For the best experience, open
https://m.hosakannada.com
on your mobile browser.
Advertisement

Speaking English: Still ಮತ್ತು Yet ಬಳಕೆ ಬಗ್ಗೆ ಕನ್ಫ್ಯೂಷನ್ ಇದ್ಯಾ? Anybody Vs Nobody ಬಳಕೆ ಬಗ್ಗೆ ಮಾಹಿತಿ !

Speaking English: ಇವತ್ತು ಇಂಗ್ಲಿಷ್ ಸ್ಪೀಕಿಂಗ್ ನಲ್ಲಿ ಆಗುವ ಸಾಮಾನ್ಯ ತಪ್ಪುಗಳು ಮತ್ತು ಅದರ ಸರಿ ಉತ್ತರಗಳ ಬಗ್ಗೆ ನೋಡೋಣ.
01:03 PM May 11, 2024 IST | ಸುದರ್ಶನ್ ಬೆಳಾಲು
UpdateAt: 11:17 PM May 11, 2024 IST
speaking english  still ಮತ್ತು yet ಬಳಕೆ ಬಗ್ಗೆ ಕನ್ಫ್ಯೂಷನ್ ಇದ್ಯಾ   anybody vs nobody ಬಳಕೆ ಬಗ್ಗೆ ಮಾಹಿತಿ
Advertisement

Speaking English: ಕಷ್ಟವೋ, ಇಷ್ಟವೋ ಇಂಗ್ಲಿಷ್ ಭಾಷೆಯು ದೇಶಗಳ ಗಡಿಯನ್ನು ಲಟಕ್ಕಂತ ಮುರಿದು ಮುನ್ನುಗ್ಗಿದ ಭಾಷೆ. ಬಹುತೇಕ ಜ್ಞಾನ ಮತ್ತು ಅದರ ಸಂವಹನ ಇಂಗ್ಲಿಷ್ ಭಾಷೆಯ ಮೂಲಕವೇ ಆಗುತ್ತದೆ. ಹಾಗಾಗಿ ಒಳ್ಳೆಯ ತಪ್ಪಿಲ್ಲದ ಸ್ಪೋಕನ್ ಇಂಗ್ಲಿಷ್ (spoken English) ನಮ್ಮದಾಗಬೇಕು. ನಾವಿಲ್ಲಿ ಇವತ್ತು ಇಂಗ್ಲಿಷ್ ಸ್ಪೀಕಿಂಗ್ ನಲ್ಲಿ ಆಗುವ ಸಾಮಾನ್ಯ ತಪ್ಪುಗಳು ಮತ್ತು ಅದರ ಸರಿ ಉತ್ತರಗಳ ಬಗ್ಗೆ ನೋಡೋಣ.

Advertisement

Double Negatives (ಡಬಲ್ ನೆಗೆಟಿವ್ಸ್)
ಕೆಲವರು ಕೆಲವೊಮ್ಮೆ ಡಬಲ್ ನೆಗೆಟಿವ್‌ಗಳನ್ನು ಬಳಸುತ್ತಾರೆ. ಉದಾಹರಣೆಗೆ, ತಮಾಷೆಯಾಗಿ ಹೇಳಬೇಕೆಂದರೆ, '' ಡೋಂಟ್ ವರಿ ಮಾಡ್ಕೋಬೇಡಿ'' ಅನ್ನುತ್ತೇವೆ. ಇಲ್ಲಿ 'ಡೋಂಟ್' ಅಂತ ಹೇಳಿದ ಮೇಲೆ 'ಬೇಡಿ' ಅಂತ ಪದ ಬಳಸಬಾರದು. ಇಂಥದ್ದೇ ಬೇರೆ ಉದಾಹರಣೆ ನೋಡಿ.
I don’t need no money to have fun- ಇದು ತಪ್ಪು. ಇಲ್ಲಿ don't ಮತ್ತು No - ಹೀಗೆ ಎರಡೆರಡು ನೆಗೆಟಿವ್ ಪದಗಳು ಬಂದಿವೆ.
I don’t need any money to have fun- ಇದು ಸರಿ.
'ಮೋಜು ಮಾಡಲು ನನಗೆ ಯಾವುದೇ ಹಣದ ಅಗತ್ಯವಿಲ್ಲ' ಎನ್ನುವುದು ಈ ವಾಕ್ಯದ ಸಾರಾಂಶ. ಇನ್ನೊಂದೆರಡು ವಾಕ್ಯಗಳನ್ನು ಗಮನಿಸಿ.
He’s going nowhere- ಆತ ಎಲ್ಲಿಗೂ ಹೋಗಲ್ಲ. ಇದು ಸರಿಯಾದ ವಾಕ್ಯ.
He’s not going nowhere- ಇದು ತಪ್ಪು ವಾಕ್ಯ.

