For the best experience, open
https://m.hosakannada.com
on your mobile browser.
Advertisement

INDIA: ದೇಶಾದ್ಯಂತ 5 ಕೆಜಿ ಪಡಿತರ ವಿತರಣೆಯನ್ನು ದುಪ್ಪಟ್ಟು ಮಾಡುತ್ತೇವೆ - ಇಂಡಿಯಾ ಕೂಟ ಘೋಷಣೆ !!

INDIA: ಕೇಂದ್ರದಲ್ಲಿ ಇಂಡಿಯಾ(INDIA)ಕೂಟ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿರುವ ಉಚಿತ ಪಡಿತರ ಪ್ರಮಾಣವನ್ನು ದುಪ್ಪಟ್ಟು ಮಾಡುತ್ತೇವೆ
09:43 AM May 16, 2024 IST | ಸುದರ್ಶನ್
UpdateAt: 09:59 AM May 16, 2024 IST
india  ದೇಶಾದ್ಯಂತ 5 ಕೆಜಿ ಪಡಿತರ ವಿತರಣೆಯನ್ನು ದುಪ್ಪಟ್ಟು ಮಾಡುತ್ತೇವೆ    ಇಂಡಿಯಾ ಕೂಟ ಘೋಷಣೆ
Advertisement

INDIA: ದೇಶದಲ್ಲಿ ಲೋಕಸಭಾ ಚುನಾವಣೆ ಕೆಲ ರಾಜ್ಯಗಳಲ್ಲಿ ಇನ್ನೂ ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಮುಕ್ತಾಯವಾಗಿದೆ. ಈ ನಡುವೆ ಒಂದು ಕಾಲದಲ್ಲಿ ದೇಶವನ್ನಾಳಿ, ವೈಭವೀಕರಿಸಿದ್ದ ಕಾಂಗ್ರೆಸ್ ಇಂದು ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ. ಹಲವು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಗಿಟ್ಟಿಸಿಕೊಳ್ಳಲು ನೋಡುತ್ತಿದೆ. ಅಚ್ಚರಿ ಅಂದ್ರೆ ಚುನಾವಣೆಯ ಕೊನೇ ಕ್ಷಣದಲ್ಲೂ ಕಾಂಗ್ರೆಸ್(Congress) , 'ಇಂಡಿಯಾ' ಕೂಟದ ಪರವಾಗಿ ಹೊಸ ಭರವಸೆ ನೀಡಿದೆ.

Advertisement

ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಆಡಳಿತದ ಕುರಿತು ಮುಸ್ಲಿಂ ನಾಯಕರ ಅಭಿಪ್ರಾಯಗಳಿವು !!

Advertisement

ಹೌದು, ಕೇಂದ್ರದಲ್ಲಿ ಇಂಡಿಯಾ(INDIA)ಕೂಟ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿರುವ ಉಚಿತ ಪಡಿತರ ಪ್ರಮಾಣವನ್ನು ದುಪ್ಪಟ್ಟು ಮಾಡುತ್ತೇವೆ. ಅಂದರೆ 10 ಕೇಜಿ ಉಚಿತ ಪಡಿತರ ನೀಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjuna Kharge) ಬುಧವಾರ ಘೋಷಿಸಿದ್ದಾರೆ.

ಇದನ್ನೂ ಓದಿ: Mangaluru: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿನಿಯರ ಪ್ರಥಮ ಪಿಯುಸಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

ಈ ಕುರಿತು ಮಾತನಾಡಿದ ಅವರು ಮೋದಿ ಸರ್ಕಾರವು ಬಡವರಿಗೆ ಪ್ರತಿ ತಿಂಗಳು 5 ಕೆ.ಜಿ ಪಡಿತರ ನೀಡುತ್ತಿರುವುದನ್ನು ಪ್ರಸ್ತಾಪಿಸಿದೆ ಅವರು, 'ಕಾಂಗ್ರೆಸ್, ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿತು. ನೀವು ಏನೂ ಮಾಡಲಿಲ್ಲ. ಬಡವರಿಗೆ ನೀವು 5 ಕೆ.ಜಿ ಪಡಿತರ ನೀಡುತ್ತಿದ್ದೀರಿ, ನಾವು 10 ಕೆ.ಜಿ ನೀಡುತ್ತೇವೆ' ಎಂದು ತಿಳಿಸಿದರು. 'ನಾನು ಇದನ್ನು ಗ್ಯಾರಂಟಿಯಾಗಿ ಹೇಳುತ್ತಿದ್ದೇನೆ. ಏಕೆಂದರೆ, ನಾವು ಇದನ್ನು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜಾರಿಗೆ ತಂದಿದ್ದೇವೆ' ಎಂದು ಹೇಳಿದ್ದಾರೆ.

ಜೊತೆಗೆ ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಯುವಕರಿಗೆ ಉದ್ಯೋಗ, ಒಂದು ವರ್ಷದಲ್ಲಿ ಮಹಿಳೆಯರ ಖಾತೆಗೆ ಒಂದು ಲಕ್ಷ ರೂಪಾಯಿ, ಮತ್ತು ನಿರುದ್ಯೋಗಿ ಯುವಕರಿಗೆ ಅಪ್ರೆಂಟಿಶಿಪ್ ಖಾತ್ರಿಪಡಿಸುವ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ತಿಳಿಸಿದರು.

Advertisement
Advertisement
Advertisement