For the best experience, open
https://m.hosakannada.com
on your mobile browser.
Advertisement

Parliment Election: ಚುನಾವಣೆಗೂ ಮುನ್ನವೆ MP ಆದ ಸೂರತ್'ನ ಬಿಜೆಪಿ ಅಭ್ಯರ್ಥಿ !!

Parliament Election: ಮೂಲಕ ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಿಂದ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದು ಗೆಲುವಿನ ಖಾತೆ ತೆರೆದಿದೆ.
10:44 PM Apr 22, 2024 IST | ಸುದರ್ಶನ್
UpdateAt: 10:46 PM Apr 22, 2024 IST
parliment  election  ಚುನಾವಣೆಗೂ ಮುನ್ನವೆ mp ಆದ ಸೂರತ್ ನ ಬಿಜೆಪಿ ಅಭ್ಯರ್ಥಿ
Advertisement

Parliment Election: ಗುಜರಾತಿನ(Gujarath) ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್(BJP Candidate Mukesh Dalal) ಅವರು ಚುನಾವಣೆ ಎದುರಿಸದೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಂದರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಿಂದ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದು ಗೆಲುವಿನ ಖಾತೆ ತೆರೆದಿದೆ.

Advertisement

ಇದನ್ನೂ ಓದಿ:  Hubballi: ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ - ಮುಸ್ಲಿಂ ಯುವಕನಿಂದ ಹಿಂದೂ ಯುವತಿ ಮೇಲೆ ಹಲ್ಲೆ !!

ಹೌದು, ಲೋಕಸಭಾ ಚುನಾವಣೆಯ(Parliament Election) ಮೊದಲ ಹಂತದ ಮತದಾನ ಮಾತ್ರ ಮುಗಿದಿದೆ. ಇನ್ನೂ ಮುಂದೆ ಆರು ಹಂತದ ಚುನಾವಣೆ ಬಾಕಿಯಿದೆ. ಆದರೂ, ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ದೇಶದ ಮೊಟ್ಟ ಮೊದಲ ಸೀಟ್ ಅನ್ನು ಗೆದ್ದಿದೆ. ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭಾ(Surath Lokasabha) ಕ್ಷೇತ್ರವನ್ನು ಬಿಜೆಪಿ ಗೆದ್ದಿದ್ದು, ಅವಿರೋಧವಾಗಿ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಆಯ್ಕೆಯಾಗಿದ್ದಾರೆ

Advertisement

ಇದನ್ನೂ ಓದಿ:  Vastu Tips: ಯಾವುದೇ ಕಾರಣಕ್ಕೂ ಈ ಪಾತ್ರೆಯನ್ನು ಉಲ್ಟಾ ಪಲ್ಟಾ ಇಡಬೇಡಿ, ಕಷ್ಟಗಳು ಒಕ್ಕರಿಸುತ್ತೆ!

ಅಷ್ಟಕ್ಕೂ ನಡೆದದ್ದೇನು?

ಸೂರತ್ ಕ್ಷೇತ್ರದಿಂದ ಒಟ್ಟು 9 ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಈ ಬೈಕಿ ಬಿಜೆಪಿಯಿಂದ ಮುಕೇಶ್ ದಲಾಲ್ ಹಾಗೂ ಕಾಂಗ್ರೆಸ್‌ನಿಂದ ನಿಲೇಶ್ ಕುಂಭಾನಿ ಪ್ರಮುಖರಾಗಿದ್ದರು. ಇವರಿಬ್ಬರ ನಡುವೆ ನೇರಾನೇರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಅಲ್ಲದೆ ನಂತರ ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಅಂದಹಾಗೆ ಬಿಜೆಪಿಯ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವಿನ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಕೇಂದ್ರ ಚುನಾವಣಾಧಿಕಾರಿಗಳು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

Advertisement
Advertisement
Advertisement