SSLC Exam Result: ಎಸ್ಸೆಸ್ಸೆಲ್ಸಿ ಫಲಿತಾಂಶ ಎಪ್ರಿಲ್ ಕೊನೆಯ ವಾರದಲ್ಲಿ?
SSLC Result Date: ಎಸ್ಸೆಸ್ಸೆಲ್ಸಿ ಫಲಿತಾಂಶ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಇದನ್ನೂ ಓದಿ: B.S.Yediyurappa: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಬಿಎಸ್ ಯಡಿಯೂರಪ್ಪ ಧ್ವನಿ ಮಾದರಿ ಸಂಗ್ರಹ
"ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್ ಅನುಷ್ಠಾನಗೊಳಿಸಿದ್ದಕ್ಕೆ ಆರಂಭದಲ್ಲಿ ಟೀಕೆ ವ್ಯಕ್ತವಾಗಿದ್ದವು. ಪರೀಕ್ಷೆಯಲ್ಲಿ ಪಾರದರ್ಶಕತೆಗೋಸ್ಕರ ಇದನ್ನು ಜಾರಿಗೆ ತಂದಿದ್ದು, ಸಾಕಷ್ಟು ಪ್ರಯೋಜನವಾಗಿದೆ.'' ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: CET Exam: ವಿದ್ಯಾರ್ಥಿಗಳ ಇಚ್ಛಾನುಸಾರವೇ ಸಿಇಟಿ ಕೇಂದ್ರ ಹಂಚಿಕೆ- ಕೆಇಎ
"ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಮೂರು ಪರೀಕ್ಷೆಗಳನ್ನು ಮಾಡಿದ್ದಕ್ಕೂ ಟೀಕೆಗಳು ಕೇಳಿಬಂದಿದ್ದವು. ಆದರೆ, ಈ ನಿರ್ಧಾರದಿಂದ ವಿದ್ಯಾರ್ಥಿಗಳ ಮೇಲಿನ ಪರೀಕ್ಷೆ ಒತ್ತಡ ಕಡಿಮೆಯಾಗಿದೆ. ಈ ನಿರ್ಧಾರವನ್ನು ತಜ್ಞರ ಸಲಹೆಯ ಮೇರೆಗೆ ಅನುಷ್ಠಾನ ಗೊಳಿಸಲಾಗಿದೆ,'' ಎಂದರು.
"ಪಿಯು ಫಲಿತಾಂಶದಲ್ಲಿ ಸರಕಾರಿ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರೇ ನಮ್ಮ ಬ್ರಾಂಡ್ ಅಂಬಾಸಿಡರ್. ಪಿಯು ಫಲಿತಾಂಶದಲ್ಲಿ ಶೇ.6ರಷ್ಟು ಹೆಚ್ಚಳವಾಗಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆಂಬ ತೃಪ್ತಿ ನನಗಿದೆ,'' ಎಂದರು.