RCB ಪುರುಷರ ತಂಡಕ್ಕೆ ಶ್ರೇಯಾಂಕ ಪಾಟೀಲ್ ಸೇರ್ಪಡೆ? : ಐಪಿಎಲ್ ಇತಿಹಾಸದಲ್ಲಿಯೇ ಹೊಸ ಬದಲಾವಣೆ?
RCB: ಸತತ 16 ವರ್ಷಗಳಿಂದಲೂ ಹೀನಾಯ ಪ್ರದರ್ಶನ ನೀಡುತ್ತಿರುವ, ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಗೆಲ್ಲದ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿರುವ ಆರ್‌ಸಿಬಿ ತಂಡ ಈ ಬಾರಿಯ ಐಪಿಎಲ್ ನಲ್ಲೂ ಮತ್ತೊಮ್ಮೆ ಮುಗ್ಗರಿಸಿ ಬೀಳುವ ಹಾಗೆ ಕಾಣುತ್ತಿದೆ. ಈ ಬಾರಿಯ ಐಪಿಎಲ್ ನ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇದರಿಂದ ಅಭಿಮಾನಿಗಳು ಆರ್ಸಿಬಿಯ ಆಡಳಿತ ಮಂಡಳಿ ವಿರುದ್ಧ ತಿರುಗಿ ಬೀದಿದ್ದಾರೆ. ಆರ್ಸಿಬಿಯ ದುರಂತವೆಂದರೆ ಈ ಬಾರಿ ಅದರ ಬಳಿ ಉತ್ತಮ ಬೌಲರ್ಗಳು ಇಲ್ಲದೆ ಇರುವುದು. ಆದರೆ ಈ ನಡುವೆ ಒಂದು ಅಚ್ಚರಿಯ ಸುದ್ದಿ ಕೇಳಿ ಬರುತ್ತಿದ್ದು ಈ ಬಾರಿ ಪುರುಷರ ಐಪಿಎಲ್ ತಂಡಕ್ಕೆ, ಮಹಿಳಾ ತಂಡದ ಆಟಗಾರ್ತಿ ಕನ್ನಡತಿ ಶ್ರೇಯಾಂಕ ಪಾಟೀಲ್ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ.
ಇದನ್ನೂ ಓದಿ: HSRP: ಈ ಕೆಲಸ ಮಾಡಿದರೆ HSRP ನಂಬರ್ ಪ್ಲೇಟ್ ಇಲ್ಲದಿದ್ದರೂ ಫೈನ್ ಬೀಳಲ್ಲ !!
ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 182 ರನ್ ಗಳಿಸಿತ್ತು ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದನ್ನು ಕೇವಲ 16.5 ಓವರ್‌ಗೆ ಭರ್ಜರಿ 186 ರನ್ ಗಳಿಸಿ ಗೆದ್ದು ಬೀಗಿತ್ತು. ಹೀಗೆ ಆರ್‌ಸಿಬಿ ಮತ್ತೊಮ್ಮೆ ಸೋತಾಗಿನಿಂದ ಈ ಮಾತು ಕೇಳಿಬರುತ್ತಿದೆ. ಅದು ಏನೆಂದರೆ ಸರಿಯಾದ ಬೌಲರ್‌ಗನ್ನೇ ಹೊಂದಿರದ, ಅದರಲ್ಲಿಯು ಪ್ರಮುಖವಾಗಿ ಸ್ಪಿನ್ ಬೌಲರ್ ಇಲ್ಲದೆ ನರಳಾಡುತ್ತಿರುವ ಆರ್‌ಸಿಬಿ ತಂಡಕ್ಕೆ ಕರ್ನಾಟಕದ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಐಪಿಎಲ್ ಇತಿಹಾಸದಲ್ಲೇ, ಪುರುಷರ ತಂಡಕ್ಕೆ ಮಹಿಳಾ ಆಟಗಾರ್ತಿಯಾಗಿ ಎಂಟ್ರಿ ಕೊಡ್ತಾರಾ? ಎಂಬ ಊಹಾಪೋಹಗಳು ಎದ್ದಿವೆ.
ಇದನ್ನೂ ಓದಿ: Tirupati: ತಿರುಪತಿಗೆ ಹೋಗುವವರಿಗೆ ಗುಡ್ ನ್ಯೂಸ್, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ನಿಜವಾಗಲಿದೆಯ ಆರ್ಸಿಬಿ ಅಭಿಮಾನಿಗಳ ಕನಸು?
