For the best experience, open
https://m.hosakannada.com
on your mobile browser.
Advertisement

Rishab Shetty: ಕಾಂತಾರ-1 ಕಥೆ ಬರೆದು ಮುಗಿಸಲು ಒಂದು ವರ್ಷ ಬೇಕಾಯಿತು! ಇನ್ನು ಸಿನಿಮಾ ರಿಲೀಸ್? ; ರಿಷಬ್ ಶೆಟ್ಟಿ ಸ್ಪಷ್ಟನೆ

Rishabh Shetty: ಈ ಬಾರಿ ಚಿತ್ರ ತುಂಬಾ ವಿಶಿಷ್ಟವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ(Rishab Shetty) “ಕಾಂತಾರ-1′ ಹಾಗೂ ಇತರ ಅಂಶ ಕುರಿತು ಮಾತನಾಡಿದ್ದು, ಜನರ ಕುತೂಹಲಕ್ಕೆ ಉತ್ತರ ಸಿಕ್ಕಂತಾಗಿದೆ.
12:51 PM Jun 04, 2024 IST | ಸುದರ್ಶನ್
UpdateAt: 12:58 PM Jun 04, 2024 IST
rishab shetty  ಕಾಂತಾರ 1 ಕಥೆ ಬರೆದು ಮುಗಿಸಲು ಒಂದು ವರ್ಷ ಬೇಕಾಯಿತು  ಇನ್ನು ಸಿನಿಮಾ ರಿಲೀಸ್    ರಿಷಬ್ ಶೆಟ್ಟಿ ಸ್ಪಷ್ಟನೆ

Rishab Shetty: ರಿಷಬ್ ಶೆಟ್ಟಿ ಈಗ “ಕಾಂತಾರ-1′ ಚಿತ್ರದಲ್ಲಿ ಬಿಝಿ ಆಗಿದ್ದಾರೆ ಅನ್ನೋದು ನಮಗೆ ತಿಳಿದಿರುವ ವಿಚಾರ. ಹೌದು, ಈ ಬಾರಿ ಚಿತ್ರ ತುಂಬಾ ವಿಶಿಷ್ಟವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ(Rishab Shetty) “ಕಾಂತಾರ-1′ ಹಾಗೂ ಇತರ ಅಂಶ ಕುರಿತು ಮಾತನಾಡಿದ್ದು, ಜನರ ಕುತೂಹಲಕ್ಕೆ ಉತ್ತರ ಸಿಕ್ಕಂತಾಗಿದೆ.

Advertisement

ನಾನು ಯಾವುದೇ ಒತ್ತಡ ಅಥವಾ ಭ್ರಮೆಯಲ್ಲಿ ಕೆಲಸ ಮಾಡುತ್ತಿಲ್ಲ, ಪ್ಯಾನ್‌ ಇಂಡಿಯಾ ಎಂಬ ಕಾರಣಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರೇ ಬೇಕೆಂಬ ಯೋಚನೆಯಲ್ಲೂ ನಾನಿಲ್ಲ. ಮುಂದೆ ಒಂದೊಂದೇ ಅನೌನ್ಸ್‌ಮೆಂಟ್‌ ಬರುವಾಗ ಅದು ನಿಮಗೂ ಗೊತ್ತಾಗುತ್ತದೆ. ನನಗೆ ನನ್ನ ಸಿನಿಮಾ, ಅದರೊಳಗಿನ ಪಾತ್ರಗಳಷ್ಟೇ ಮುಖ್ಯ. ದೊಡ್ಡ ಸಿನಿಮಾ, ದೊಡ್ಡ ಬಜೆಟ್‌ ಎಂಬ ಲೆಕ್ಕಾಚಾರವೂ ನನಗಿಲ್ಲ ಎಂದಿದ್ದಾರೆ.

ಈಗಾಗಲೇ ಕಾಂತಾರ-1 ಕಥೆ ಬರೆದು ಮುಗಿಸಲು ಒಂದು ವರ್ಷ ಬೇಕಾಯಿತು. ಪ್ರತಿಯೊಂದು ಅಂಶವನ್ನು ಎಷ್ಟು ಉತ್ತಮವಾಗಿ ಮಾಡಬಹುದು ಎಂದು ಯೋಚಿಸಲು ಅದಕ್ಕೆ ಸಮಯ ಕೊಡಲೇ ಬೇಕು. ಕಥೆಯ ಕುರಿತಾದ ರಿಸರ್ಚ್‌, ನಿರೂಪಣೆ, ತಂಡಕ್ಕೆ, ನಿರ್ಮಾಣ ಸಂಸ್ಥೆಗೆ ಕಥೆಯ ನರೇಶನ್‌, ಡಿಸ್ಕಶನ್‌, ಸೆಟ್‌ ವರ್ಕ್ ಮುಂತಾದ ಈ ತರಹದ ಅಂಶಗಳಿಗೆ ಸಮಯಬೇಕು. ಜೊತೆಗೆ ಪಾತ್ರಕ್ಕೆ ಬೇಕಾದ ತಯಾರಿ, ಲುಕ್ಸ್‌, ಕಾಸ್ಟ್ಯೂಮ್‌.. ಎಲ್ಲವೂ ಒಂದೊಂದು ಫ್ಯಾಕ್ಟರಿ ತರಹ ನಡೆಯುತ್ತಿದೆ. ಎಷ್ಟು ಬಾರಿ ನನಗೂ ಅನಿಸಿದೆ, ಒಂದು ಸಿನಿಮಾ ಮಾಡಿದ ನಂತರ “ಕಾಂತಾರ-1′ ಮಾಡಬಹುದಿತ್ತೆಂದು. ಆದರೆ, ಮತ್ತೆ ಅಷ್ಟೇ ಸಮಯಕೊಡಬೇಕು. ಸದ್ಯ ಹೊಸ ವರ್ಷಕ್ಕೆ ಸಿನಿಮಾ ರಿಲೀಸ್‌ ಆಗಲಿದೆ. ರಿಲೀಸ್‌ ಡೇಟನ್ನು ನಿರ್ಮಾಣ ಸಂಸ್ಥೆ ನಿರ್ಧರಿಸಲಿದೆ ಎಂದಿದ್ದಾರೆ.

Advertisement

Advertisement
Advertisement
Advertisement