For the best experience, open
https://m.hosakannada.com
on your mobile browser.
Advertisement

Subramanya: ಅಪಘಾತವೆಸಗಿ ಅಮಾಯಕನ ಮೇಲೆ ಹಲ್ಲೆ!! ಪೊಲೀಸರೆಂದು ಬೆದರಿಸಿ ಥಳಿಸಿದ ಯಾತ್ರಾರ್ಥಿಗಳ ಗುಂಪು

Subramanya: ಯಾತ್ರಾತ್ರಿಗಳ ಗುಂಪೊಂದು ಸಂತ್ರಸ್ತ ವಾಹನ ಚಾಲಕನ ಮೇಲೆಯೇ ಹಲ್ಲೆ ನಡೆಸಿ ದರ್ಪ ಮೆರೆದ ಘಟನೆಯೊಂದು ವರದಿಯಾಗಿದೆ.
07:36 PM Jun 11, 2024 IST | ಸುದರ್ಶನ್
UpdateAt: 07:36 PM Jun 11, 2024 IST
subramanya  ಅಪಘಾತವೆಸಗಿ ಅಮಾಯಕನ ಮೇಲೆ ಹಲ್ಲೆ   ಪೊಲೀಸರೆಂದು ಬೆದರಿಸಿ ಥಳಿಸಿದ ಯಾತ್ರಾರ್ಥಿಗಳ ಗುಂಪು
Advertisement

Subramanya: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಅಪಘಾತವೆಸಗಿದ್ದಲ್ಲದೇ,ತಾವು ಪೊಲೀಸರು ಎಂದು ಬೆದರಿಸಿ ಯಾತ್ರಾತ್ರಿಗಳ ಗುಂಪೊಂದು ಸಂತ್ರಸ್ತ ವಾಹನ ಚಾಲಕನ ಮೇಲೆಯೇ ಹಲ್ಲೆ ನಡೆಸಿ ದರ್ಪ ಮೆರೆದ ಘಟನೆಯೊಂದು ವರದಿಯಾಗಿದೆ.

Advertisement

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿದ್ದ ಉಡುಪಿ ಮೂಲದವರೆನ್ನಲಾದ ಯಾತ್ರಾರ್ಥಿಗಳ ಗುಂಪೊಂದು ಚಲಾಯಿಸುತ್ತಿದ್ದ ವಾಹನವು ಸ್ಥಳೀಯ ವ್ಯಕ್ತಿಯೊಬ್ಬರು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿತ್ತು. ಬಳಿಕ ಗುಂಪು ಪಿಕ್ ಅಪ್ ಚಾಲಕನದ್ದೇ ತಪ್ಪು ಎನ್ನುತ್ತಾ ಏಕಾಏಕಿ ಹಲ್ಲೆ ನಡೆಸಿದ್ದು, ತಾವು ಪೊಲೀಸರು ಎಂದು ಬೆದರಿಸಿ ದರ್ಪ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಪಿಕ್ ಅಪ್ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ದೇವಾಲಯಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು ಇಂತಹ ಕೃತ್ಯ ನಡೆಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರೆಂದು ಬೆದರಿಸಿದ್ದರ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement

Advertisement
Advertisement
Advertisement