For the best experience, open
https://m.hosakannada.com
on your mobile browser.
Advertisement

Speaking English: For ಮತ್ತು Since ಬಳಸುವುದು ಹೇಗೆ, ಬನ್ನಿ ಆತ್ಮವಿಶ್ವಾಸದಿಂದ ಇಂಗ್ಲೀಷ್ ಮಾತಾಡೋಣ !

Speaking English: ದೈನಂದಿನ ಸಂಭಾಷಣೆಯ ಪದಗುಚ್ಛಗಳನ್ನು ಸರಿಯಾಗಿ ಕಲಿಯಲು - ಬಳಸಲು ಬಯಸುತ್ತೀರಾದರೆ ನೀವು ಈ ಲೇಖನ ಓದಿ.
06:08 PM May 10, 2024 IST | ಸುದರ್ಶನ್ ಬೆಳಾಲು
UpdateAt: 06:08 PM May 10, 2024 IST
speaking english  for ಮತ್ತು since ಬಳಸುವುದು ಹೇಗೆ  ಬನ್ನಿ ಆತ್ಮವಿಶ್ವಾಸದಿಂದ ಇಂಗ್ಲೀಷ್ ಮಾತಾಡೋಣ
Advertisement

Speaking English: ಸಾಮಾನ್ಯ ಇಂಗ್ಲಿಷ್ ಮಾತನಾಡುವ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಅದರಲ್ಲೂ ಕೆಲವೊಂದು ಇಂಗ್ಲಿಷ್ ಪದಗಳ ಬಳಕೆ ಮಾಡುವಾಗ ತೀರಾ ಕನ್ಫಯೂಸ್ ಆಗಿಬಿಡುತ್ತೇವೆ. ಇವತ್ತು ಅಂತಹಾ ಸಾಮಾನ್ಯ ತಪ್ಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಇವು ಇಂಗ್ಲಿಷ್ ಕಲಿಯುವವರು ಮಾಡುವ ಸಾಮಾನ್ಯ ತಪ್ಪುಗಳು. ಅಲ್ಲದೆ ಈ ತಪ್ಪುಗಳನ್ನು ಚೆನ್ನಾಗಿ ಇಂಗ್ಲಿಷ್ ಬಲ್ಲ, ಅಥವಾ ತಮಗೆ ಚೆನ್ನಾಗಿ ಇಂಗ್ಲಿಷ್ ಬರುತ್ತೆ ಎಂದುಕೊಂಡ ಇಂಗ್ಲಿಷ್ ಮಾತನಾಡುವವರು ಸಹ ಮಾಡುತ್ತಾರೆ! ನೀವು ಖಂಡಿತವಾಗಿಯೂ ಈ ದೈನಂದಿನ ಸಂಭಾಷಣೆಯ ಪದಗುಚ್ಛಗಳನ್ನು ಸರಿಯಾಗಿ ಕಲಿಯಲು - ಬಳಸಲು ಬಯಸುತ್ತೀರಾದರೆ ನೀವು ಈ ಲೇಖನ ಓದಿ. ಇನ್ನು ಮುಂದೆ ನಿಮ್ಮ ಇಂಗ್ಲಿಷ್ ಹೆಚ್ಚು ನಿರರ್ಗಳವಾಗಿ ಇರೋದಲ್ಲದೆ, ನೀವು ಇನ್ನಷ್ಟು ಆತ್ಮವಿಶ್ವಾಸದಿಂದ ಇರುವವರಂತಾಗುತ್ತೀರಿ.

