ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Supreme Court Dowry Case: ಗಂಡಸರೇ ಎಚ್ಚರಿಕೆ : ನಿಮ್ಮ ಹೆಂಡತಿಯ ವರದಕ್ಷಿಣೆ ಹಣದಲ್ಲಿ ನಿಮಗೆ ಯಾವುದೇ ಹಕ್ಕಿರುವುದಿಲ್ಲ : ಸುಪ್ರೀಂ ಕೋರ್ಟ್

Supreme Court Dowry Case: ಪತ್ನಿಯ ವರದಕ್ಷಿಣೆಯ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ,
06:55 AM Apr 29, 2024 IST | ಸುದರ್ಶನ್
UpdateAt: 07:08 AM Apr 29, 2024 IST

Supreme Court Dowry Case : ಪತ್ನಿಯ ವರದಕ್ಷಿಣೆಯ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ, ಒಂದು ವೇಳೆ ಸಂಕಷ್ಟದ ಸಮಯದಲ್ಲಿ ಅದನ್ನು ಬಳಸಿದರೂ ಅದನ್ನು ಹೆಂಡತಿಗೆ ಹಿಂತಿರುಗಿಸಬೇಕು, ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಪೀಠ ಮಹಿಳೆ ಕಳೆದುಕೊಂಡ ಚಿನ್ನಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪತಿಗೆ ಗುರುವಾರ ಆದೇಶಿಸಿದೆ.

Advertisement

ಇದನ್ನೂ ಓದಿ:  H D Kumarswamy: ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ - ತಪ್ಪು ಮಾಡಿದವನನ್ನು ಕ್ಷಮಿಸಲ್ಲ ಎಂದ ಎಚ್ ಡಿ ಕುಮಾರಸ್ವಾಮಿ !!

ಇಷ್ಟಕ್ಕೂ ನಡೆದಿರುವ ಘಟನೆ ಏನೆಂದರೆ, ಕೇರಳದ ಮಹಿಳೆಯೊಬ್ಬರು ತಮ್ಮ ತಂದೆ- ತಾಯಿ ಕೊಟ್ಟ 89 ಗ್ರಾಂ ಚಿನ್ನವನ್ನು ಪತಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

Advertisement

ಇದನ್ನೂ ಓದಿ:  Science Facts: ಈ ಆಕಾರದ ಮುಖ ಇದ್ದವರಿಗೆ ಅಹಂ ಇರೋದೇ ಇಲ್ವಂತೆ! ಇಲ್ಲಿದೆ ಸೈನ್ಸ್ ಫ್ಯಾಕ್ಟ್

ಮದುವೆಯಾದ ಮೊದಲ ರಾತ್ರಿಯೇ ಪತಿ ತನ್ನ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ತನ್ನ ತಾಯಿಗೆ ಹಸ್ತಾಂತರಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಚಿನ್ನವನ್ನು ಈಗಾಗಲೇ ತಮ್ಮ ಕುಟುಂಬದ ಸಾಲ ತೀರಿಸಲು ಬಳಸಲಾಗಿದೆ ಎಂದು ಅವರು ಹೇಳಿದರು. 2011ರಲ್ಲಿ ಆಕೆಯ ಪತಿ ಮತ್ತು ಚಿಕ್ಕಮ್ಮ ಚಿನ್ನದ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದರು ಎಂದು ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪತಿ ಮಾಡಿದ್ದು ತಪ್ಪು ಎಂದು ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ.

ಇದರೊಂದಿಗೆ ಪತಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಪತಿ ಪರ ತೀರ್ಪು ನೀಡಿದೆ. ತನ್ನ ಆಭರಣಗಳನ್ನು ಪತಿ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿಲ್ಲ ಎಂದು ಪತ್ನಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದರೊಂದಿಗೆ ಪತ್ನಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಈ ಆದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು.

Advertisement
Advertisement
Next Article