For the best experience, open
https://m.hosakannada.com
on your mobile browser.
Advertisement

Mobile Battery Life: ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದಿಯಾ?! ಈ ಟಿಪ್ಸ್ ಯೂಸ್ ಮಾಡಿದ್ರೆ ದಿನಗಟ್ಟಲೆ ಬಳಸ್ಬೋದು

10:48 AM Dec 11, 2023 IST | ಕಾವ್ಯ ವಾಣಿ
UpdateAt: 10:48 AM Dec 11, 2023 IST
mobile battery life  ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದಿಯಾ   ಈ ಟಿಪ್ಸ್ ಯೂಸ್ ಮಾಡಿದ್ರೆ ದಿನಗಟ್ಟಲೆ ಬಳಸ್ಬೋದು

Mobile Battery Life: ಸ್ಮಾರ್ಟ್ ಫೋನ್ ಬಳಕೆ ಅತೀ ಅಗತ್ಯ. ಆದರೆ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ (Tips For Mobile Battery Life) ಉಪಯೋಗಿಸುವಾಗ ಎಂಟೊಂಬತ್ತು ಗಂಟೆಗೆ ಬ್ಯಾಟರಿ ಖಾಲಿ ಆಗಿರುತ್ತೆ. ಸ್ವಲ್ಪ ಹೆಚ್ಚೇ ಉಪಯೋಗಿಸಿದರೆ ಇನ್ನೂ ಒಂದು ಗಂಟೆ ಮೊದಲೇ ಬ್ಯಾಟರಿ ಖಾಲಿ ಆಗುತ್ತದೆ. ಹಾಗಾದರೆ ಆಂಡ್ರಾಯ್ಡ್‌ ಫೋನುಗಳಲ್ಲಿ ಬ್ಯಾಟರಿ ಉಳಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

Advertisement

ಅದಕ್ಕಾಗಿ ಸೆಟ್ಟಿಂಗ್‌ನಲ್ಲಿ ಬ್ಯಾಟರಿ ಮತ್ತು ಡಿವೈಸ್‌ ಕೇರ್‌ ಆಯ್ಕೆ ಮಾಡಿ. ಅಲ್ಲಿನ ಬ್ಯಾಟರಿ ಆಯ್ಕೆಯಲ್ಲಿ ಪವರ್‌ ಸೇವ್‌ಗೆ ಚಾಲನೆ ನೀಡಿ. ಇದರಿಂದ ಲೊಕೇಶನ್‌ ಸೇವೆ, ನೆಟ್‌ವರ್ಕ್‌, ಸಿಂಕ್‌ ಮುಂತಾದ ಹಲವಾರು ಕೆಲಸಗಳನ್ನು ಒಂದೋ ನಿಲ್ಲಿಸುತ್ತದೆ ಅಥವಾ ಮಿತಗೊಳಿಸುತ್ತದೆ.

ಸಾಮಾನ್ಯವಾಗಿ ಸ್ಮಾರ್ಟ್‌ ಫೋನಿನ ಡಿಸ್ಪ್ಲೇ ದೊಡ್ಡದು ಆಗಿದ್ದು, ಸಾಕಷ್ಟು ಬ್ಯಾಟರಿಯನ್ನೂ ನುಂಗುತ್ತವೆ. ಹಾಗಾಗಿ ಸೆಟ್ಟಿಂಗ್‌ನಲ್ಲಿ ಡಿಸ್ಪ್ಲೇ ಬೆಳಕು ಕಡಿಮೆ ಮಾಡಿ. ಜೊತೆಗೆ ಆಟೊ ಬ್ರೈಟ್‌ನೆಸ್‌ ಸಹ ತೆಗೆದುಹಾಕಿ. ಯಾಕೆಂದರೆ ಆಟೊ ಬ್ರೈಟ್‌ನೆಸ್‌ ತನ್ನಷ್ಟಕ್ಕೇ ಬೆಳಕನ್ನು ಹೆಚ್ಚಿಸಿಕೊಳ್ಳುತ್ತದೆ.

Advertisement

ಇನ್ನು ಮೊಬೈಲಿನ ಲಾಕ್‌ ಸ್ಕ್ರೀನ್‌ನಲ್ಲಿ ದಿನಾಂಕ, ವಾರ ಮತ್ತಿತರ ವಿವರಗಳನ್ನು ತೋರಿಸುವ ವ್ಯವಸ್ಥೆ ಇದ್ದರೆ, ಈ ಪರದೆಯ ಬೆಳಕು ಅತಿ ಕಡಿಮೆ ಸಮಯಕ್ಕೆ ಆರುವಂತೆ ಇರಿಸಿಕೊಳ್ಳಿ. ಈ ಫೀಚರ್‌ ಅಗತ್ಯ ಇಲ್ಲದೇ ಇದ್ದಲ್ಲಿ ತೆಗೆದುಹಾಕಿ. ಇದಕ್ಕಾಗಿ ಡಿಸ್‌ಪ್ಲೇ ಆಯ್ಕೆಯಲ್ಲಿ ಲಾಕ್‌ ಸ್ಕ್ರೀನ್‌ನಲ್ಲಿ ಆಲ್‌ವೇಸ್‌ ಶೋ ಟೈಮ್‌ ಎಂಡ್‌ ಇನ್‌ಫೋ ಆಯ್ಕೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ. ಜೊತೆಗೆ ಹೆಚ್ಚು ಹೊತ್ತು ಪರದೆ ಆನ್‌ ಇದ್ದಷ್ಟೂ ಬ್ಯಾಟರಿ ಅಷ್ಟೇ ಬೇಗ ಖರ್ಚಾಗುತ್ತದೆ. ಹಾಗಾಗಿ ಡಿಸ್‌ಪ್ಲೇದಲ್ಲಿ ಸ್ಕ್ರೀನ್‌ ಟೈಮ್‌ಔಟ್‌ ಆಯ್ಕೆಯಲ್ಲಿ ಕೆಲವೇ ಸೆಕೆಂಡುಗಳಿಗೆ ಹೊಂದಿಸಿಕೊಳ್ಳಿ.

