ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Health Card: ಇನ್ಮುಂದೆ BPL ಕಾರ್ಡ್ ದಾರರಿಗೆ ಮಾತ್ರವಲ್ಲ APL ಕಾರ್ಡ್ ಇರುವವರಿಗೂ ಸಿಗುತ್ತೆ ಈ ಸೌಲಭ್ಯ- ಸರ್ಕಾರದಿಂದ ಭರ್ಜರಿ ಹೊಸ ಘೋಷಣೆ

10:24 AM Dec 07, 2023 IST | ಅಶ್ವಿನಿ ಹೆಬ್ಬಾರ್
UpdateAt: 10:29 AM Dec 07, 2023 IST
image source: ETV Bharath
Advertisement

Health Card: ಗ್ಯಾರಂಟೀ ಯೋಜನೆಗಳ ಮೂಲಕ ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿರುವ ರಾಜ್ಯ ಸರ್ಕಾರವು (Congress Government)ಜನತೆಗೆ ಮತ್ತೊಂದು ಗುಡ್ ನ್ಯೂಸ್ (Good News)ನೀಡಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು (Health Card)ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.

Advertisement

ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಲಾಗಿದೆ. ರಾಜ್ಯದ ಬಿಪಿಎಲ್ ಕಾರ್ಡುದಾರರು ₹5 ಲಕ್ಷ ಹಾಗೂ APL ಕಾರ್ಡುದಾರರಿಗೆ ಸರ್ಕಾರ ಗರಿಷ್ಠ ₹1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಈ ಯೋಜನೆಗೆ ಕೇಂದ್ರದಿಂದ ಶೇ. 34ರಷ್ಟು ಅನುದಾನ ಸಿಗಲಿದೆ. ಅದೇ ರೀತಿ, ರಾಜ್ಯ ಸರ್ಕಾರ ಶೇ.66ರಷ್ಟು ಅನುದಾನವನ್ನು ಬಿಡುಗಡೆ ಮಾಡಲಿದೆ.

ಇದನ್ನು ಓದಿ: Marriage: ನಡು ರಾತ್ರಿ ಪ್ರಿಯತಮೆ ನೋಡಲು ಬಂದ ಪ್ರಿಯಕರ - ಗ್ರಾಮಸ್ಥರ ಕೈಗೆ ತಗಲಾಕೊಂಡು ಲಾಟ್ರಿ ಹೊಡೆದೇ ಬಿಟ್ಟ !!

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದು, ಈ ಮೂಲಕ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಿದ್ದಾರೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ(PMJAY) ಹಾಗೂ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

Advertisement
Advertisement