For the best experience, open
https://m.hosakannada.com
on your mobile browser.
Advertisement

Power TV: ಹೈಕೋರ್ಟ್ ನೀಡಿದ್ದ ಪವರ್ ಟಿ ವಿ ನಿರ್ಭಂಧಕ್ಕೆ ಸುಪ್ರೀಂ ಕೋರ್ಟ್ ತಡೆ - ಇದು ರಾಜಕೀಯ ದ್ವೇಷ ಎಂದ ನ್ಯಾಯಮೂರ್ತಿ

Power TV: ಕೆಲವು ದಿನಗಳ ಹಿಂದೆ ಪವರ್ ಟಿವಿ(Power TV) ಪ್ರಸಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ ಹೇರಿತ್ತು.
07:39 AM Jul 13, 2024 IST | ಸುದರ್ಶನ್
UpdateAt: 07:39 AM Jul 13, 2024 IST
power tv  ಹೈಕೋರ್ಟ್ ನೀಡಿದ್ದ ಪವರ್ ಟಿ ವಿ ನಿರ್ಭಂಧಕ್ಕೆ ಸುಪ್ರೀಂ ಕೋರ್ಟ್ ತಡೆ   ಇದು ರಾಜಕೀಯ ದ್ವೇಷ ಎಂದ ನ್ಯಾಯಮೂರ್ತಿ
Advertisement

Power TV: ಕೆಲವು ದಿನಗಳ ಹಿಂದೆ ಪವರ್ ಟಿವಿ(Power TV) ಪ್ರಸಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ ಹೇರಿತ್ತು. ಇದೀಗ ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೀಗಾಗಿ, ಪವರ್ ಟಿವಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.

Advertisement

ಹೌದು, ಸೂಕ್ತ ಪರವಾನಗಿ ಇಲ್ಲದೆ ಕನ್ನಡದ ಸುದ್ದಿ ವಾಹಿನಿಯಾದ ಪವರ್ ಟಿವಿ ಕಾರ್ಯ ನಿರ್ವಹಿಸುತ್ತಿತ್ತು ಅನ್ನೋ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್‌ ಪ್ರಸಾರ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಿ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದೀಗ ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌(Supreme Court) ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್(CJI Chandrachud) ಸಾರಥ್ಯದ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸುವುದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ಅಲ್ಲದೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸದಿದ್ದರೆ ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Advertisement

ಅಂದಹಾಗೆ ಜುಲೈ 9 ರಂದು ಈ ಪ್ರಕರಣದ ಮುಂದ ನ ವಿಚಾರಣೆ ನಡೆಸೋದಾಗಿ ಸುಪ್ರೀಂ ಕೋರ್ಟ್‌ ಹೇಳಿದ್ದು, ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ. ಹೀಗಾಗಿ, ಪವರ್ ಟಿವಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.

ಅಷ್ಟಕ್ಕೂ ನಡೆದದ್ದೇನು?
ಜೆಡಿಎಸ್ ನಾಯಕರಾದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾಗಿ ಪವರ್ ಟಿವಿ ನಿರಂತರವಾಗಿ ಸಮಗ್ರ ವರದಿಗಳನ್ನ ಪ್ರಕಟ ಮಾಡುತ್ತಿತ್ತು. ಇದರ ಬೆನ್ನಲ್ಲೇ ಪವರ್ ಟಿವಿ ತನ್ನ ಪರವಾನಗಿಯನ್ನ 2021ರಿಂದ ನವೀಕರಣ ಮಾಡಿಕೊಂಡಿಲ್ಲ ಎಂದು ಆಪಾದಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ, ಹೈಕೋರ್ಟ್‌ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು.

ಈ ಪ್ರಕರಣದ ಕುರಿತಾಗಿ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಪವರ್ ಟಿವಿಯನ್ನು ನಡೆಸುತ್ತಿರುವ ಪವರ್ ಸ್ಮಾರ್ಟ್‌ ಮೀಡಿಯಾ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಈ ವಾಹಿನಿಗೆ ತನ್ನ ಕಾರ್ಯಕ್ರಮಗಳ ಅಪ್‌ಲಿಂಕ್ ಹಾಗೂ ಡೌನ್ ಲಿಂಕ್ ಮಾಡಲು ಅನುಮತಿಯೇ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. 2021ರ ಅಕ್ಟೋಬರ್ 12 ರಂದೇ ಈ ವಾಹಿನಿಯ ಪರವಾನಗಿ ಅಂತ್ಯಗೊಂಡಿತ್ತು. ಬಳಿಕ 2022ರ ಡಿಸೆಂಬರ್ 30 ರಂದು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಮಿಟ್‌ಕಾಯಿನ್ ಇನ್‌ಫ್ರಾ 2021 ರಲ್ಲಿ ಪವರ್ ಸ್ಮಾರ್ಟ್ ಮೀಡಿಯಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು, ಆ ಮೂಲಕ ಸ್ಟುಡಿಯೋ ಸೇವೆಗಳನ್ನು ಪಡೆಯಲು, ಜಾಹೀರಾತುಗಳನ್ನು ಪಡೆಯಲು ಮತ್ತು ಈ ಸುದ್ದಿ ವಾಹಿನಿಯ ಕಾರ್ಯನಿರ್ವಹಣೆಗಾಗಿ ಉದ್ಯೋಗಿಗಳನ್ನುನೇಮಕ ಮಾಡಿತು, ಅವರಿಗೆ ಸಂಭಾವನೆ ಮತ್ತು ಸಂಬಳವನ್ನು ಮಿಟ್‌ಕಾನ್ ಪಾವತಿಸಲು ಒಪ್ಪಿಕೊಂಡಿತು.

Kota Shrinivas Poojary: ಕಂಬಳದ ನಿರೂಪಣೆಯಲ್ಲಿ ಅಂದು ಜಾಣತನ ಮೆರೆದಿದ್ದ ಅಪರ್ಣಾ- ಇಂದು ನೆನಪಿನ ಬುತ್ತಿ ಬಿಚ್ಚಿಟ್ಟ ಕೋಟ !!

Advertisement
Advertisement
Advertisement