ಮುಖ್ಯವಾಗಿ ಫೋನ್‌ ಉಪಯೋಗವಾದೆ ಒಂದೆಡೆ ಇದೆ ಎಂದರೆ ಅದು ಸುಮ್ಮನೆ ಕುಳಿತಿದೆ ಎಂದು ಅರ್ಥವಲ್ಲ. ಆ ಉಪಕರಣದಿಂದ ಬೇಕಾದ, ಬೇಡದ ಸಂಕೇತಗಳೆಲ್ಲ ರವಾನೆಯಾಗುತ್ತಲೇ ಇರುತ್ತವೆ. ಹೌದು, ವೈಫೈ, ಬ್ಲೂಟೂತ್‌ ಮತ್ತು ಮೊಬೈಲ್‌ ಡೇಟಾಗಳನ್ನು ಬೇಕಾದಾಗಷ್ಟೇ ಉಪಯೋಗಿಸಿಕೊಳ್ಳಿ. ಇನ್ನು ಲೊಕೇಶನ್‌ ಸೇವೆ ಇಟ್ಟಷ್ಟೂ ಬ್ಯಾಟರಿ ಖಾಲಿಯಾಗುತ್ತದೆ. ಹಾಗಾಗಿ ಸೆಟ್ಟಿಂಗ್‌ನಲ್ಲಿ ಲೊಕೇಶನ್‌ಗೆ ಹೋಗಿ ಸ್ಟಾಪ್‌ ಗೂಗಲ್‌ ಫ್ರಂ ಟ್ರಾಕಿಂಗ್‌ ಯು ಆಯ್ಕೆ ಮಾಡಿ.

ಇನ್ನು ಅಪ್‌ಡೇಟ್‌, ರಿಫ್ರೆಶ್‌
ಅಗತ್ಯ ಇಲ್ಲದೇ ಇದ್ದಲ್ಲಿ ಆಫ್‌ ಮಾಡಿಡಿ. ಕಾರಣ, ನಾವು ಉಪಯೋಗಿಸದೆ ಇರುವಾಗಲೂ ಆಪ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಲೇ ಇರುತ್ತವೆ. ಇದರಿಂದ ಮೊಬೈಲಿನ ಡೇಟಾ ಮತ್ತು ಬ್ಯಾಟರಿ ಎರಡೂ ಖಾಲಿ ಆಗುತ್ತಿರುತ್ತದೆ.

ಇವೆಲ್ಲದರ ಜೊತೆಗೆ ಬ್ಯಾಟರಿ ಮತ್ತು ಡಿವೈಸ್‌ ಕೇರ್‌ ವಿಭಾಗದಲ್ಲಿ, ಮೋರ್‌ ಬ್ಯಾಟರ್‌ ಸೆಟ್ಟಿಂಗ್‌ಗೆ ಹೋಗಿ. ಅದರಲ್ಲಿ ಎನ್‌ಹ್ಯಾನ್ಸಡ್‌ ಪ್ರೊಸೆಸಿಂಗ್‌ ಆಯ್ಕೆಯನ್ನು ತೆಗೆದುಹಾಕಿ. ಕೀ ಒತ್ತುವಾಗ ಶಬ್ದ ಬರುತ್ತಿದ್ದರೆ, ಅದನ್ನು ತೆಗೆದು ಹಾಕಿ. ವೈಬ್ರೇಟರ್‌ ಸಹ ಬ್ಯಾಟರಿ ತಿನ್ನುತ್ತದೆ. ಅನಗತ್ಯ ಆಪ್‌ಗಳಿದ್ದರೆ ಅಳಿಸಿ. ಕಪ್ಪು ಪರದೆ ತೋರುವಂಥ ಡಾರ್ಕ್‌ ಥೀಮ್‌ ಇದ್ದರೆ, ಅದು ಬಳಸುವ ಬ್ಯಾಟರಿ ಕಡಿಮೆ. ಹಾಗಾಗಿ ಅದನ್ನೇ ಆಯ್ಕೆ ಮಾಡಿ.

ಇದನ್ನೂ ಓದಿ: KAS ಸೇರಿ ಗ್ರೂಪ್ 'ಎ' ಮತ್ತು ಗ್ರೂಪ್ ' ಬಿ'ಯ 276 ಹುದ್ದೆ ಭರ್ತಿಗೆ ಕ್ಷಣಗಣನೆ ಶುರು !!

Advertisement
Advertisement