Still Vs Yet
ಇವು ಸದಾ ಗೊಂದಲ ಉಂಟು ಮಾಡುವ ಪದಗಳು. Still Vs Yet ಪದಬಳಕೆ ತಪ್ಪಾಗೋದು ಸಾಕಷ್ಟು ಒಳ್ಳೆಯ ಇಂಗ್ಲಿಷ್ ಬಲ್ಲವರಿಗೂ ಆಗುತ್ತದೆ. “Still” (ಇನ್ನೂ) ಎಂಬುದು ಹಿಂದೆ ಪ್ರಾರಂಭವಾಗಿರುವ ಮತ್ತು ವರ್ತಮಾನದ ಮೂಲಕ ಈಗಲೂ ಮುಂದುವರಿಯುವ ಸಂಗತಿಯಾಗಿದೆ. ಉದಾಹರಣೆಗೆ : Are you still watching that show on Netflix? (the one you were watching yesterday). ಅಂದರೆ ನಿನ್ನೆ ನೀವು ನೆಟ್ ಫ್ಲಿಕ್ಸ್ ನಲ್ಲಿ ಶೋ ನೋಡುತ್ತಿದ್ದೀರಿ. ಈಗ '' ಈಗಲೂ ಅಥವಾ ''ಇನ್ನೂ'' ಅದೇ ಶೋ ಅನ್ನು ನೆಟ್ ಫ್ಲಿಕ್ಸ್ ನಲ್ಲಿ ನೋಡುತ್ತಿದ್ದೀರಾ ? ಎಂದೋ ಕೇಳಲು Still ಅನ್ನು ಬಳಸಲಾಗುತ್ತದೆ.

Advertisement

ಆದರೆ "Yet " ಪದದ ಬಳಕೆ ಬೇರೆಯ ಸಂದರ್ಭದಲ್ಲಿ ಆಗುತ್ತದೆ. ನಾವು ಯಾವುದೋ ವಿಷಯ ಅಥವಾ ಘಟನೆಯನ್ನು ಬಯಸುತ್ತಿದ್ದೇವೆ. ಆದರೆ ನಾವು ಬಯಸುವ ವಿಷಯ ಇನ್ನೂ ಸಂಭವಿಸಿಲ್ಲ. ಅನಾಥಾ ಸಂದರ್ಭಗಳನ್ನು ಹೇಳುವಾಗ Yet ಎಂಬ ಪದದ ಪ್ರಯೋಗ ಮಾಡುತ್ತೇವೆ. ಹಾಗಾಗಿ Since ಮತ್ತು Yet ಪದಗಳ ಮಧ್ಯೆ ಸಾಕಷ್ಟು ವ್ಯತ್ಯಾಸ ಇರೋದು ಸ್ಪಷ್ಟವಾಗಿದೆ.
ಉದಾಹರಣೆಗೆ: Have you seen that show on Netflix yet? (I don’t think you have seen it), ನೀನು ನೆಟ್ ಫ್ಲಿಕ್ಸ್ ನಲ್ಲಿ ಆ ಶೋವನ್ನು ಇನ್ನೂ ನೋಡಿಲ್ವಾ ?

