For the best experience, open
https://m.hosakannada.com
on your mobile browser.
Advertisement

Strawberry Moon 2024: ಜೂ. 21ಕ್ಕೆ ರೋಸ್ ಮೂನ್ ಗೋಚರ: ಹನಿಮೂನ್ ಫೀಲ್ ಕೊಡೋ ಈ ಸ್ಪೆಷಲ್ ಮೂನ್ ನೋಡೋಕೆ ಮಿಸ್ ಮಾಡದಿರಿ

Strawberry Moon 2024: ರೋಸ್ ಮೂನ್ ಅಥವಾ ಸ್ಟ್ರಾಬೆರಿಮೂನ್ ಸಾಮಾನ್ಯಕ್ಕಿಂತ ತುಸು ಹೆಚ್ಚಾದ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಕಂಗೊಳಿಸಲಿದ್ದು, ಜೂನ್‌ 21 ರಂದು ಕಾಣಿಸಲಿದೆ.
10:22 AM Jun 19, 2024 IST | ಕಾವ್ಯ ವಾಣಿ
UpdateAt: 10:22 AM Jun 19, 2024 IST
strawberry moon 2024  ಜೂ  21ಕ್ಕೆ ರೋಸ್ ಮೂನ್ ಗೋಚರ  ಹನಿಮೂನ್ ಫೀಲ್ ಕೊಡೋ ಈ ಸ್ಪೆಷಲ್ ಮೂನ್ ನೋಡೋಕೆ ಮಿಸ್ ಮಾಡದಿರಿ

Strawberry Moon 2024: ಹೂವಿನ ಹೆಸರು ಮತ್ತು ಹಣ್ಣಿನ ಹೆಸರಿನಲ್ಲಿರುವ ಈ ಮೂನ್ ತುಂಬಾ ಸ್ಪೆಷಲ್ ಅಂತೆ. ಹೌದು,  ಜೂನ್ 21ಕ್ಕೆ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸಲಿದ್ದು, ಬಣ್ಣದಲ್ಲೂ ಎಲ್ಲರನ್ನೂ ಆಕರ್ಷಿಸಲಿದೆ. ಮುಖ್ಯವಾಗಿ ರೋಸ್ ಮೂನ್ ಅಥವಾ ಸ್ಟ್ರಾಬೆರಿಮೂನ್ (Strawberry Moon) ಸಾಮಾನ್ಯಕ್ಕಿಂತ ತುಸು ಹೆಚ್ಚಾದ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಕಂಗೊಳಿಸಲಿದೆ.

Advertisement

Renuka Swamy: ರೇಣುಕಾಸ್ವಾಮಿ ಕೊಲೆ ಪ್ರಕರಣ; ಸ್ವಇಚ್ಛಾ ಹೇಳಿಕೆ ದಾಖಲು ಮಾಡಿದ ನಟ ದರ್ಶನ್‌

ಇನ್ನು ಈ ಚಂದ್ರನಿಗೆ ಹಣ್ಣಿನ ಹೆಸರು ಬರಲು ಕಾರಣ ಏನೆಂದರೆ ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ಗೋರಿಸಿದ ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು  ಹೇಳಲಾಗಿದೆ.

Advertisement

ಅಲ್ಲದೇ ಜೂನ್ ತಿಂಗಳಲ್ಲಿ ಅಂತಿಮ ವಾರದಲ್ಲಿ ಮಳೆ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳು ಹೆಚ್ಚಾಗಿರುತ್ತದೆ. ಬಿತ್ತನೆ ಮಾಡುವುದು ಮುಂತಾದ ಬೆಳೆ ಬೆಳೆಯುವುದು. ಇದೇ ವೇಳೆ ಗುಲಾಬಿ ಹೂವುಗಳು ಹೆಚ್ಚಾಗಿ ಹೂವು ಬಿಡುತ್ತದೆ. ಹೀಗಾಗಿ ರೋಸ್ ಮೂನ್ (Rose Moon) ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ವಿಷೇಶ ಅಂದ್ರೆ ಉತ್ತರ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಬಳಿಕ ಮದುವೆಗಳು ಹೆಚ್ಚಾಗಿ ನಡೆಯುತ್ತದೆಯಂತೆ. ಮದುವೆ ಬಳಿಕ ನವ ಜೋಡಿ ಹನಿಮೂನ್‌ಗೆ ತೆರಳುತ್ತಾರೆ. ಈ ಚಂದ್ರನನ್ನು ನೋಡಿದಾಗ ನವಜೋಡಿಗಳಿಗೆ ರೊಮ್ಯಾಂಟಿಕ್ ಫೀಲ್ ಬರುತ್ತೆ. ಅದಕ್ಕಾಗಿ ಇಲ್ಲಿ ಈ ಚಂದ್ರನನ್ನು ಹನಿಮೂನ್ಎಂದು ಕೂಡ ಕರೆಯಲಾಗುತ್ತದೆ.

ಒಟ್ಟಿನಲ್ಲಿ ಅಮೆರಿಕ ಖಗೋಳ ವಿಜ್ಞಾನಿ ಜ್ಯಾಕಿ ಪ್ರಕಾರ, ಆಯಾ ಭಾಗದಲ್ಲಿ ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳಿಗೆ ಅನುಗುಣವಾಗಿ ಸ್ಟ್ರಾಬೆರಿ ಮೂನ್‌ಗೆ ಹಲವು ಹೆಸರುಗಳಾದ ಸ್ಟ್ರಾಬೆರಿ ಮೂನ್, ಹಾಟ್ ಮೂನ್ , ಹನಿಮೂನ್, ರೋಸ್ ಮೂನ್  ಎಂದೂ ಕರೆಯುತ್ತಾರೆ ಎಂದಿದ್ದಾರೆ.

Viral Video: ಸಿಗರೇಟ್ ಸೇದುತ್ತಾ ಮಗುವಿನ ಜೊತೆ ರೀಲ್ಸ್ ಮಾಡಿದ ಮಹಾತಾಯಿ

Advertisement
Advertisement
Advertisement