For the best experience, open
https://m.hosakannada.com
on your mobile browser.
Advertisement

Gruhalakshmi Amount: ಅಮ್ಮನ 'ಗೃಹಲಕ್ಷ್ಮೀ' ದುಡ್ಡು ನನ್ನ ಓದಿಗೆ ನೆರವಾಯಿತು- ಕಲಾ ವಿಭಾಗದ ಸ್ಟೇಟ್ ಟಾಪರ್ ವಿದ್ಯಾರ್ಥಿ !!

Gruhalakshmi Amount: ಗೃಹಲಕ್ಷ್ಮೀಯ 2,000 ಹಣ ನನಗೆ ತುಂಬಾ ಸಹಾಯವಾಯಿತು ಎಂದು ಕಲಾ ವಿಭಾಗದ ರಾಜ್ಯ ಟಾಪರ್ ಹುಡುಗ ವಿಜಯಪುರದ ವೇದಾಂತ್ ಜ್ಞಾನುಭನವಿ ಹೇಳಿದ್ದಾನೆ.
08:43 AM Apr 11, 2024 IST | ಸುದರ್ಶನ್
UpdateAt: 08:43 AM Apr 11, 2024 IST
gruhalakshmi amount  ಅಮ್ಮನ  ಗೃಹಲಕ್ಷ್ಮೀ  ದುಡ್ಡು ನನ್ನ ಓದಿಗೆ ನೆರವಾಯಿತು  ಕಲಾ ವಿಭಾಗದ ಸ್ಟೇಟ್ ಟಾಪರ್ ವಿದ್ಯಾರ್ಥಿ
Advertisement

Gruhalakshmi Amount: ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ಹಣದ ಕೊರತೆ ಇತ್ತು. ಆದರೆ ಅಮ್ಮನಿಗೆ ಬರುತ್ತಿದ್ದ ಗೃಹಲಕ್ಷ್ಮೀಯ(Gruhalakshmi)2,000 ಹಣ ನನಗೆ ತುಂಬಾ ಸಹಾಯವಾಯಿತು ಎಂದು ಕಲಾ ವಿಭಾಗದ ರಾಜ್ಯ ಟಾಪರ್ ಹುಡುಗ ವಿಜಯಪುರದ ವೇದಾಂತ್ ಜ್ಞಾನುಭನವಿ(Vedanth Jnanubhavi) ಹೇಳಿದ್ದಾನೆ.

Advertisement

ಹೌದು, ನಿನ್ನೆ ತಾನೆ(ಏ.10) 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ 84.87% ಬಾಲಕಿಯರು ಉತ್ತೀರ್ಣರಾಗಿದ್ದು, 76.98% ಬಾಲಕರು ದ್ವಿತೀಯ ಪಿಯುಸಿ(2nd pu) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ರಾಜ್ಯಕ್ಕೆ ಟಾಪ್ ಬಂದಹ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮಾಧ್ಯಮಗಳು ಖುದ್ದಾಗಿ ಭೇಟಿ ನೀಡಿ ಮಾತನಾಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಲಾ ವಿಭಾಗದ ಟಾಪರ್‌ ಆದ ವಿಜಯಪುರದ ವೇದಾಂತ್ ಜ್ಞಾನುಭನವಿ ತನ್ನ ಮನೆಯ ವಿಚಾರಗಳನ್ನು ಹಂಚಿಕೊಂಡು, ಓದಲು ಹಣವಿಲ್ಲದಾಗ ರಾಜ್ಯ ಸರ್ಕಾರವು ಅಮ್ಮನಿಗೆ ಕೊಡುವ ಗೃಹಲಕ್ಷ್ಮಿ ಯೋಜನೆಯ ಹಣದಿಂದ ನನಗೆ ಅನುಕೂಲವಾಯಿತು ಎಂದು ಹೇಳಿದ್ದಾರೆ.

ಇನ್ನು ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದ್ವಿತೀಯ ಪಿ.ಯು.ಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು. ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಗೃಹಲಕ್ಷ್ಮಿ ಆ ಕನಸನ್ನು ಸಾಕಾರಗೊಳಿಸಿದೆ. ನಮ್ಮ ಸರ್ಕಾರದ ಕಾರ್ಯಕ್ರಮವೊಂದು ನಿರೀಕ್ಷೆಗೂ ಮೀರಿದ್ದನ್ನು ಸಾಧಿಸಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹಗುರವಾಗಿ ಮಾತಾಡುವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ ಎಂದು ಹೇಳಿದ್ದಾರೆ.

Advertisement

ಇನ್ನು ಮೊನ್ನೆ ತಾನೆ ಯುಗಾದಿ ದಿನ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣವನ್ನು ಸಂಗ್ರಹಿಸಿಟ್ಟು ಮನೆಗೆ ಹೊಸ ಫ್ರಿಡ್ಜ್ ಅನ್ನು ತಂದಿದ್ಧು, ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆಗಲೂ ರಾಜ್ಯ ಸರ್ಕಾರ ಬಾರೀ ಮೆಚ್ಚುಗೆ ವ್ಯಕ್ತಪಡಿಸಿತ್ತು.

Advertisement
Advertisement
Advertisement