Telangana: ರೈತರಿಗೆ ಬಂಪರ್ ಗಿಫ್ಟ್, 2 ಲಕ್ಷದವರೆಗಿನ ಸಾಲಾ ಮನ್ನಾ ಮಾಡಿದ ಸರ್ಕಾರ- ವಿಧಾನಸಭೆಯಲ್ಲಿ ಮಹತ್ವದ ಘೋಷಣೆ!!
05:48 AM Jul 28, 2024 IST | ಸುದರ್ಶನ್
UpdateAt: 05:48 AM Jul 28, 2024 IST
Advertisement
Telangana: ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ತೆಲಂಗಾಣ ಕಾಂಗ್ರೆಸ್ ಸರಕಾರ ನಿರ್ಧರಿಸಿದ್ದು, ಈ ಕುರಿತು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದೆ.
Advertisement
ಹೌದು, ವಿಧಾನಸಭೆ ಚುನಾವಣೆಯಲ್ಲಿ(Assembly Election) ಭರ್ಜರಿ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಪಕ್ಷವು ಇದೀಗ ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ. 2 ಲಕ್ಷ ರೂಪಾಯಿ ವರೆಗಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.
ಇಷ್ಟೇ ಅಲ್ಲದೆ ಅಲ್ಲದೆ ಆಗಸ್ಟ್ 15ಕ್ಕೆ ಮೊದಲು ಒಂದೇ ಸುತ್ತಿನಲ್ಲಿ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗುವುದು. ಘೋಷಿಸಿದೆ. ಇದಕ್ಕಾಗಿ 31 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೆ ಎಂದು ತಿಳಿಸಿದೆ. ಜೊತೆಗೆ ರೈತರಿಗಾಗಿ ಭೀಮಾಫಸಲ್ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದೆ.
Advertisement
Advertisement