ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

T-20 World Cup: ಇಂದು ಇಂಡೋ ಪಾಕ್‌ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭ

T20 World Cup: ಇಂದು (ಭಾನುವಾರ) ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಕ್ಕೆ ಉಭಯ ತಂಡಗಳ ಮಧ್ಯೆ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ ಪಾಕ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
09:08 AM Jun 09, 2024 IST | ಸುದರ್ಶನ್
UpdateAt: 09:08 AM Jun 09, 2024 IST
Image Credit: Indian Express
Advertisement

T20 World Cup: ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ರಣರೋಚಕ ಟಿ20 ವಿಶ್ವಕಪ್ (T20 World Cup) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

Advertisement

ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕತೆ ಮಾಡಬಹುದೇ ಬೇಡವೇ? ಹೈಕೋರ್ಟ್ ಕೊಡ್ತು ಅಚ್ಚರಿ ತೀರ್ಪು !

ಇಂದು (ಭಾನುವಾರ) ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಕ್ಕೆ ಉಭಯ ತಂಡಗಳ ಮಧ್ಯೆ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ ಪಾಕ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಕದನ ಕುತೂಹಲಿ ಕ್ರಿಕೆಟ್ ಅಭಿಮಾನಿಗಳು ಪಂದ್ಯದ ರೋಚಕತೆಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕ್ರಿಕೆಟ್‌ ಆಗಲೀ ಇನ್ಯಾವುದೇ ಆಟದ ಸಮರದಲ್ಲಿ ಈ ತೀವ್ರತೆ ಕಾಣಲು ಸಾಧ್ಯವೇ ಇಲ್ಲವೇನೋ. ಆದರೆ ಭಾರತ ಮತ್ತು ಪಾಕ್ ಪಂದ್ಯ ವಿಭಿನ್ನ. ಇವರ ಮಧ್ಯೆ ನಡೆಯುವ ಪಂದ್ಯವನ್ನು ಯುದ್ಧದ ಥರ ಭಾವಿಸಲಾಗುತ್ತದೆ.

Advertisement

ಈ ಸಾರಿಯ 2024ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಇವತ್ತು ಭಾರತದ ಜೊತೆ ಫೈಟ್ ಗೆ ಇಳಿದಿದೆ. ಅದು ಟೀಂ ಇಂಡಿಯಾ ವಿರುದ್ಧ ಪುಟಿದೇಳುವ ತವಕದಲ್ಲಿದೆ. ಉಳಿದಂತೆ ಐರ್ಲೆಂಡ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ತಂಡವು ಪಾಕ್ ತಂಡದ ವಿರುದ್ಧ ಗೆದ್ದು ಸೂಪರ್ 8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಆದ್ರೆ ಪಾಕ್‌ ಕೂಡಾ ಸೂಪರ್ 8 ರ ಸ್ಥಾನ ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಹೈ ವೋಲ್ಟೇಜ್ ಪoದ್ಯಕ್ಕೆ ಮಳೆ ಭೀತಿ:
ಈಗ ಲಭ್ಯವಿರುವ ಮಳೆಯ ಮುನ್ಸೂಚನೆಯ ಪ್ರಕಾರ ಪಂದ್ಯ ನಡೆಯುವ ನ್ಯೂಯಾರ್ಕ್ ನಲ್ಲಿ (New york) ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮಳೆಯಿಂದ ಇಂದಿನ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ.

2007ರಿಂದ ಸೋಲನ್ನೇ ನೋಡದ ಭಾರತ:
2007ರಿಂದ ಈವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕ್ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪoದ್ಯಕ್ಕೆ ಐಸಿಸ್‌ ಉಗ್ರರಿಂದ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಹಾಗೂ ತಂಡಗಳ ಆಟಗಾರರಿಗೆ ನ್ಯೂಯಾರ್ಕ್‌ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಮಾದರಿಯಲ್ಲೇ ಅಮೆರಿಕದ ಎಫ್‌ಬಿಐ ಸೇರಿದಂತೆ ಇತರ ಕೆಲ ಭದ್ರತಾ ಏಜೆನ್ಸಿಗಳು ತಮ್ಮ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.

7th Pay Commission ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಘೋಷಣೆ !!

Advertisement
Advertisement