For the best experience, open
https://m.hosakannada.com
on your mobile browser.
Advertisement

BCCI: T20 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾ - ಆಟಗಾರರಿಗೆ 125 ಕೋಟಿ ರೂ ಚೆಕ್ ನೀಡಿದ ಬಿಸಿಸಿಐ

BCCI: ದಕ್ಷಿಣ ಆಫ್ರಿಕಾ(South Africa) ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿ ಭರ್ಜರಿ ಗೆಲುವು ಸಾಧಿಸದ ಟೀಂ ಇಂಡಿಯಾಗೆ ಇದೀಗ BCCI ಭರ್ಜರಿ ಗಿಫ್ಟ್ ನೀಡಿದೆ.
07:59 AM Jul 05, 2024 IST | ಸುದರ್ಶನ್
UpdateAt: 07:59 AM Jul 05, 2024 IST
bcci  t20 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾ   ಆಟಗಾರರಿಗೆ 125 ಕೋಟಿ ರೂ ಚೆಕ್ ನೀಡಿದ ಬಿಸಿಸಿಐ
Advertisement

BCCI: ಟೀಂ ಇಂಡಿಯಾ(Team India) ತಂಡ ಕೋಟ್ಯಾಂತರ ಭಾರತೀಯರ ಕನಸನ್ನು ನನಸುಮಾಡುವ ಮೂಲಕ, ತನ್ನ ಕನಸಾದ ಐಸಿಸಿ ಟಿ20 ವಿಶ್ವಕಪ್(ICC T20 World Cup) ಗೆಲ್ಲೋದನ್ನು ನನಸಾಗಿಸಿಕೊಂಡಿದೆ. ಹೌದು, ಬಾರ್ಬಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ(South Africa) ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿ ಭರ್ಜರಿ ಗೆಲುವು ಸಾಧಿಸದ ಟೀಂ ಇಂಡಿಯಾಗೆ ಇದೀಗ BCCI ಭರ್ಜರಿ ಗಿಫ್ಟ್ ನೀಡಿದೆ.

Advertisement

Mangaluru: ಉಳಾಯಿಬೆಟ್ಟು ದರೋಡೆ ಪ್ರಕರಣ; ಕೇರಳದ ತಂಡ ಸೇರಿ ಹತ್ತು ಮಂದಿ ಬಂಧನ

ಟಿ20 ವಿಶ್ವಕಪ್‌ ಗೆದ್ದು ತವರಿಗೆ ಆಗಮಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಭರ್ಜರಿಯಾದ ಸ್ವಾಗತ ನೀಡಿದೆ. ಭಾರತಕ್ಕೆ ಆಗಮಿಸುತ್ತಿದ್ದಂತೆ ತಂಡವು ಪ್ರಧಾನಿ ಮೋದಿ(PM Modi)ಯನ್ನು ಭೇಟಿಯಾಗಿ ಸಂಭ್ರಮವನ್ನು ಹಂಚಿಕೊಂಡಿದೆ. ಬಳಿಕ ಗೆಲುವಿನ ಪರೇಡ್‌ ಹಾಗೂ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಭೂತಪೂರ್ವ ಸಾದನೆ ಗೈದ ಇಂಡಿಯಾದ ಆಟಗಾರರಿಗೆ BCCI 125 ಕೋಟಿಯ ಚೆಕ್‌ಅನ್ನು ವಿತರಿಸಿದೆ.

Advertisement

ಹೌದು, ಬಿಸಿಸಿಐ ತಾನು ಘೋಷಣೆ ಮಾಡಿದ್ದ 125 ಕೋಟಿ ರೂಪಾಯಿಯ ಬಹುಮಾನ ಮೊತ್ತದ ಚೆಕ್‌ಅನ್ನು ವಿಶ್ವಕಪ್‌ ವಿಜೇತ ತಂಡಕ್ಕೆ ಹಸ್ತಾಂತರ ಮಾಡಿತು. ಈ ವೇಳೆ ಬಿಸಿಸಿಐ ಅಧಿಕಾರಿಗಳು ಉಪಸ್ಥಿತರಿದ್ದರು. ಇದರ ಬಳಿಕ ಟ್ರೋಫಿ ಗೆದ್ದ ತಂಡದ ಆಟಗಾರರು ವಂದೇ ಮಾತರಂ ಹಾಡಿಗೆ ಇಡೀ ಮೈದಾನದ ಸುತ್ತ ವಿಕ್ಟರಿ ಲ್ಯಾಪ್‌ ಮಾಡಿತು. ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಜನಸ್ತೋಮ ವಿಜೇತ ತಂಡದ ಆಟಗಾರರ ಹೆಸರು ಕೂಗಿ ಸಂಭ್ರಮಿಸಿದರು.

ಭಾರತ ಗೆದ್ದದ್ದಕ್ಕೆ ದರ್ಶನ್ ಗೆ ಧನ್ಯವಾದ ತಿಳಿಸಿದ ನೆಟ್ಟಿಗರು:
ಭಾರತ ಕೊನೆಯದಾಗಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ. ಆ ವರ್ಷ ನಟ ದರ್ಶನ್ ಹೆಂಡತಿ ಮೇಲೆ ಕೈ ಮಾಡಿ ಜೈಲು ಸೇರಿದ್ದರು. ಅದಾದ 13 ವರ್ಷಗಳ ಬಳಿಕ 2024 ರಲ್ಲಿ ದರ್ಶನ್​ ಮತ್ತೆ ಜೈಲಿಗೆ ಹೋಗಿದ್ದಾರೆ. ಈಗ ಇಂಡಿಯಾ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ಹುಸಿ ನಂಬಿಕೆ.

Mangaluru: ಮಣ್ಣು ಕುಸಿತ ಪ್ರಕರಣ; ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ

Advertisement
Advertisement
Advertisement