ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Glenn Maxwell: ಅತಿಯಾದ ಮದ್ಯಸೇವನೆ, ಸ್ಟಾರ್‌ಕ್ರಿಕೆಟಿಗ, ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಆಸ್ಪತ್ರೆಗೆ ದಾಖಲು!

12:54 PM Jan 23, 2024 IST | ಹೊಸ ಕನ್ನಡ
UpdateAt: 12:54 PM Jan 23, 2024 IST
Advertisement

Glenn Maxwell: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ, ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಕಾರ್ಯಕ್ರಮವೊಂದರಲ್ಲಿ ಅತೀ ಹೆಚ್ಚು ಮದ್ಯ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಪವೊಂದು ಕೇಳಿ ಬಂದಿದೆ.

Advertisement

ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಂಪೂರ್ಣ ತನಿಖೆ ನಡೆಸುತ್ತಿದೆ. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸೋಮವಾರ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಕ್ಸ್‌ವೆಲ್ ಕೂಡ ಸೇರ್ಪಡೆಗೊಂಡಿಲ್ಲ. ಅವರಿಗೆ ‘ವಿಶ್ರಾಂತಿ’ ನೀಡಲಾಗಿದೆ ಎಂದು ಹೇಳಲಾಗಿದೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಸಹ ಕ್ರಿಕೆಟಿಗ ಬ್ರೆಟ್‌ ಲೀ ಅವರ ರಾಕ್‌ ಬ್ಯಾಂಡ್‌ ʼಸಿಕ್ಸ್‌ ಆಂಡ್‌ ಔಟ್‌" ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದು, ಅಲ್ಲಿ ಅವರು ಪಾರ್ಟಿ ಮಾಡಿ ಹೆಚ್ಚಾಗಿ ಕುಡಿದಿದ್ದರು. ನಂತರ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಾಯಿತು ಎಂದು ಆಸ್ಟೇಲಿಯಾದ ದಿನ ಪತ್ರಿಕೆ ಬರೆದಿದೆ.

Advertisement

ಫೆಬ್ರವರಿ 2 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಸರಣಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ನಾಯಕತ್ವ ವಹಿಸಲಿದ್ದಾರೆ. ಫ್ರೇಸರ್ ಮಗರ್ಕ್ ಅವರನ್ನು ಈ ತಂಡದಲ್ಲಿ ಸೇರಿಸಲಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ಫೇಜರ್ ಮಗರ್ಕ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಕೆಲಸದ ಹೊರೆ ನಿರ್ವಹಣೆಯಲ್ಲಿ ಮ್ಯಾಕ್ಸ್‌ವೆಲ್‌ಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement
Advertisement