For the best experience, open
https://m.hosakannada.com
on your mobile browser.
Advertisement

Government Job: ಸರ್ಕಾರಿ ನೌಕರಿ ಬೇಕಂದ್ರೆ ಇನ್ಮುಂದೆ ಈ ದಾಖಲೆ ಕಡ್ಡಾಯ !! ರಾಜ್ಯ ಸರಕಾರದ ಮಹತ್ವದ ಆದೇಶ

10:38 AM Dec 21, 2023 IST | ಕಾವ್ಯ ವಾಣಿ
UpdateAt: 10:59 AM Dec 21, 2023 IST
government job  ಸರ್ಕಾರಿ ನೌಕರಿ ಬೇಕಂದ್ರೆ ಇನ್ಮುಂದೆ  ಈ ದಾಖಲೆ ಕಡ್ಡಾಯ    ರಾಜ್ಯ ಸರಕಾರದ ಮಹತ್ವದ ಆದೇಶ

Government Job: ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಹೊಸ ನಿಯಮ ಜಾರಿಗೆ ತರಲಾಗಿದೆ. ಹೌದು, ರಾಜ್ಯ ಸರ್ಕಾರಿ ಹುದ್ದೆಗಳ‌ (Government Job) ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು (Government of Karnataka) ಮಹತ್ವದ ಬದಲಾವಣೆ ಮಾಡಿದ್ದು, ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಎಸ್‌ ಎಸ್ ಎಲ್‌ ಸಿ (SSLC) ಕಡ್ಡಾಯ ಮಾಡಲಾಗಿದೆ.

Advertisement

ಕರ್ನಾಟಕ ಸಿವಿಲ್‌ ಸೇವೆಗಳ ಕಾಯಿದೆ-1978ರಲ್ಲಿ ತಿದ್ದುಪಡಿಯೊಂದಿಗೆ ಜು.1 ರಂದು ರಾಜ್ಯ ಪತ್ರದಲ್ಲಿ, ರಾಜ್ಯ ಸರ್ಕಾರವು ಕ್ಲಾರ್ಕ್ , ಸೇರಿ ಯಾವುದೇ ಗ್ರೂಪ್‌ ಡಿ ಹುದ್ದೆಗಳ ನೇಮಕಾತಿಗೂ ಇನ್ಮುಂದೆ ಎಸ್‌ ಎಸ್‌ ಎಲ್‌ ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರ್ಕಾರ ಕಡ್ಡಾಯ ಎಂದು ಅಧಿಸೂಚನೆ ಹೊರಡಿಸಿದೆ.

ಇದನ್ನು ಓದಿ: Husband - wife: ನಾದಿನಿಯೊಂದಿಗೆ ಬಾವನ ಚಕ್ಕಂದದಾಟ - ಹುಬ್ಬಳ್ಳಿ ಎಲ್ಲಾ ಸುತ್ತಾಡಿಸಿ ಕೊನೆಗೇನು ಮಾಡಿದ ಗೊತ್ತಾ

Advertisement

ಅದಲ್ಲದೆ ರಾಜ್ಯ ಸಿವಿಲ್‌ ಸೇವೆಗಳಲ್ಲಿ ಗ್ರೂಪ್‌ ಸಿ ಹುದ್ದೆಗಳ ನೇರ ನೇಮಕದ ಸಂದರ್ಶನವನ್ನೂ ರದ್ದುಪಡಿಸಲಾಗಿದ್ದು, ನೇಮಕಾತಿ ಖಾಯಂ ಅಥವಾ ಬಡ್ತಿಗೆ ಮಾನದಂಡವಾಗಿ ಐದು ವರ್ಷ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮಾವಳಿಯಲ್ಲೂ ಬದಲಾವಣೆ ತರಲಾಗಿದೆ. ಗ್ರೂಪ್‌ ಡಿ ಸೇವೆ ಮತ್ತು ಮೇಲ್ಪಟ್ಟ ರಾಜ್ಯ ಸಿವಿಲ್‌ ಸೇವೆಗಳ ನೇಮಕಾತಿಗೆ ಎಸ್‌ ಎಸ್‌ ಎಲ್‌ ಸಿ ಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

Advertisement
Advertisement
Advertisement