For the best experience, open
https://m.hosakannada.com
on your mobile browser.
Advertisement

Suryakumar Yadav: ಕಾಪು ಮಾರಿಕಾಂಬೆ ದರ್ಶನದ ಬೆನ್ನಲ್ಲೇ ಸೂರ್ಯಕುಮಾರ್ ಗೆ ಒಲಿಯಿತು ಅದೃಷ್ಟ, ಅರ್ಚಕರು ಹೇಳಿದಂತೆ ದಕ್ಕಿತು ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ !!

09:04 AM Jul 20, 2024 IST | ಸುದರ್ಶನ್
UpdateAt: 09:04 AM Jul 20, 2024 IST
suryakumar yadav  ಕಾಪು ಮಾರಿಕಾಂಬೆ ದರ್ಶನದ ಬೆನ್ನಲ್ಲೇ ಸೂರ್ಯಕುಮಾರ್ ಗೆ ಒಲಿಯಿತು ಅದೃಷ್ಟ  ಅರ್ಚಕರು ಹೇಳಿದಂತೆ ದಕ್ಕಿತು ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ
Advertisement

Suryakumar Yadav: T20 ವಿಶ್ವ ಕಪ್ ನಲ್ಲಿ ಭರ್ಜರಿ ಜಯಗಳಿಸುವ ಮೂಲಕ ಭಾರತ ತಂಡವು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಸೆಯನ್ನು ಈಡೇರಿಸಿ, ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಈ ಕಪ್ ಗೆಲ್ಲುವಲ್ಲಿ ಸೂರ್ಯ ಕುಮಾರ್(Surya Kumar Yadav) ಯಾದವ್ ಪಾತ್ರ ತುಂಬಾ ಮುಖ್ಯವಾದುದು. ಈ ಮೂಲಕ ಸೂರ್ಯ ಕುಮಾರ್ ಅಭಿಮಾನಿಗಳ, ಭಾರತೀಯರ ಮನ ಗೆದ್ದಿದ್ದು, ಮೊನ್ನೆ ಮೊನ್ನೆ ತಾನೆ ನಮ್ಮ ಉಡುಪಿಯ ಕಾಪುಗೆ ಬಂದು ಮಾರಿಕಾಂಬೆಯ ದರ್ಶನ ಪಡೆದು, ಆಶೀರ್ವಾದವನ್ನೂ ಪಡೆದಿದ್ದಾರೆ. ಈ ಬೆನ್ನಲ್ಲೇ ಸೂರ್ಯ ಕುಮಾರ್ ಗೆ ಅದೃಷ್ಟವೊಂದು ಖುಲಾಯಿಸಿದೆ.

Advertisement

Pradeep Eshwar: ಸದನದಲ್ಲಿ ಹುಚ್ಚನಂತೆ ವರ್ತಿಸಿದ ಶಾಸಕ ಪ್ರದೀಪ್ ಈಶ್ವರ್ – ಇತರರು ಬಂದು ತಡೆದರೂ ನಿಲ್ಲಲಿಲ್ಲ ಅಬ್ಬರ !!

ಹೌದು, ಕೆಲದಿನಗಳ ಹಿಂದಷ್ಟೇ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿ(Udupi) ಯ ಕಾಪುನಲ್ಲಿರುವ(Kaapu) ಹೊಸ ಮಾರಿಗುಡಿ(Hosamarigudi) ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಈ ಬೆನ್ನಲ್ಲೇ ಮುಂಬರುವ ಜುಲೈ 27ರಿಂದ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗೆ ಭಾರತದ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕರಾಗಿ ನೇಮಕವಾಗಿದ್ದಾರೆ. ಅಭಿಮಾನಿಗಳು ಇದು ಕಾಪು ಮಾರಿಕಾಂಬೆಯ ಪವಾಡ ಎಂದು ಬಣ್ಣಿಸುತ್ತಿದ್ದಾರೆ.

Advertisement

ಯಾಕೆಂದರೆ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ಅರ್ಚಕರು ಭೇಟಿ ವೇಳೆ, ಸೂರ್ಯಕುಮಾರ್ ಅವರಿಗೆ ಮತ್ತೊಮ್ಮೆ ಕಾಪುವಿಗೆ ಬರುವಾಗ ಟೀಂ ಇಂಡಿಯಾ ನಾಯಕರಾಗಿ ಬರುವಂತಾಗಲಿ ಎಂದು ಹಾರೈಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೂರ್ಯ, "ತಂಡದ ನಾಯಕನಾಗುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ದೇಶಕ್ಕಾಗಿ ಆಡುವುದಷ್ಟೇ ನಮ್ಮ ಗುರಿ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂದು ಹೇಳಿದ್ದರು. ಆದರೀಗ ಅಚ್ಚರಿಯೋ, ಕಾಕತಾಳಿಯವೋ ಅಥವಾ ಪಾವಾಡ ಸದೃಶ್ಯವೋ ಎಂಬಂತೆ ಸೂರ್ಯಕುಮಾರ್ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಇದು ಕ್ಷೇತ್ರದ ಮಹಿಮೆ ಎಂದು ಅಭಿಮಾನಿಗಳು ಮಾತನಾಡಲಾರಂಭಿಸಿದ್ದಾರೆ.

Uttara Pradesh ಹೀನಾಯ ಸೋಲಿಗೆ ಕೊನೆಗೂ ಕಾರಣ ಹುಡುಕಿದ ಬಿಜೆಪಿ !! ಏನಿದೆ ಹೈಕಮಾಂಡ್ ಕೈ ಸೇರಿದ ಆ ರಹಸ್ಯ ವರದಿಯಲ್ಲಿ ?!

Advertisement
Advertisement
Advertisement