Advertisement

ಆದ್ದರಿಂದ ನಾವು ಮಾಡುವ ಸಾಮಾನ್ಯ ಇಂಗ್ಲಿಷ್ ತಪ್ಪುಗಳಿಗೆ ನೇರವಾಗಿ ಹೋಗೋಣ.
1. Since Vs For:
ಇದು ನಾವು ಮಾಡುವ ನಮ್ಮ ಮೊದಲ ಸಾಮಾನ್ಯ ತಪ್ಪು "Since" ವಿರುದ್ಧ "For" ಬಳಕೆ." ಇವುಗಳಲ್ಲಿ ಒಂದನ್ನು ನಾವು ನಿರ್ದಿಷ್ಟ ಸಮಯ ಅಥವಾ ದಿನಾಂಕದೊಂದಿಗೆ ಬಳಸುತ್ತೇವೆ, ಮತ್ತು ಇನ್ನೊಂದನ್ನು ನಾವು ಸಮಯದ ಅವಧಿ ಸೂಚಿಸಲು ಬಳಸುತ್ತೇವೆ. ಯಾವುದು ಎಲ್ಲಿ ಬಳಕೆ ಗೊತ್ತಾ? ಬನ್ನಿ ಈ ಅತಿ ಸಾಮಾನ್ಯ ತಪ್ಪನ್ನು ನೋಡೋಣ:
I have been in the United States since 5 years
ನಾನು 5 ವರ್ಷಗಳಿಂದ ಅಮೇರಿಕಾದಲ್ಲಿದ್ದೇನೆ. ಇಲ್ಲಿ ಬರೆದ ಇಂಗ್ಲಿಷ್ ತಪ್ಪಾಗಿದೆ. ಈ ಹೇಳಿಕೆಯನ್ನು ಸರಿಯಾಗಿ ಹೇಳಲು ನೀವು, ಪ್ರಯತ್ನಿಸಿ: ಇಲ್ಲಿದೆ ನೋಡಿ ಸರಿಯಾದ ಪ್ರಯೋಗ.
I have been in the United States for 5 years - ಇದು ಸರಿ. (ನಾನು ನಾಲ್ಕು ವರ್ಷಗಳಿಂದ ಅಮೇರಿಕಾದಲ್ಲಿದ್ದೇನೆ.)
I have been in the United States since 2019 - ಇದು ಕೂಡಾ ಸರಿ. (ನಾನು 2018 ರಿಂದ ಅಮೇರಿಕಾದಲ್ಲಿದ್ದೇನೆ.)

"For" ಅನ್ನು ವರ್ಷಗಳ ಸಂಖ್ಯೆಯಂತಹ ಸಮಯದ ಅವಧಿಯೊಂದಿಗೆ ಮಾತ್ರ ಬಳಸಲಾಗುತ್ತದೆ ಎಂದು ಈಗ ನಿಮಗೆ ತಿಳಿಯಿತಲ್ಲವೇ? "Since" ಅನ್ನು ನಿರ್ದಿಷ್ಟ ಸಮಯದೊಂದಿಗೆ ಬಳಸಲಾಗುತ್ತದೆ. ಅದನ್ನು ಪ್ರಶ್ನೆಯಲ್ಲಿ ಹೇಗೆ ಬಳಸುವುದು ಎಂದು ಈಗ ನೋಡೋಣ:
For how long have you been studying English? Idu ಸರಿಯಾದ ವಾಕ್ಯ ಪ್ರಯೋಗ.
(ನೀವು ಎಷ್ಟು ಸಮಯದಿಂದ ಇಂಗ್ಲಿಷ್ ಕಲಿಯುತ್ತಿದ್ದೀರಿ?) ( ಇಲ್ಲಿನ ಉತ್ತರವು ಸಮಯದ ಅವಧಿಯಾಗಿದೆ). ಅದೇ ಇನ್ನೊಂದು ವಾಕ್ಯವನ್ನು ಗಮನಿಸಿ.
Since when have you been studying English ? Idu ಕೂಡಾ ಸರಿ.
ನೀವು ಯಾವಾಗಿನಿಂದ ಇಂಗ್ಲಿಷ್ ಕಲಿಯುತ್ತಿದ್ದೀರಿ? (ಉತ್ತರವು ನಿರ್ದಿಷ್ಟ ದಿನಾಂಕವನ್ನು ಸೂಚಿಸುತ್ತದೆ, ಅಂದರೆ ಉದಾಹರಣೆಗೆ 2019 ಇಸವಿ)

Advertisement

ಒಂದು ವಾಕ್ಯದಲ್ಲಿ ಭೂತಕಾಲವನ್ನು ಎರಡು ಬಾರಿ ಬಳಸುವುದು (Using Past tense twice in a sentence)

