Bank Loan: ಬ್ಯಾಂಕ್ ನೌಕರರಿಗೆ ನೀಡುವ ಬಡ್ಡಿರಹಿತ ಸಾಲಕ್ಕೂ ತೆರಿಗೆ
Bank Loan: ಬ್ಯಾಂಕ್ ನೌಕರರು ಪಡೆಯುವ ಬಡ್ಡಿ ರಹಿತ ಸಾಲ ಸೌಲಭ್ಯ ಇಲ್ಲವೇ ರಿಯಾಯಿತಿ ದರದ ಸಾಲ ಸೌಲಭ್ಯ ವಿಶೇಷ ಸವಲತ್ತಾಗಿದೆ. ಇದಕ್ಕೆ ಆದಾಯ ತೆರಿಗೆ ಕಾಯಿದೆ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತ ಅವರಿದ್ದ ವಿಭಾಗೀಯ ಪೀಠ, ಎಸ್‌ಬಿಐ ಗೊತ್ತುಪಡಿಸಿರುವ ಬಡ್ಡಿ ದರವನ್ನು ಅಗತ್ಯ ಮಾನದಂಡ ಎಂದು ಪರಿಗಣಿಸುವುದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ ಎಂದಿದೆ.
ಇದನ್ನೂ ಓದಿ: Karnataka Weather: ವರುಣನ ಕೃಪೆ: 6 ಜಿಲ್ಲೆಗೆ ಯೆಲ್ಲೋ ಅಲರ್ಟ್
''ವಾಣಿಜ್ಯ ತೆರಿಗೆ ಕಾನೂನುಗಳು ತುಂಬ ಸೂಕ್ಷ್ಮ ಹಾಗೂ ಸಂಕೀರ್ಣವಾಗಿರುತ್ತವೆ. ಇವುಗಳ ದುರ್ಬಳಕೆಯ ಸಾಧ್ಯತೆ ತಡೆಯುವ ಖಾತ್ರಿಯನ್ನು ಹೆಚ್ಚು ಮಾಡುವ ಶಾಸನಗಳ
ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ,'' ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: Devegowda: ದೇವೇಗೌಡ, ಕುಮಾರಸ್ವಾಮಿ ಹೈಕೋರ್ಟ್ ನೋಟಿಸ್
ಸಂಕೀರ್ಣ ಸಮಸ್ಯೆಯನ್ನು ಒಂದೇ ಸೂತ್ರದಲ್ಲಿ ಬಗೆಹರಿಸಲಾಗಿದೆ. ಇದಕ್ಕೆ ಕೋರ್ಟ್ ಸಮ್ಮತಿ ನೀಡಬೇಕಾಗುತ್ತದೆ ಎಂದು ಪೀಠ ಹೇಳಿದೆ.ಈ ಕುರಿತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಬ್ಯಾಂಕ್‌ಗಳು ತಮ್ಮ ನೌಕರರಿಗೆ ಒದಗಿಸುವ ಬಡ್ಡಿ ರಹಿತ ಸಾಲ ಸೌಲಭ್ಯ ಇಲ್ಲವೇ ರಿಯಾಯಿತಿ ಬಡ್ಡಿ ದರದ ಸೌಲಭ್ಯವನ್ನು ವಿಶೇಷ ಅನುಕೂಲ ಎಂದು ಪರಿಗಣಿಸಿ, ಅವು ವಿಧಿಸುವ ಬಡ್ಡಿ ದರವು ಎಸ್‌ಬಿಐ ನಿಗದಿಪಡಿಸಿರುವ ಸಾಲದ ಬಡ್ಡಿ ದರಕ್ಕಿಂತಲೂ ಕಡಿಮೆ ಇದ್ದರೆ ಅವುಗಳಿಗೆ ತೆರಿಗೆ ವಿಧಿಸಬೇಕಾಗುತ್ತದೆ ಎಂಬುದು ನಿಯಮವಾಗಿದೆ