For the best experience, open
https://m.hosakannada.com
on your mobile browser.
Advertisement

Rahul Dravid: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಹುಲ್ ವಿದಾಯ- ಇವರೇ ನೋಡಿ ಹೊಸ ಕೋಚ್

12:46 PM Nov 23, 2023 IST | ಅಶ್ವಿನಿ ಹೆಬ್ಬಾರ್
UpdateAt: 12:46 PM Nov 23, 2023 IST
rahul dravid  ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಹುಲ್ ವಿದಾಯ  ಇವರೇ ನೋಡಿ ಹೊಸ ಕೋಚ್

Rahul Dravid: ವಿಶ್ವಕಪ್‌ ಸೋಲಿನ ನಡುವೆ ಭಾರತ ಕ್ರಿಕೆಟ್‌ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೋಲಿನ ರುಚಿ ಕಂಡ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ (Rahul Dravid) ಅವರು ತಂಡದ ಮುಖ್ಯ ಕೋಚ್‌ (Head Coach) ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ರಾಹುಲ್‌ ದ್ರಾವಿಡ್‌ ಅವರು 2021ರ ಟಿ-20 ವಿಶ್ವಕಪ್‌ ಬಳಿಕ ನವೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನಡುವೆ ಮೊನ್ನೆ ನಡೆದ ವಿಶ್ವ ಕಪ್‌ ಫೈನಲ್‌ ಸೋಲಿನ ಬಳಿಕ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲು ಇಚ್ಚಿಸುತ್ತಿಲ್ಲ ಎನ್ನಲಾಗಿದೆ. ವಿಶ್ವಕಪ್‌ ಸೋಲಿನ ಬಳಿಕ ಮಾಧ್ಯಮಗಳ ಜೊತೆಗೆ ರಾಹುಲ್‌ ದ್ರಾವಿಡ್‌ ಅವರು ಮಾತನಾಡಿದ್ದು, “ಕೋಚ್‌ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚನೆ ಮಾಡಿಲ್ಲ. ಸಮಯ ಸಿಕ್ಕಾಗ ಈ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಅವಧಿಯ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ, ಟೆಸ್ಟ್‌ ಸ್ಪೆಷಲಿಸ್ಟ್‌ ವಿವಿಎಸ್‌ ಲಕ್ಷ್ಮಣ್‌ (VVS Laxman) ಅವರು ತಂಡದ ನೂತನ ಕೋಚ್‌ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ರಾಹುಲ್‌ ದ್ರಾವಿಡ್‌ ಅವರು ಮುಖ್ಯ ತರಬೇತುದಾರರಾಗಿ ಮುಂದುವರಿಯಲು ಮುಂದಾಗದೆ ಇದ್ದಲ್ಲಿ ಟೆಸ್ಟ್‌ ಸ್ಪೆಷಲಿಸ್ಟ್‌ ವಿವಿಎಸ್‌ ಲಕ್ಷ್ಮಣ್‌ ಅವರೇ ಹೆಡ್‌ ಕೋಚ್‌ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಐದು ಪಂದ್ಯಗಳ ಸರಣಿಗು ಮೊದಲೇ ಲಕ್ಷ್ಮಣ್‌ ಅವರು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mansoor Ali Khan:ತ್ರಿಷಾ ಜೊತೆ ಕ್ಷಮೆ ಯಾಕೆ ಕೇಳೋ ವಿಚಾರ - ಈ ನಟಿಯರ ಜೊತೆ ಬೆಡ್ ರೂಂ, ರೇಪ್ ಸೀನ್ ಎಲ್ಲಾ ಮಾಡಿರುವೆ ಇವಳ್ಯಾವ ಲೆಕ್ಕಾ ಎಂದ ಖಳ ನಾಯಕ!!

Advertisement
Advertisement