ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Guest Lecture: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ; ಜ.1 ರಿಂದ ಜಾರಿ- ಸರಕಾರದಿಂದ ಆದೇಶ!!!

08:56 AM Dec 30, 2023 IST | ಮಲ್ಲಿಕಾ ಪುತ್ರನ್
UpdateAt: 08:56 AM Dec 30, 2023 IST
Advertisement

Guest Lectures: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಜೊತೆಗೆ ರಾಜ್ಯ ಸರಕಾರ ಸಂಧಾನಕ್ಕೆ ಮುಂದಾಗಿದೆ. ತಮ್ಮ ಸೇವೆ ಖಾಯಂಗೊಳಿಸುವಂತೆ ರಾಜ್ಯವ್ಯಾಪಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಜ.1 ರಿಂದ ಅನ್ವಯವಾಗುವಂತೆ ಹಾಲಿ ಇರುವ ಗೌರವಧನವನ್ನು 5 ಸಾವಿರ ರೂ. ಗೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ.

Advertisement

ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ 26ಸಾವಿರದಿಂದ 31ಸಾವಿರ ರೂ.ವರೆಗೆ ಇದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಪ್ರಯೋಜನ ಸಮಾನವಾಗಿ ದೊರಕಲಿದೆ. ರಾಜ್ಯದ ಬೊಕ್ಕಸಕ್ಕೆ ಇದರಿಂದ ವಾರ್ಷಿಕ 55 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿದ ಬಳಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಹೇಳಿದರು.

ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವವರಿಗೆ ಭದ್ತ ಇಡಗಂಟು ನೀಡುವುದು, ವಾರ್ಷಿಕ 50ಸಾವಿರ ರೂ.ಗಳಂತೆ ಐದು ಲಕ್ಷ ರೂ. ಧನಸಹಾಯ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Advertisement

ಮುಂದುವರಿದು ಅವರು ಪ್ರ.ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಖಾಯಂತ ಸಿಬ್ಬಂದಿ ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಗೌರವಕ್ಕೆ ಚ್ಯುತಿ ಬರದಂತೆ ವರ್ತಿಸಬೇಕು. ಕೌನ್ಸಲಿಂಗ್‌ ಮೂಲಕ ಆಯ್ಕೆಯಾದವರನ್ನು ಕೆಲಸದ ಅವಧಿ ಕಡಿಮೆ ಎಂಬ ಕಾರಣಕ್ಕೆ ವಜಾ ಮಾಡುವಂತಿಲ್ಲ. 10 ತಿಂಗಳು ಗೌರವಧನ ಕಡ್ಡಾಯ. ಒಂದು ವೇತನ ಸಹಿತ ರಜೆ ತಿಂಗಳಲ್ಲಿ ಕಡ್ಡಾಯ ನೀಡಬೇಕೆಂದು ಹೇಳಲಾಗಿದೆ. ಒಮ್ಮೆ ದಾಖಲೆ ಸಲ್ಲಿಸಿದವರು ಪ್ರತಿವರ್ಷ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ ಅವರು ಹೊಸ ತಂತ್ರಜ್ಞಾನವನ್ನು ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

Related News

Advertisement
Advertisement