For the best experience, open
https://m.hosakannada.com
on your mobile browser.
Advertisement

SSLC Exam: ಪರೀಕ್ಷಾ ಸಿಬ್ಬಂದಿಗೆ ಸಂಭಾವನೆ 5% ಹೆಚ್ಚಳ

07:43 AM Mar 23, 2024 IST | ಹೊಸ ಕನ್ನಡ
UpdateAt: 07:45 AM Mar 23, 2024 IST
sslc exam  ಪರೀಕ್ಷಾ ಸಿಬ್ಬಂದಿಗೆ ಸಂಭಾವನೆ 5  ಹೆಚ್ಚಳ

SSLC Exam: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸಾಮಗ್ರಿ ಖರೀದಿ ವೆಚ್ಚ (ಸಾದಿಲ್ವಾರು) ಮತ್ತು ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯ ಸಂಭಾವನೆಯನ್ನು ಶೇ.5ರಷ್ಟು ಹೆಚ್ಚಿಸಲಾಗಿದೆ. ಈ ಮೊತ್ತವನ್ನು ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

Advertisement

ಇದನ್ನೂ ಓದಿ: CBI News: ರಾಷ್ಟ್ರಪತಿಯನ್ನು, ಪ್ರಧಾನ ಮಂತ್ರಿಯನ್ನು ಸಿಬಿಐ ಬಂಧಿಸಬಹುದಾ? ನಿಯಮಗಳು ಏನು ಹೇಳುತ್ತೆ ?!

ಪರಿಷ್ಕರಿಸಲಾಗಿರುವ ಸಂಭಾವನೆ ಪ್ರಕಾರ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ 1,610 ರೂ. ಸಂಭಾವನೆ, ಉಪ ಅಧೀಕ್ಷಕರಿಗೆ 1,533 ರೂ.. ಕಸ್ಟೋಡಿಯನ್‌ಗೆ 1,449 ರೂ., ಕೊಠಡಿ ಮೇಲ್ವಿಚಾರಕರಿಗೆ 1,038 ರೂ., ಸ್ಥಾನಕ ಜಾಗೃತ ದಳದವರಿಗೆ 950 ರೂ., ಮೊಬೈಲ್ ಸ್ವಾಧೀನಾಧಿಕಾರಿಗೆ 696 ರೂ., ಪರೀಕ್ಷಾ ಕೇಂದ್ರಕ್ಕೆ ನಿಯೋಜಿತ ಪೊಲೀಸ್ ಸಿಬ್ಬಂದಿಗೆ 912 ರೂ., ಸಹಾಯಕರಿಗೆ 805 ರೂ., 'ಡಿ' ದರ್ಜೆ ನೌಕರರಿಗೆ 609 ರೂ. ನಿಗದಿಪಡಿಸಲಾಗಿದೆ.

Advertisement

ಇದನ್ನೂ ಓದಿ: CM Siddaramaiah: ಅಪರೇಶನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ - ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ

ಇನ್ನು ಪರೀಕ್ಷಾ ಸಾದಿಲ್ವಾರು ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ 12 ರೂ. ನಿಗದಿಪಡಿಸಲಾಗಿದೆ. ಬಿಡುಗಡೆ ಮಾಡಿರುವ ಹಣದ ವೆಚ್ಚದ ಮಾಹಿತಿಯನ್ನು ಪರೀಕ್ಷೆ ಮುಗಿದ 15 ದಿನಗಳ ಒಳಗೆ ಮಂಡಳಿಗೆ ದಾಖಲೆ ಸಮೇತ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

Advertisement
Advertisement