For the best experience, open
https://m.hosakannada.com
on your mobile browser.
Advertisement

Shrinagar: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ - ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ ಹಿಂದಿದ್ಯಾ ಅಣು ಬಾಂಬ್ ಬೆದರಿಕೆ ?

Shrinagar: ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ (Farooq Abdullah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
06:48 AM May 07, 2024 IST | ಸುದರ್ಶನ್
UpdateAt: 06:55 AM May 07, 2024 IST
shrinagar  ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ   ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ ಹಿಂದಿದ್ಯಾ ಅಣು ಬಾಂಬ್ ಬೆದರಿಕೆ

Advertisement

Shrinagar: ಪಾಪು ಆಕ್ರಮಿತ ಭಾರತವನ್ನು ಭಾರತದಲ್ಲಿ ವಿಲೀನಗೊಳಿಸುವ ಬಗ್ಗೆ ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಕೈಗೆ ಬಳೆ ತೊಟ್ಟಿಕೊಂಡಿಲ್ಲ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ (Farooq Abdullah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Alto Car : BMW, ಬೆಂಝ್‌ ಅಂತ ಐಷಾರಾಮಿ ಕಾರಿಗೂ ಸಾಧ್ಯವಿಲ್ಲ ಭಾರತದ ಈ ಚಿಕ್ಕ ಕಾರಿನ ದಾಖಲೆ ಮುರಿಯಲು !!

Advertisement

ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತದೊಂದಿಗೆ ವಿಲೀನಗೊಳಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಫಾರೂಕ್‌ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ರಕ್ಷಣಾ ಸಚಿವರು ಹೇಳುತ್ತಿದ್ದಾರೆ -ಮುಂದುವರಿಯಿರಿ, ನಾವು ತಡೆಯಲು ಯಾರು? ಆದರೆ ನೆನಪಿಡಿ, ಪಾಕಿಸ್ತಾನ ಬಳೆಗಳನ್ನು ಧರಿಸಿಲ್ಲ" ಎಂದಿದ್ದಾರೆ ಫಾರೂಕ್ ಅಬ್ದುಲ್ಲಾ. ಅಂದರೆ 'ಸೂಕ್ಷ್ಮವಾಗಿ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ, ಅದನ್ನು ಉಪಯೋಗಿಸುತ್ತದೆ ಎಂದಿದ್ದಾರೆ' ಫಾರೂಖ್ ಅಬ್ದುಲ್ಲ.

ಇದನ್ನೂ ಓದಿ: T20 World Cup 2024: ಭಾರತ ತಂಡದ ಹೊಸ ಜೆರ್ಸಿ ಅನಾವರಣ, ವಿಡಿಯೋ ರಿಪೋರ್ಟ್ !

ರಾಜನಾಥ್ ಸಿಂಗ್ ಹೇಳಿದ್ದೇನು?

'ಭಾರತ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಸೇನಾ ಬಲ ಪ್ರಯೋಗಿಸುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಅಭಿವೃದ್ಧಿಗಳನ್ನು ಕಂಡು ಅಲ್ಲಿನ ಜನರೇ ಭಾರತದ ಭಾಗವಾಗಲು ಬಯಸುತ್ತಾರೆ. ನನ್ನ ಪ್ರಕಾರ ಭಾರತ ಏನೂ ಮಾಡುವುದು ಬೇಕಿಲ್ಲ" ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

ಜತೆಗೆ, 'ಜಮ್ಮು ಕಾಶ್ಮೀರದ ಆರ್ಥಿಕ ಪ್ರಗತಿ ಹಾಗೂ ಶಾಂತಿ ಮರಳಿದ ರೀತಿಯನ್ನು ಕಂಡಾಗ ಭಾರತದ ಜೊತೆ ವಿಲೀನಗೊಳ್ಳಬೇಕು ಎಂದು ಪಿಒಕೆ ಜನರೇ ಡಿಮಾಂಡ್‌ ಮಾಡುತ್ತಾರೆ. ಭಾರತದೊಂದಿಗೆ ಸೇರಬೇಕು ಎಂದು ಜನರೇ ಹೇಳುವುದರಿಂದ ನಾವು ಪಿಒಕೆಯನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗಿಸುವ ಅಗತ್ಯ ಬರಲ್ಲ. POK ಹಿಂದೆ, ಈಗ ಮತ್ತು ಎಂದೆಂದಿಗೂ ನಮ್ಮದೇ" ಎಂದು ಪುನರುಚ್ಚರಿಸಿದ್ದರು. ಅದಕ್ಕೆ ಫಾರೂಕ್ ಅಬ್ದುಲ್ಲಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Advertisement
Advertisement