ಐಪಿಎಲ್ ನಿಯಮಗಳ ಪ್ರಕಾರ ಮಹಿಳಾ ಆಟಗಾರ್ತಿಯೊಬ್ಬರನ್ನು ಪುರುಷರ ತಂಡಕ್ಕೆ ಸೇರ್ಪಡೆ ಗೊಳಿಸುವ ಯಾವುದೇ ಅವಕಾಶಗಳು ಇಲ್ಲ. ಆದರೆ ಆರ್‌ಸಿಬಿ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಶ್ರೇಯಾಂಕ ಪಾಟೀಲ್ ಅವರನ್ನು ತಂಡಕ್ಕೆ ಸೇರಿಸಿ ಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆರ್ಸಿಬಿ ಮಹಿಳಾ ಆಟಗಾರ್ತಿಯರ ತಂಡ ಈ ಬಾರಿಯ ಐಪಿಎಲ್ ಕಪ್ ಗೆಲ್ಲಲು ಮುಖ್ಯ ಕಾರಣವಾಗಿರುವ ಶ್ರೇಯ ಪಾಟೀಲ್ ಅವರನ್ನ ತಂಡಕ್ಕೆ ಸೇರಿಸಿ ತಂಡವನ್ನು ಬಲಿಷ್ಠಗೊಳಿಸುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.
ಶ್ರೇಯಾಂಕಾ ಪಾಟೀಲ್ಗೆ ತಂದೆಯೇ ಸ್ಫೂರ್ತಿ :
ಸಾಮಾನ್ಯವಾಗಿ ಪ್ರತಿಯೊಬ್ಬ ಸಾಧಕನಿಗೆ ಒಬ್ಬರಾದರೂ ಸ್ಪೂರ್ತಿಯ ವ್ಯಕ್ತಿ ಇರುತ್ತಾರೆ. ಅದರಂತೆಯೇ ಶ್ರೇಯಾಂಕ ಪಾಟೀಲ್ ಗೆ ತಂದೆಯೇ ಸ್ಫೂರ್ತಿ ಎಂದು ಸ್ವತಃ ಅವರ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ತನ್ನ ತಂದೆಯ ಜೊತೆ ಕಾಣಿಸಿಕೊಂಡ ಶ್ರೇಯಾಂಕ ಪಾಟೀಲ್ ತಾವು ಕ್ರಿಕೆಟ್ ನಲ್ಲಿ ಬೆಳೆದು ಬಂದ ಹಾದಿಯ ಕುರಿತು ಹಂಚಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಅವರು ಮನೆಯಲ್ಲಿ ಹೇಗಿರುತ್ತಾರೆ? ಅಪ್ಪ ಮಗಳು ಹೇಗೆ ಜಗಳವಾಡುತ್ತಾರೆ? ಎಂಬುದರ ಬಗ್ಗೆ ತಿಳಿಸಿದ್ದಾರೆ. ಹೀಗೆ ಚರ್ಚಿಸುವಾಗ ಪ್ರಿಯಾಂಕ ಅವರ ತಂದೆ ನಾನು ಬಾಯಲ್ಲೇ ಕ್ಯಾಚ್ ಹಿಡಿಯುತ್ತಿದ್ದೆ ಬಿಡು ಅಂತಾ ಚಾಲೆಂಜ್ ಹಾಕುತ್ತಾರಂತೆ. ಮಾತ್ರವಲ್ಲದೆ ಪ್ಯಾಡ್ ಇಲ್ಲದೆ ಒಂದೇ ಕೈಯಲ್ಲಿ ನಿನ್ನ ಬೌಲಿಂಗ್‌ಗೆ, ನಾನು ಬ್ಯಾಟಿಂಗ್ ಮಾಡ್ತೀನಿ ಅಂತಾನೂ ಶ್ರೇಯಾಂಕಾ ಪಾಟೀಲ್ ಅವರಿಗೆ, ಅವರ ಅಪ್ಪ ಚಾಲೆಂಜ್ ಹಾಕುವುದಾಗಿ ಶ್ರೇಯಾಂಕ ಪಾಟೀಲ್ ತಿಳಿಸಿದ್ದಾರೆ.