For the best experience, open
https://m.hosakannada.com
on your mobile browser.
Advertisement

T20 World Cup: ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು! : ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್? : ಇಲ್ಲಿ ನೋಡಿ

T20 World Cup: ಬಿಸಿಸಿಐ ಈ ಉನ್ನತ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ
01:12 PM May 16, 2024 IST | ಸುದರ್ಶನ್
UpdateAt: 01:14 PM May 16, 2024 IST
t20 world cup  ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು    ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್    ಇಲ್ಲಿ ನೋಡಿ
Advertisement

T20 World Cup : ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ(Indian Men Cricket Team) ಹೊಸ ಮುಖ್ಯ ಕೋಚ್ ಅಯ್ಕೆ ಮಾಡಲು ಬಿಸಿಸಿಐ(BCCI) ಪ್ರಕ್ರಿಯೆ ಆರಂಭಿಸಿದೆ. ಬಿಸಿಸಿಐ ಈ ಉನ್ನತ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಈ ತಿಂಗಳ 27 ರೊಳಗೆ ತಮ್ಮ ಅರ್ಜಿಗಳನ್ನು ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ: Astro Tips: ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯ ಬಾಗಿಲು, ಕಿಟಕಿ ಮುಚ್ಚಬೇಡಿ! ಬಡವರಾಗ್ತೀರಾ ಪಕ್ಕಾ

ಆಯ್ಕೆಯಾದ ಹೊಸ ಮುಖ್ಯ ಕೋಚ್‌ನ ಅಧಿಕಾರಾವಧಿಯು ಮೂರೂವರೆ ವರ್ಷಗಳವರೆಗೆ ಇರುತ್ತದೆ (ಅಂದರೆ 1 ಜುಲೈ 2024 ರಿಂದ 31 ಡಿಸೆಂಬರ್ 2027 ರವರೆಗೆ). ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್( Rahul Dravid) ಅವರ ಅಧಿಕಾರಾವಧಿ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ ಕೊನೆಗೊಂಡಿತು.

Advertisement

ಇದನ್ನೂ ಓದಿ: Relationship Tips: ನಿಮ್ಮ ಸಂಗಾತಿ ನಿಮಗೆ ಮೋಸ ಮಾಡ್ತಾ ಇದ್ದಾಳ ಅಂತ ಅನುಮಾನನ? ಹೀಗೆ ತಿಳಿಯಿರಿ

ಈ ಬಾರಿ ವಿದೇಶಿ ಕೋಚ್( Foregin Coach) ಪೀಲ್ಡಿಗೆ ಬರಲು ಬಿಸಿಸಿಐ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಜಯ್ ಶಾ ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫೈಮಿಂಗ್ ಹೆಸರನ್ನು ಬಿಸಿಸಿಐ ಪರಿಗಣಿಸುತ್ತಿದೆ ಎಂಬ ಸುದ್ದಿ ಬಂದಾಗ ಮತ್ತೊಂದು ಹೆಸರೂ ಮುನ್ನೆಲೆಗೆ ಬಂದಿದೆ.

ಆಸ್ಟ್ರೇಲಿಯಾದ ದಿಗ್ಗಜ ನಾಯಕ ರಿಕಿ ಪಾಂಟಿಂಗ್ ಕೂಡ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆ ಎಂಬ ಊಹಾಪೋಹಗಳಿವೆ. ಇವರಿಬ್ಬರೂ ಪ್ರಸ್ತುತ ಐಪಿಎಲ್(IPL Main coach) ತಂಡಗಳ ಮುಖ್ಯ ಕೋಚ್‌ಗಳಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ(Chennai super kings) ತರಬೇತುದಾರರಾಗಿ, ಸ್ಟೀಫನ್ ಪ್ಲೆಮಿಂಗ್ ತಂಡವನ್ನು ಐದು ಬಾರಿ ವಿಜೇತರನ್ನಾಗಿ ಮಾಡಲು ಶ್ರಮಿಸಿದರು, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ (ಪ್ರಸ್ತುತ) ತರಬೇತುದಾರರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.

Advertisement
Advertisement
Advertisement