Anybody Vs Nobody (ಯಾರಾದರೂ Vs ಯಾರೂ ಇಲ್ಲ):
ಇದು ಮತ್ತೊಂದು ದೊಡ್ಡ ಕನ್ಫ್ಯೂಷನ್ ಉಂಟು ಮಾಡಬಲ್ಲ ಪದಗಳು. ಯಾವಾಗ ನಾವು ಯಾವುದಾದರೂ ಕೆಲಸವನ್ನು ಯಾರೂ ಮಾಡಲು ಒಪ್ಪಿಕೊಳ್ಳೋದಿಲ್ಲ ಅಂತ ಅಂದುಕೊಳ್ಳುವ ಸಮಯ ನಾವು Nobody ಅನ್ನುವ ಪದ ಬಳಸಬೇಕು.
ಉದಾಹರಣೆಗೆ:
1) Nobody wants any ice cream (ಯಾರಿಗೂ ಐಸ್ ಕ್ರೀಂ ಬೇಡ/ ಅಥವಾ ಇಷ್ಟ ಇಲ್ಲ)
2) Nobody wants to die (ಯಾರಿಗೂ ಸಾಯಲು ಇಷ್ಟ ಇಲ್ಲ)
ಕೆಲವರು Nobody ಬದಲಿಗೆ Noone ಅಂತ ಹೇಳುವುದಿದೆ. ಇದು ಕೂಡಾ ಸರಿಯಾದ ಪ್ರಯೋಗವಲ್ಲ. ಹಾಗಾಗಿ ಯಾರಿಗೂ ಅಸಾಧ್ಯ, ಯಾರಿಗೂ ಇಷ್ಟ ಇಲ್ಲ, ಯಾರಿಗೂ ಬೇಡ ಮುಂತಾದ ಸಂದರ್ಭಗಳಲ್ಲಿ Nobody ಅನ್ನುವ ಪದವನ್ನೇ ಬಳಸಿ ಮಾತನಾಡಿ.

ಈಗ ಮಳೆ, ತುಂಬಾ ಚಳಿ ಬೇರೆ. ಹಾಗಾಗಿ ನೀವು ಐಸ್ ಕ್ರೀಮ್ ತಿನ್ನಲು ಬಯಸುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ. ಇಂತಹಾ ಸಂದರ್ಭಗಳಲ್ಲಿ Does anybody (or Does anyone) want some ice cream? ಅಂದರೆ, ಯಾರಿಗಾದರೂ ಸ್ವಲ್ಪ ಐಸ್ ಕ್ರೀಮ್ ಬೇಕೇ? ಎಂದು ಕೇಳುತ್ತೇವೆ.
1) Anybody would think that its easy ? - ಅದು ಸುಲಭ ಎಂದು ಯಾರಾದರೂ ಯೋಚಿಸಿದ್ದೀರಾ ?
2) I don't know how anybody can believe that lie- ನಂಗೊತ್ತಿಲ್ಲ, ಹೇಗೆ ಯಾರಾದರೂ ಆ ಸುಳ್ಳನ್ನು ನಂಬಿದ್ದಾರೋ ?
3) Anybody there ?- (ಅಲ್ಲಿ) ಯಾರಾದರೂ ಇದ್ದೀರಾ ?
ಇನ್ನಷ್ಟು ಇಂತಹುದೇ ವಾಕ್ಯಗಳನ್ನು ಅಧ್ಯಯನ ಮಾಡಿ. ಸುಂದರ ಮತ್ತು ಸುಲಲಿತ ಇಂಗ್ಲಿಷ್ ನಿಮ್ಮದಾಗಲಿ.

ಇದನ್ನೂ ಓದಿ: Speaking English ; For ಮತ್ತು Since ಬಳಸುವುದು ಹೇಗೆ? ಬನ್ನಿ ಆತ್ಮವಿಶ್ವಾಸದಿಂದ ಇಂಗ್ಲೀಷ್ ಮಾತಾಡೋಣ !

Advertisement
Advertisement
Advertisement