For the best experience, open
https://m.hosakannada.com
on your mobile browser.
Advertisement

Pro Kabaddi 10: ಪ್ರೋ ಕಬಡ್ಡಿ ಪಂದ್ಯಾವಳಿಗಳ ಕಂಪ್ಲೀಟ್ ಶೆಡ್ಯೂಲ್, ನಿಮ್ಮ ನೆಚ್ಚಿನ ತಂಡಗಳು ಬೆಂಗಳೂರಿಗೆ ಬರೋ ದಿನಾಂಕ ಗಮನಿಸಿ !

02:02 PM Nov 27, 2023 IST | ಸುದರ್ಶನ್
UpdateAt: 02:02 PM Nov 27, 2023 IST
pro kabaddi 10  ಪ್ರೋ ಕಬಡ್ಡಿ ಪಂದ್ಯಾವಳಿಗಳ ಕಂಪ್ಲೀಟ್ ಶೆಡ್ಯೂಲ್  ನಿಮ್ಮ ನೆಚ್ಚಿನ ತಂಡಗಳು ಬೆಂಗಳೂರಿಗೆ ಬರೋ ದಿನಾಂಕ ಗಮನಿಸಿ
Advertisement

Pro Kabaddi 10: ಶಕ್ತಿ ಯುಕ್ತಿಗಳ ಸಮರ್ಪಕ ಮಿಶ್ರಣದಂತಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್ ಗೆ(Pro Kabaddi 10)  ದಿನಗಳ ಎಣಿಕೆ ಶುರುವಾದ ಹಾಗೆಯೇ ಪಂದ್ಯದ ಉದ್ಘಾಟನೆ ಮತ್ತು ಮೊದಲ ಪಂದ್ಯ ನೋಡಲು ಕಾತುರತೆ ಅಧಿಕ ಆಗುತ್ತಿದೆ. ಮೊದಲ ಪಂದ್ಯ ಇರಾನಿಯನ್ ದೈತ್ಯ ಆಟಗಾರ ಫಜಲ್ ಅತ್ರಾಚಲಿ ನಾಯಕತ್ವದ ಗುಜರಾತ್ ಜೈಂಟ್ಸ್ ಮತ್ತು ಸದ್ಯದ ನಂಬರ್ ಒನ್ ಸ್ಟಾರ್ ಆಟಗಾರರಿಂದ ಖ್ಯಾತಿಗಳಿಸಿರುವ ಪವನ್ ಕುಮಾರ್ ಶರಾವತ್ ನಾಯಕತ್ವದ ತೆಲುಗು ಟೈಟಾನ್ಸ್ ನಡುವಿನ ಪೈಪೋಟಿಯ ಪುನರಾರಂಭದೊಂದಿಗೆ ಆರಂಭವಾಗಲಿದೆ. ಪ್ರೊ ಕಬಡ್ಡಿ ಲೀಗ್‌ನ ಆಯೋಜಕರಾದ ಮಶಾಲ್ ರವರು ಪ್ರೊ ಕಬಡ್ಡಿ ಲೀಗ್ ಸೀಸನ್ 10 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

Advertisement

ಬ್ಲಾಕ್ ಬಸ್ಟರ್ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಈ ರೋಚಕ ಪಂದ್ಯಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ಕಾತುರರಾಗಿದ್ದಾರೆ. ಎರಡು ಬಲಿಷ್ಠ ತಂಡಗಳಾಗಿದ್ದು, ಪ್ರೊ ಕಬಡ್ಡಿಯ ಈ ಆರಂಭಿಕ ಪಂದ್ಯ ಕಬ್ಬಡ್ಡಿ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲಿಸುವುದಂತು ಸತ್ಯ.

ಸೀಸನ್ 10 ಗಾಗಿ, ಭಾರತದ ಒಟ್ಟು 12 ನಗರದ ಕಾರವಾನ್ ಸ್ವರೂಪಕ್ಕೆ ಮರಳುತ್ತಿರುವ ಪ್ರೊ ಕಬಡ್ಡಿ ಲೀಗ್, 2ನೇ ಡಿಸೆಂಬರ್ 2023 ರಂದು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಆರಂಭವಾಗುತ್ತದೆ. ಇದಾದ ಬಳಿಕ ಪ್ರತಿಯೊಂದು ಫ್ರಾಂಚೈಸಿಯ ತವರು ನಗರಗಳಿಗೆ ತಂಡಗಳು ಬಂದು ಅಲ್ಲಿ ತಮ್ಮ ಆಟವನ್ನು ಆಡುತ್ತವೆ. 2ನೇ ಡಿಸೆಂಬರ್ 2023 ರಿಂದ 21ನೇ ಫೆಬ್ರವರಿ 2024 ರವರೆಗೆ ಲೀಗ್ ಹಂತ ನಡೆಯಲಿದೆ. ಪ್ಲೇಆಫ್‌ಗಳ ವೇಳಾಪಟ್ಟಿಯನ್ನು ನಂತರದ ದಿನಾಂಕದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

Advertisement

ಯಾವ ನಗರಗಳಲ್ಲಿ ಪ್ಲೇ ಆಫ್ ಯಾವಾಗ ನಡೆಯುತ್ತೆ ?
* ಅಹಮದಾಬಾದ್ ಲೆಗ್ 2-7 ಡಿಸೆಂಬರ್ 2023)
* ಬೆಂಗಳೂರು (8-13 ಡಿಸೆಂಬರ್ 2023)
* ಪುಣೆ (15-20 ಡಿಸೆಂಬರ್ 2023)
* ಚೆನ್ನೈ (22-27 ಡಿಸೆಂಬರ್ 2023)
* ನೋಯ್ಡಾ (29 ಡಿಸೆಂಬರ್ 2023 - 3 ಜನವರಿ 2024)
* ಮುಂಬೈ (5-10 ಜನವರಿ 2024)
*ಜೈಪುರ (12-17 ಜನವರಿ 2024)
* ಹೈದರಾಬಾದ್ (19-24 ಜನವರಿ 2024)
* ಪಾಟ್ನಾ (26-31 ಜನವರಿ 2024)
* ದೆಹಲಿ (2-7 ಫೆಬ್ರವರಿ 2024)
* ಕೋಲ್ಕತ್ತಾ (9-14 ಫೆಬ್ರವರಿ 2024)
* ಪಂಚ ಕುಲ (16-21 ಫೆಬ್ರವರಿ 2024) ರವರೆಗೆ ಜರುಗಲಿದೆ. ಇದಾದ ಬಳಿಕ ನಾಕ್ ಔಟ್ ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ: PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ; 12 ತಂಡಗಳ ಬಲಿಷ್ಠ ನಾಯಕರ, ಮಾಲೀಕರ ಪಟ್ಟಿ ಇಲ್ಲಿದೆ !

Advertisement
Advertisement
Advertisement