For the best experience, open
https://m.hosakannada.com
on your mobile browser.
Advertisement

Solar Eclipse: ಈ ವರ್ಷದ ಮೊದಲ ಸೂರ್ಯಗ್ರಹಣ ಎಂದು? ಈ 'ಮ್ಯಾಪ್ ಆಫ್ ನೋಪ್' ಎಂದರೇನು?

12:36 PM Mar 20, 2024 IST | ಹೊಸ ಕನ್ನಡ
UpdateAt: 12:46 PM Mar 20, 2024 IST
solar eclipse  ಈ ವರ್ಷದ ಮೊದಲ ಸೂರ್ಯಗ್ರಹಣ ಎಂದು  ಈ  ಮ್ಯಾಪ್ ಆಫ್ ನೋಪ್  ಎಂದರೇನು

Solar Eclipse: ಏಪ್ರಿಲ್ 8, 2024 ರಂದು ಅಮೆರಿಕದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಕ್ಷಣಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ವರದಿಯ ಪ್ರಕಾರ ಈ ಅಪರೂಪದ ದೃಶ್ಯ ಹಲವೆಡೆ ಕಾಣಸಿಗುತ್ತಿಲ್ಲ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾವನ್ನು ಹೊರತುಪಡಿಸಿ ಅಮೆರಿಕದ ಕೆಲವು ಭಾಗಗಳಲ್ಲಿ ಇದರ ಪರಿಣಾಮ ಗೋಚರಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ‘ಮ್ಯಾಪ್ ಆಫ್ ನೋಪ್’ ಎಂದರೇನು? ಬನ್ನಿ ತಿಳಿಯೋಣ.

Advertisement

ಇದನ್ನೂ ಓದಿ: Elon Musk: ಡ್ರಗ್ಸ್ ಸೇವನೆಯಿಂದ ಟೆಸ್ಲಾ ಕಂಪನಿ ಮುನ್ನಡೆಸಲು ಸಾಧ್ಯವಾಗಿದೆ : ಮಾದಕವಸ್ತು ಬಳಕೆ ಸಮರ್ಥಿಸಿಕೊಂಡ ಎಲೋನ್ ಮಸ್ಕ್

ಸಂಪೂರ್ಣ ಸೂರ್ಯಗ್ರಹಣ ಗೋಚರಿಸದ ಅಮೆರಿಕದ ನಗರಗಳ ನಕ್ಷೆಯನ್ನು ಮಾಡಲಾಗಿದೆ. ಈ ಭಾಗಗಳಲ್ಲಿ ಸೂರ್ಯಗ್ರಹಣದ ಭಾಗಶಃ ಹಂತವನ್ನು ಮಾತ್ರ ಕಾಣಬಹುದು ಎಂದು ಹೇಳಲಾಗುತ್ತಿದೆ. ಗ್ರೇಟ್ ಅಮೇರಿಕನ್ ಎಕ್ಲಿಪ್ಸ್ ಡಾಟ್ ಕಾಮ್‌ನ ಸಹ-ಸಂಸ್ಥಾಪಕ ಮೈಕೆಲ್ ಝೈಲರ್ ವಿಶೇಷ ನಕ್ಷೆಯನ್ನು ರಚಿಸಿದ್ದಾರೆ. ಅದರ ಹೆಸರು 'ಮ್ಯಾಪ್ ಆಫ್ ನೋಪ್'.

Advertisement

ಇದನ್ನೂ ಓದಿ: CCTV Footage: ಅಪ್ಪನ ತೋಳಿನಲ್ಲಿದ್ದ ಮಗು ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ದಾರುಣ ಸಾವು

ಝೈಲರ್ ಮಾಡಿದ ನಕ್ಷೆಯಲ್ಲಿ ಓರೆಯಾದ ಪಟ್ಟಿಯನ್ನು ತೋರಿಸಲಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುತ್ತದೆ. ಈ ಅವಧಿಯಲ್ಲಿ ಸೂರ್ಯನ ಕಿರಣಗಳು ಭೂಮಿಯ ಕೆಲವು ಭಾಗಗಳನ್ನು ತಲುಪುವುದಿಲ್ಲ. ಈ ವೇಳೆ ಹಗಲಿನಲ್ಲಿಯೂ ಕ್ಷಣಕಾಲ ರಾತ್ರಿಯಂತಹ ದೃಶ್ಯ ಕಾಣಿಸುತ್ತದೆ.

ನಾಸಾ ಕೂಡ ಮುಂಬರುವ ಸೂರ್ಯಗ್ರಹಣದ ಬಗ್ಗೆ ಮುನ್ಸೂಚನೆ ನೀಡಿದೆ. ಮುಂಬರುವ ಸೂರ್ಯಗ್ರಹಣದ ಸಮಯದಲ್ಲಿ ಸಾಕಷ್ಟು ಕತ್ತಲೆಯಾಗಲಿದೆ ಎಂದು ಸಂಸ್ಥೆ ಹೇಳುತ್ತದೆ. ಒಂದು ಹಂತದಲ್ಲಿ ಹಗಲು ರಾತ್ರಿ ಅಥವಾ ಸಂಜೆಯಾಗಿ ಬದಲಾಗುವ ಪರಿಸ್ಥಿತಿ ಇರುತ್ತದೆ.

Advertisement
Advertisement