For the best experience, open
https://m.hosakannada.com
on your mobile browser.
Advertisement

Sports Shocking News: ಕ್ರಿಕೆಟ್ ಲೋಕಕ್ಕೇ ಊಹಿಸದ ಆಘಾತ- ಒಂದೇ ದಿನ ಇಬ್ಬರು ಸ್ಟಾರ್ ಕ್ರಿಕೆಟಿಗರ ನಿಧನ

04:42 PM Dec 09, 2023 IST | ಅಶ್ವಿನಿ ಹೆಬ್ಬಾರ್
UpdateAt: 04:42 PM Dec 09, 2023 IST
sports shocking news  ಕ್ರಿಕೆಟ್ ಲೋಕಕ್ಕೇ ಊಹಿಸದ ಆಘಾತ  ಒಂದೇ ದಿನ ಇಬ್ಬರು ಸ್ಟಾರ್ ಕ್ರಿಕೆಟಿಗರ ನಿಧನ
Advertisement

Clyde butts death : ಇಬ್ಬರು ಕ್ರಿಕೆಟಿಗರು ಒಂದೇ ದಿನ ನಿಧನರಾಗಿದ್ದು, ಕ್ರೀಡಾ ಲೋಕಕ್ಕೆ ಬಹು ದೊಡ್ದ ಆಘಾತ ತಂದಿದೆ.

Advertisement

ವೆಸ್ಟ್ ಇಂಡೀಸ್ನ ಮಾಜಿ ಆಫ್ ಸ್ಪಿನ್ನರ್ ಕ್ಲೈಡ್ ಬಟ್ಸ್ (Clyde butts death)ಡಿಸೆಂಬರ್ 8, ಶುಕ್ರವಾರದಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಖ್ಯಾತ ಕ್ರಿಕೆಟಿಗ ಜೋ ಸೊಲೊಮನ್ (93)(Solomon Death) ಅನಾರೋಗ್ಯದಿಂದ ಅಸುನೀಗಿದ್ದಾರೆ. ಈ ಕುರಿತು ಕ್ರಿಕೆಟ್ ವೆಸ್ಟ್ ಇಂಡೀಸ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.

1980 ರಲ್ಲಿ ವೆಸ್ಟ್ ಇಂಡೀಸ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕ್ಲೈಡ್ ಬಟ್ಸ್ ಪಾದಾರ್ಪಣೆ ಮಾಡಿದ್ದರು. 1988 ರಲ್ಲಿ ಭಾರತದ ವಿರುದ್ಧ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಕ್ಲೈಡ್ ಬಟ್ಸ್ ಆಡಿದ್ದರು. ವೆಸ್ಟ್ ಇಂಡೀಸ್ ಆಯ್ಕೆ ಸಮಿತಿಯ ಅಧ್ಯಕ್ಷರು ಕೂಡ ಆಗಿದ್ದರು. ಇವರ ಸಾವಿನ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಗಯಾನಾದ ಜೋ ಸೊಲೊಮನ್ (93) ವೆಸ್ಟ್ ಇಂಡೀಸ್ನ ಪ್ರಮುಖ ಬ್ಯಾಟ್ಸ್ಮ್ಯಾನ್ ಆಗಿದ್ದು, ಸೊಲೊಮನ್ 1958 ಮತ್ತು 1965 ರ ನಡುವೆ ವಿಂಡೀಸ್ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.

Advertisement

ಇದನ್ನು ಓದಿ: Gruhalakshmi Scheme: ಗೃಹಲಕ್ಷ್ಮೀ ಹಣ ವರ್ಗಾವಣೆಯಲ್ಲಿ ಮೆಗಾ ಟ್ವಿಸ್ಟ್- ಇನ್ನು ಈ ಯಜಮಾನಿಯರ ದುಡ್ಡು ಗಂಡನ ಖಾತೆಗೆ ಜಮಾ!!

Advertisement
Advertisement
Advertisement