ಬಹಳಷ್ಟು ಜನರು ಈ ರೀತಿ ಮಾಡುತ್ತಾರೆ. ಭೂತಕಾಲವನ್ನು ಎರಡೆರಡು ಬಾರಿ ಬಳಸುತ್ತಾರೆ, ಅದು ತಪ್ಪು. ಇಲ್ಲಿದೆ ನೋಡಿ ಕೆಲ ಉದಾಹರಣೆ.
I didn't went to college (ನಾನು ಪಾರ್ಟಿಗೆ ಹೋಗಿಲ್ಲ)
I didn't wrote exam yesterday (ನಾನು ನಿನ್ನೆ ಪರೀಕ್ಷೆ ಬರೆದಿಲ್ಲ). ಈ ಎರಡೂ ಉದಾಹರಣೆಗಳಲ್ಲಿ ಕೂಡಾ did (do ನ ಭೂತಕಾಲ) ಬಳಸಿದ ನಂತರ ಮತ್ತೊಂದು ಬಾರಿ ಭೂತಕಾಲ ಪ್ರಯೋಗ ಸಲ್ಲದು. ಅಂದ್ರೆ went ಬದಲು go ಬಳಸಬೇಕು. I didn't wrote exam yesterday ಕೂಡಾ ತಪ್ಪು. ಬದಲಿಗೆ I didn't write exam yesterday ಎಂದಾಗಬೇಕು.

I ವರ್ಸಸ್ Me
ಇದು ವಾಕ್ಯದ ವಿಷಯದಲ್ಲಿ ಬಳಸಲಾಗುವ ಸರ್ವನಾಮದ ನಡುವಿನ ವಿಚಾರ. ಈ ವಾಕ್ಯಗಳನ್ನು ನೋಡಿ.
Are you coming with him? (ನೀವು ಅವನೊಂದಿಗೆ ಬರುತ್ತೀರಾ?)- ಇದು ಸರಿಯಾದ ಪ್ರಯೋಗ.
Are you coming with he?- ಇದು ತಪ್ಪು ಪದ ಬಳಕೆ.
ಇಲ್ಲಿ "him" ಅನ್ನು ಬಳಸಿದ್ದೇನೆ ಮತ್ತು "he " ಅಲ್ಲ ಎಂದು ಗಮನಿಸಿ. ಏಕೆಂದರೆ "him" ಎಂಬುದು ನಾವು ವಾಕ್ಯದಲ್ಲಿ ಬಳಸಬೇಕಾದ ಸರ್ವನಾಮವಾಗಿದೆ. ನಾವು ಯಾವತ್ತೂ Are you coming with he?
Is it Her book ? ಐಸ್ ಇಟ್ ಹರ್ ಬುಕ್ ? (ಅದು ಅವಳ ಪುಸ್ತಕವೇ?)- ಇದು ಸರಿ.
Is it she book ? ಐಸ್ ಇಟ್ ಶಿ ಬುಕ್ ? ಇದು ತಪ್ಪಾದ ಬಳಕೆ.
He- Him, She- Her, They-Their, I- Me ಇತ್ಯಾದಿ ರೀತಿಯಾಗಿ ಬಳಸಬಹುದು.

ಅದೇ ರೀತಿಯಲ್ಲಿ, ನೀವು " I " ಮತ್ತು "Me" ಅನ್ನು ಬಳಸಬೇಕಾಗುತ್ತದೆ.
Are you coming with me? ನೀನು ನನ್ನ ಜೊತೆ ಬರುತ್ತೀಯಾ? ಇದು ಸರಿಯಾದ ಪ್ರಯೋಗ. (Are you coming with I?) ಇದು ತಪ್ಪು ಬಳಕೆ.
Are you coming with us? (Are you coming with we?) ನೀನು ನಮ್ಮೊಂದಿಗೆ ಬರುತ್ತೀರಾ? ಇದು ಸರಿಯಾದ ಪ್ರಯೋಗ. Are you coming with we - ಇದು ಪೂರ್ತಿ ತಪ್ಪು. ನಾಳೆ ಮತ್ತಷ್ಟು ಹೊಸ ಸ್ಪೋಕನ್ ಇಂಗ್ಲೀಷ್ ಕಲಿಯೋಣ.

Advertisement
Advertisement
Advertisement