವಾಲಯದಲ್ಲಿರುವ ಗಂಟೆಯಲ್ಲಿದೆ ವಿಶಿಷ್ಟ ದೈವರಹಸ್ಯ!

Temple Bell: ಘಂಟೆ ಬಾರಿಸುವುದರಿಂದ ಓಂಕಾರ ಮಂತ್ರವನ್ನು ಪಠಿಸುವ ಸದ್ಗುಣ ಸಿಗುತ್ತದೆ ಎಂಬ ದೈವ ರಹಸ್ಯ ಅಡಗಿದೆ. ಓಂಕಾರ ಮಂತ್ರ ಅತ್ಯಂತ ಶಕ್ತಿ ಶಾಲಿ ಮಂತ್ರ
12:44 PM Jun 13, 2024 IST | ಕಾವ್ಯ ವಾಣಿ
UpdateAt: 12:44 PM Jun 13, 2024 IST
Advertisement

Temple Bell: ಹಿಂದೂ ಧರ್ಮ ಎಂದರೆ ನಮ್ಮ ಆಲೋಚನೆಗಳು ಪರಿಶುದ್ಧತೆ ಕಡೆ ವಾಲುತ್ತದೆ. ಯಾಕೆಂದರೆ ಹಿಂದೂ ದೇವಾಲಯದ ಶಕ್ತಿ ಅಂತದ್ದು. ಅಲ್ಲದೆ ದೇವಾಲಯಗಳಲ್ಲಿನ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಜನರು ಇಂದಿಗೂ ಅನುಸರಿಸುತ್ತಾರೆ. ಇನ್ನು ಹಿಂದೂ ದೇವಾಲಯದ ವಿಶೇಷತೆ ಬಗ್ಗೆ ಹೇಳುವುದಾದರೆ ಇಂಚು ಇಂಚಿನಲ್ಲೂ ಅದರದ್ದೇ ಆದ ಇತಿಹಾಸ ಇರುತ್ತದೆ. ಅಂತೆಯೇ ದೇವಾಲಯದ ಪ್ರವೇಶ ದ್ವಾರದಲ್ಲಿ ಗಂಟೆ ಇರುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ ಆ ಘಂಟೆಯನ್ನು (Temple Bell)  ಒಮ್ಮೆ ಬಡಿದು, ನಮಸ್ಕರಿಸುತ್ತೇವೆ. ನಂತರ ದೇವರ ಸುತ್ತ ಪ್ರದಕ್ಷಿಣೆಯನ್ನು ಹಾಕುವುದು ಸಹಜ.

Advertisement

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು – ಮರುಪರೀಕ್ಷೆ ಖಚಿತ !

ಹೇಳಲು ಹೋದರೆ ಹಿಂದೂ ಧರ್ಮದಲ್ಲಿ ದೇವಾಲಯದ ಬಗ್ಗೆ ಅನೇಕ ಅದ್ಭುತ ವಿಷಯಗಳಿವೆ. ಇವುಗಳಲ್ಲಿ ಒಂದು ದೇವಾಲಯದಲ್ಲಿ ಘಂಟೆ ಬಾರಿಸುವುದು. ಯಾವುದೇ ದೇವಸ್ಥಾನದಲ್ಲಾದರೂ ಖಂಡಿತ ಒಂದಾದರೂ ಘಂಟೆಯಾಗಿರುತ್ತದೆ. ಇನ್ನು ಕೆಲವು ದೇವಾಲಯದಲ್ಲಿ ಲೆಕ್ಕವಿಲ್ಲದಷ್ಟು ಘಂಟೆ ಇರುತ್ತದೆ.

Advertisement

ಮುಖ್ಯವಾಗಿ ಸೃಷ್ಟಿ ಪ್ರಾರಂಭವಾದಾಗ ಪ್ರತಿಧ್ವನಿಸಿದ ಶಬ್ದವೇ ಈ ಘಂಟೆ ಶಬ್ದ ಎನ್ನಲಾಗುತ್ತದೆ. ಘಂಟೆ ಧ್ವನಿಯು ಓಂಕಾರಂ ಶಬ್ದದಂತೆ ಕೇಳಿಸುತ್ತದೆ. ಘಂಟೆ ಬಾರಿಸುವುದರಿಂದ ಓಂಕಾರ ಮಂತ್ರವನ್ನು ಪಠಿಸುವ ಸದ್ಗುಣ ಸಿಗುತ್ತದೆ ಎಂಬ ದೈವ ರಹಸ್ಯ ಅಡಗಿದೆ. ಓಂಕಾರ ಮಂತ್ರ ಅತ್ಯಂತ ಶಕ್ತಿ ಶಾಲಿ ಮಂತ್ರ ಆಗಿದ್ದು, ಇದು ದೇವರ ಆಶೀರ್ವಾದ ಪಡೆಯಲು ಸಹಾಯ ಮಾಡುತ್ತದೆ.

ಇನ್ನು ನಂಬಿಕೆಗಳ ಪ್ರಕಾರ, ದೇವಾಲಯಕ್ಕೆ ಹೋಗುವಾಗ ನಾವು ಘಂಟೆ ಬಾರಿಸಿದರೆ, ಆ ಶಬ್ದದಿಂದ ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ತೆಗೆದುಹಾಕಲ್ಪಡುತ್ತವೆ ಎನ್ನಲಾಗಿದೆ. ಹೀಗೆ ದೇಹದಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿದಾಗ ನಾವು ಏಕಾಗ್ರತೆಯಿಂದ ದೇವರನ್ನು ಪೂಜಿಸುತ್ತೇವೆ.

ಮುಖ್ಯವಾಗಿ ಘಂಟೆಯ ಶಬ್ದವು ದೇವರಿಗೆ ತುಂಬಾ ಪ್ರಿಯವಾಗಿರುವುದು ಅಲ್ಲದೆ, ಘಂಟೆ ಬಾರಿಸುವ ಮೂಲಕ, ದೇಹ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಸಕಾರಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ. ಜೊತೆಗೆ ದೇವಾಲಯಕ್ಕೆ ಹೋಗುತ್ತಿದ್ದಂತೆ ಘಂಟೆ ಬಾರಿಸಿದ ತಕ್ಷಣ, ಮನಸಿನಲ್ಲಿರುವ ತಳಮಳ ಎಲ್ಲಾ ಹೋಗುತ್ತವೆ. ಹೌದು, ಒಟ್ಟಿನಲ್ಲಿ ಶಂಖ ಮತ್ತು ಗಂಟೆಗಳ ದೈವಿಕ ಶಬ್ದವು ನಮ್ಮ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಆಲೋಚನೆಯನ್ನು ತೆಗೆದುಹಾಕುತ್ತದೆ.

Actor Darshan Case: ನಟ ದರ್ಶನ್‌ ವಿರುದ್ಧ ರೌಡಿ ಶೀಟರ್‌ ತೆರೆಯುವ ಸಾಧ್ಯತೆ?

Advertisement
Advertisement