ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Zodiac Signs: ಮಾರ್ಚ್ ತಿಂಗಳಿನಲ್ಲಿ ಈ ರಾಶಿಯವರು ತುಂಬಾ ಲಕ್ಕಿ! ಇಲ್ಲಿದೆ ಅಸ್ಟ್ರೋ ಟಿಪ್ಸ್

06:31 PM Feb 26, 2024 IST | ಹೊಸ ಕನ್ನಡ
UpdateAt: 06:31 PM Feb 26, 2024 IST
Advertisement

Zodiac Sign: ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಚ್ ತಿಂಗಳು ಆರಂಭವಾಗಲಿದೆ. ಈ ತಿಂಗಳಲ್ಲಿ ಅನೇಕ ಗ್ರಹಗಳ ಸಂಚಾರವಿದ್ದು, ಅದರಿಂದ ಕೆಲ ರಾಶಿಯವರಿಗೆ ಅದೃಷ್ಟ ಹಾಗೂ ಸಂಪತ್ತು ಒಲಿಯಲಿದೆ. ಹಾಗಾದ್ರೆ ಈ ತಿಂಗಳಲ್ಲಿ ಯಾವ ಗ್ರಹಗಳ ಸಂಚಾರವಿದೆ ಅದರಿಂದ ಯಾರಿಗೆಲ್ಲಾ ಒಳ್ಳೆಯ ಫಲ ಸಿಗುತ್ತದೆ ಎಂಬುದು ಇಲ್ಲಿದೆ.

Advertisement

ಗ್ರಹಗಳು ತಮ್ಮ ಕಕ್ಷೆಯಲ್ಲಿ ನಿರಂತರವಾಗಿ ಸಂಚಾರ ಮಾಡುತ್ತಿರುತ್ತದೆ. ಅವುಗಳು ಆಗಾಗ ತಮ್ಮ ರಾಶಿಯನ್ನ ಬದಲಾವಣೆ ಮಾಡುತ್ತದೆ. ಕೆಲ ಗ್ರಹಗಳು ತಿಂಗಳಿಗೊಮ್ಮೆ ತನ್ನ ರಾಶಿಯನ್ನ ಬದಲಾಯಿಸುತ್ತವೆ. ಅವುಗಳ ಈ ಸಂಚಾರ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಗ್ರಹಗಳ ಸಂಚಾರದಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗಗಳ ಕಾರಣದಿಂದ ನಮಗೆ ಅದೃಷ್ಟ ಬರಬಹುದು ಅಥವಾ ಸಮಸ್ಯೆಗಳಾಗಬಹುದು.

ಒಂದು ರೀತಿಯಲ್ಲಿ ನಮ್ಮ ಜಾತಕ ಬದಲಾಗುವುದು ಈ ಗ್ರಹಗಳ ಸಂಚಾರದಿಂದ. ನಮ್ಮ ಜಾತಕದಲ್ಲಿ ಯಾವ ಗ್ರಹ ಯಾವ ಸ್ಥಾನದಲ್ಲಿದೆ ಎಂಬುದರ ಅನುಸಾರ ಭವಿಷ್ಯವನ್ನ ಊಹಿಸಬಹುದು. ಇನ್ನು ಕೆಲವೇ ದಿನಗಳಲ್ಲಿ ಮಾರ್ಚ್ ತಿಂಗಳು ಆರಂಭವಾಗುತ್ತದೆ. ಈ ತಿಂಗಳು ಬಹಳ ವಿಶೇಷವಾಗಿದ್ದು, ಕೆಲ ಗ್ರಹಗಳ ಸಂಚಾರ ನಡೆಯಲಿದೆ.

Advertisement

ಮಾರ್ಚ್ ತಿಂಗಳಲ್ಲಿ ಬುಧ, ಶುಕ್ರ, ಸೂರ್ಯ ಮತ್ತು ಮಂಗಳ ತಮ್ಮ ರಾಶಿಯನ್ನ ಬದಲಾವಣೆ ಮಾಡುತ್ತಿವೆ. ಈ ಸಂಚಾರದ ಕಾರಣದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ ಆಗುತ್ತದೆ. ಈ ರಾಶಿಯವರ ಜೀವನದಲ್ಲಿ ಎಲ್ಲಾ ರೀತಿಯಲ್ಲೂ ಯಶಸ್ಸು ಸಿಗುತ್ತದೆ. ಇವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಮಾರ್ಚ್ ತಿಂಗಳು ಅದೃಷ್ಟವನ್ನ ತರಲಿದೆ ಎಂಬುದು ಇಲ್ಲಿದೆ.

ಕನ್ಯಾ ರಾಶಿ: ಈ ರಾಶಿಯವರು ಗ್ರಹಗಳ ಸಂಚಾರದ ವಿಶೇಷ ಪ್ರಯೋಜನಗಳನ್ನು ಆನಂದಿಸಬಹುದು. ಈ ಸಮಯದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಇದು ನಿಮ್ಮ ಜೀವನದ ನಿಜವಾದ ಉದ್ದೇಶವನ್ನ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಯಶಸ್ಸು ಪಡೆಯಲು ಸಂಪೂರ್ಣ ಅವಕಾಶಗಳನ್ನು ನೀಡುತ್ತದೆ.ಸಾಲದ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

ತುಲಾ ರಾಶಿ: ಸೂರ್ಯ ಹಾಗೂ ಬುಧ ಸಂಚಾರದ ಕಾರಣದಿಂದ ನೀವು ಮಾರ್ಚ್ ತಿಂಗಳಲ್ಲಿ ಅಪೂರ್ಣ ಕಾರ್ಯಗಳನ್ನ ಪೂರ್ಣಗೊಳಿಸಬಹುದು. ನೀವು ಉನ್ನತ ಶಿಕ್ಷಣ ಅಥವಾ ಇತರ ಯಾವುದೇ ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗಬಹುದು. ದೊಡ್ಡ ಮಟ್ಟದ ಸಾಧನೆ ಮಾಡಲು ಇದು ಸರಿಯಾದ ಸಮಯವಾಗಿದೆ. ಈ ಅವಧಿಯಲ್ಲಿ ನೀವು ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವನ್ನು ಪಡೆಯುತ್ತೀರಿ.

Related News

Advertisement
Advertisement