For the best experience, open
https://m.hosakannada.com
on your mobile browser.
Advertisement

Hassan: ಸಲಿಂಗ ಲೈಂಗಿಕ ಕಿರುಕುಳ ಆರೋಪ - ಸಂತ್ರಸ್ತನ ವಿರುದ್ಧವೇ ದೂರು ದಾಖಲಿಸಿದ ಸೂರಜ್ ರೇವಣ್ಣ !!

Hassan: ಪ್ರಜ್ವಲ್ ರೇವಣ್ಣ(Prajwal Revanna) ಬೆನ್ನಲ್ಲೇ ಅವರ ಅಣ್ಣ ಸೂರಜ್ ರೇವಣ್ಣ(Suraj Revanna) ನ ವಿರುದ್ದ ಸಲಿಂಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
11:01 AM Jun 22, 2024 IST | ಸುದರ್ಶನ್
UpdateAt: 11:01 AM Jun 22, 2024 IST
hassan  ಸಲಿಂಗ ಲೈಂಗಿಕ ಕಿರುಕುಳ ಆರೋಪ   ಸಂತ್ರಸ್ತನ ವಿರುದ್ಧವೇ ದೂರು ದಾಖಲಿಸಿದ ಸೂರಜ್ ರೇವಣ್ಣ
Advertisement

Hassan: ಪ್ರಜ್ವಲ್ ರೇವಣ್ಣ(Prajwal Revanna) ಬೆನ್ನಲ್ಲೇ ಅವರ ಅಣ್ಣ ಸೂರಜ್ ರೇವಣ್ಣ(Suraj Revanna) ನ ವಿರುದ್ದ ಸಲಿಂಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಇದೀಗ ಸೂರಜ್ ರೇವಣ್ಣ ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದಾರೆ ಎನ್ನಲಾಗಿದೆ.

Advertisement

NEET Paper Leak Case: ನೀಟ್‌ ಹಗರಣ, ಬಿಗ್‌ ಅಪ್ಡೇಟ್‌; 5 ಮಂದಿಯ ಬಂಧನ

ಹೌದು, ಅರಕಲಗೂಡು(Arakalagud) ಮೂಲದ ಸಂತ್ರಸ್ತ ಯುವಕ ಬೆಂಗಳೂರಿನಲ್ಲಿ ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ. ಯುವಕ ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿ, ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಎಂಎಲ್‌ಸಿ ಅವರ ಆಪ್ತ ಶಿವಕುಮಾರ್ (Shivakumar) ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.

Advertisement

ಎಂಎಲ್​ಸಿ ಸೂರಜ್ ರೇವಣ್ಣ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ ಮಾಡಲಾಗುತ್ತಿದ್ದು, 5 ಕೋಟಿ ಹಣ ನೀಡಲು ಸೂರಜ್​ ರೇವಣ್ಣಗೆ ಬೆದರಿಕೆ ಹಾಕಲಾಗಿದೆ. ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುವ ಬ್ಲಾಕ್​ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಘಟನೆ?
ಮಾಜಿ ಸಚಿವ ಹೆಚ್‌ ಡಿ ರೇವಣ್ಣ(H D Revanna) ಹಿರಿಯ ಪುತ್ರ, ವಿಧಾನಪರಿಷತ್ ಸದಸ್ಯ, ಸೂರಜ್(Suraj Revanna) ನಿಂದ ಹಾಸನ(Hassan) ಜಿಲ್ಲೆ ಅರಕಲಗೂಡು ಮೂಲದ ತಮ್ಮದೇ ಪಕ್ಷದ ಜೆಡಿಎಸ್ ಕಾರ್ಯಕರ್ತನಿಗೆ ಜೂನ್ 16ರಂದು ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಯಲ್ಲಿ ಸೂರಜ್, ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ. ಈ ವಿಲಕ್ಷಣ ಆರೋಪದಿಂದ ಮತ್ತೆ ರೇವಣ್ಣ ಕುಟುಂಬ ಮುಜುಗರಕ್ಕೀಡಾಗಿದೆ. ಹಾಸನದಲ್ಲಿ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ.

Suraj Revanna: ಪ್ರಜ್ವಲ್ ಬೆನ್ನಲ್ಲೇ ಸೂರಜ್ ರೇವಣ್ಣನಿಂದ JDS ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ಕಿರುಕುಳ - ದೂರು ದಾಖಲು !!

Advertisement
Advertisement
Advertisement