For the best experience, open
https://m.hosakannada.com
on your mobile browser.
Advertisement

Suicide Bomb Attack: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ : ಐವರು ಚೀನಾ ಪ್ರಜೆಗಳು ಸೇರಿ ಓರ್ವ ಪಾಕಿಸ್ತಾನಿ ಸೈನಿಕ ಸಾವು

Suicide Bomb Attack: ವಾಯುವ್ಯ ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್‌ ದಾಳಿ ನಡೆದಿದ್ದು, ಐವರು ಚೈನಾ ಪ್ರಜೆಗಳು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
05:04 PM Mar 26, 2024 IST | ಸುದರ್ಶನ್
UpdateAt: 05:09 PM Mar 26, 2024 IST
suicide bomb attack  ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ    ಐವರು ಚೀನಾ ಪ್ರಜೆಗಳು ಸೇರಿ ಓರ್ವ ಪಾಕಿಸ್ತಾನಿ ಸೈನಿಕ ಸಾವು
Image Credit Source: ShutterStock
Advertisement

Suicide Bomb Attack: ವಾಯುವ್ಯ ಪಾಕಿಸ್ತಾನದಲ್ಲಿ(Pakistan) ಆತ್ಮಾಹುತಿ ಬಾಂಬರ್‌ ನಡೆಸಿದ ದಾಳಿಯಲ್ಲಿ ಐವರು ಚೈನಾ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Advertisement

ಇಸ್ಲಾಮಾಬಾದ್‌ನಿಂದ ಖೈಬ‌ರ್ ಪಕ್ತುಂಖ್ಯಾ (Khyber Pakhtunkhwa) ಪ್ರಾಂತ್ಯದ ದಾಸುನಲ್ಲಿರುವ ತಮ್ಮ ಶಿಬಿರಕ್ಕೆ ಪ್ರಯಾಣಿಸುತ್ತಿದ್ದ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಬಾಂಬ‌ರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು ಸ್ಪೋಟಿಸಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್‌ ಮುಖ್ಯಸ್ಥ ಮೊಹಮ್ಮದ್ ಅಲಿ ಗಂದಪುರ್ ಹೇಳಿದ್ದಾರೆ.

ದಾಳಿಯಲ್ಲಿ ಐವರು ಚೀನಾದ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸಾವನ್ನಪ್ಪಿದ್ದಾನೆ ಎಂದು ಗಂಡಾಪು‌ರ್ ಹೇಳಿದ್ದಾರೆ. ಮಂಗಳವಾರ ನಡೆದ ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಘಟನೆಯು "ಆತ್ಮಹತ್ಯಾ ಸ್ಫೋಟ" ಎಂದು ಬಿಶಮ್ ಸ್ಟೇಷನ್‌ ಹೌಸ್ ಆಫೀಸರ್‌ (ಎಸ್‌ಎಚ್‌ಒ) ಭಕ್ತಿ ಜಹೀರ್ ಹೇಳಿದ್ದಾರೆ.

Advertisement

ಇದನ್ನೂ ಓದಿ: DL, RC ಕುರಿತು ಹೊಸ ರೂಲ್ಸ್ ತಂದ RTO

ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. "ಆತ್ಮಹತ್ಯಾ ಬಾಂಬರ್‌ನ ವಾಹನ ಎಲ್ಲಿಂದ ಮತ್ತು ಹೇಗೆ ಬಂದಿತು ಮತ್ತು ಹೇಗೆ ಸ್ಪೋಟ ಸಂಭವಿಸಿತು ಎಂದು ನಾವು ತನಿಖೆ ಮಾಡುತ್ತೇವೆ" ಎಂದು ಎಸ್‌ಎಚ್‌ಒ ಹೇಳಿದರು.

ಕಳೆದ ಒಂದು ವಾರದಲ್ಲಿ ಪಾಕಿಸ್ತಾನದಲ್ಲಿ ಚೀನಾದ ಹಿತಾಸಕ್ತಿಗಳ ಮೇಲೆ ನಡೆದ ಮೂರನೇ ಪ್ರಮುಖ ದಾಳಿ ಇದಾಗಿದೆ. ಮೊದಲ ಎರಡು ದಾಳಿಗಳು ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ವಾಯುನೆಲೆ ಮತ್ತು ಆಯಕಟ್ಟಿನ ಬಂದರು ಪ್ರದೇಶದಲ್ಲಿ ಸಂಭವಿಸಿವೆ, ಅಲ್ಲಿ ಚೀನಾ ಮೂಲಸೌಕರ್ಯ ಯೋಜನೆಗಾಗಿ ಶತಕೋಟಿ ಹೂಡಿಕೆ ಮಾಡುತ್ತಿದೆ.

Advertisement
Advertisement
Advertisement