For the best experience, open
https://m.hosakannada.com
on your mobile browser.
Advertisement

Pradeep Eshwar: ಸುಧಾಕರ್‌ ಗೆಲುವು ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ಮನೆಗೆ ಕಲ್ಲು ತೂರಾಟ

Pradeep Eshwar: ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.
08:59 AM Jun 05, 2024 IST | ಸುದರ್ಶನ್
UpdateAt: 08:59 AM Jun 05, 2024 IST
pradeep eshwar  ಸುಧಾಕರ್‌ ಗೆಲುವು ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ಮನೆಗೆ ಕಲ್ಲು ತೂರಾಟ
Advertisement

Pradeep Eshwar: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಜಯಗಳಿಸಿದ್ದು, ಇದರ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.

Advertisement

ಈ ಹಿಂದೆ ಪ್ರದೀಪ್‌ ಈಶ್ವರ್‌ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್‌ ಅವರು ಒಂದು ಮತದ ಮುನ್ನಡೆ ಸಾಧಿಸಿದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಚಾಲೆಂಜ್‌ ಮಾಡಿದ್ದರು. ನಿನ್ನೆ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಶಾಸಕ ಪ್ರದೀಪ್‌ ಮನೆಯ ಕಿಟಕಿ ಗಾಜುಗಳ ಮೇಲೆ ಕಿಡಿಗೇಡಿಗಳು ನಿನ್ನೆ ರಾತ್ರಿ ಕಲ್ಲು ತೂರಿದ್ದಾರೆ.

Advertisement

ಇದನ್ನೂ ಓದಿ; ಲೋಕಸಭಾ ಚುನಾವಣೆ; ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಡೆದದ್ದೇನು? ಕಳೆದುಕೊಂಡದ್ದು ಏನನ್ನು?!

ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ಗೆಲುವು ಹಿನ್ನೆಲೆ ಕಲ್ಲು ತೂರಾಟ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ನಾನು ಸಿಂಗಲ್ ಅಲ್ಲ, ರಿಲೇಷನ್‌ಶಿಪ್‌ನಲ್ಲಿದ್ದೇನೆ' ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ; ಯಾರು ಆ ಹುಡುಗ ?

Advertisement
Advertisement
Advertisement