For the best experience, open
https://m.hosakannada.com
on your mobile browser.
Advertisement

Pavithra Gowda: ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ರಿಂದ ಶಾಕಿಂಗ್‌ ಹೇಳಿಕೆ? ಕೊಲೆ ಕೃತ್ಯದ ಕುರಿತು ಏನಂದ್ರು?

Pavithra Gowda: ರೇಣುಕಾ ಸ್ವಾಮಿ ಹತ್ಯೆ ಆರೋಪದಲ್ಲಿ ಎ1 ಪವಿತ್ರಾ ಗೌಡ (Pavithra Gowda) ಅವರ ಮಾಜಿ ಗಂಡ ಸಂಜಯ್‌ ಸಿಂಗ್‌ (Sanjay Singh) ಅವರು ಶಾಕಿಂಗ್‌ ಹೇಳಿಕೆಯೊಂದನ್ನು ಹೇಳಿದ್ದಾರೆ.
10:54 AM Jun 13, 2024 IST | ಸುದರ್ಶನ್
UpdateAt: 11:11 AM Jun 13, 2024 IST
pavithra gowda  ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ರಿಂದ ಶಾಕಿಂಗ್‌ ಹೇಳಿಕೆ  ಕೊಲೆ ಕೃತ್ಯದ ಕುರಿತು ಏನಂದ್ರು
Advertisement

Pavithra Gowda: ರೇಣುಕಾ ಸ್ವಾಮಿ ಹತ್ಯೆ ಆರೋಪದಲ್ಲಿ ಎ1 ಪವಿತ್ರಾ ಗೌಡ (Pavithra Gowda) ಅವರ ಮಾಜಿ ಗಂಡ ಸಂಜಯ್‌ ಸಿಂಗ್‌ (Sanjay Singh) ಅವರು ಶಾಕಿಂಗ್‌ ಹೇಳಿಕೆಯೊಂದನ್ನು ಹೇಳಿದ್ದಾರೆ. ಇಲಿ ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಅವಳು. ಒಬ್ಬರನ್ನು ಕೊಲೆ ಮಾಡುತ್ತಾಳೆ ಎಂದರೆ ಅದು ಸುಳ್ಳು ಎಂದು ಹೇಳಿದ್ದಾರೆ.

Advertisement

Bengaluru: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ಕನ್ನಡದ ಮತ್ತೊಬ್ಬ ನಟ ಅರೆಸ್ಟ್ !!

ಉತ್ತರ ಪ್ರದೇಶ ಮೂಲದ ಸಂಜಯ್‌ ಸಿಂಗ್‌ ಮತ್ತು ಪವಿತ್ರಾ ಗೌಡ ಅವರು ಪ್ರೀತಿಸಿ ಮದುವೆಯಾಗಿದ್ದು, ಮಗು ಆದ ನಂತರ ಚಿತ್ರರಂಗದ ಸೆಳೆತದ ಕಾರಣದಿಂದ ಸಂಜಯ್‌ ಸಿಂಗ್‌ ಅವರನ್ನು ದೂರ ಮಾಡಿದ್ದ ಪವಿತ್ರಾ ಗೌಡ, ಕೊನೆಗೆ ಡಿವೋರ್ಸ್‌ ಪಡೆದಿದ್ದಾರೆ.

Advertisement

ನನ್ನದು ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು 12 ವರ್ಷ ಆಗಿದೆ. ಇವತ್ತು ಕೊಲೆ ಮಾಡಿದ ವಿಚಾರ ತಿಳಿಯಿತು. ಮಗಳ ಬಗ್ಗೆ ಯೋಚನೆ ಬಂತು. ಅದಕ್ಕೆ ಏನು ಅಂತ ಕೇಳೋಣ ಅಂದುಕೊಂಡೆ. ನಾನು ಅವರಿಗೆ ಫೋನ್‌ ಮಾಡಲ್ಲ. ಅವರ ಕಡೆಯಿಂದಲೂ ನನಗೆ ಯಾವುದೇ ಫೋನ್‌ ಬರಲ್ಲ.

ನಮ್ಮ ಅಣ್ಣ, ತಮ್ಮ ಎಲ್ಲರೂ ವಿದೇಶದಲ್ಲಿದ್ದು, ಒಂದು ಶಾಲೆಯನ್ನು ಉತ್ತರ ಪ್ರದೇಶದಲ್ಲಿ ನಾನು ನೋಡಿಕೊಳ್ಳುತ್ತಿದ್ದೇನೆ. ಮದುವೆಯಾದ ಮೂರು ವರ್ಷಕ್ಕೆ ನನ್ನ ಮಗಳು ಹುಟ್ಟಿದ್ದಳು. ನಂತರ ಫಿಲ್ಮ್‌ ಇಂಡಸ್ಟ್ರಿ ಗೆ ಸೇರಿದ್ದಳು ಪವಿತ್ರಾ. ಆಮೇಲೆ ನಮ್ಮಿಬ್ಬರ ಮಧ್ಯೆ ಅಂತರ ಶುರುವಾಯಿತು. ಆಮೇಲೆ ಆಕೆ ನನ್ನಿಂದ ಡಿವೋರ್ಸ್‌ ಪಡೆದಳು.

2013 ರಲ್ಲಿ ನಾವು ಡಿವೋರ್ಸ್‌ ಪಡೆದೆವು. ಆದರೆ ಡಿವೋರ್ಸ್‌ ಮೊದಲೇ ನಾವಿಬ್ಬರು ಬೇರೆ ಬೇರೆ ಇದ್ದೆವು. ಪವಿತ್ರಾ ಡಿವೋರ್ಸ್‌ ಫೈಲ್‌ ಮಾಡಿದಾಗ ನಾನು ಮುಂಬೈನಲ್ಲಿದ್ದೆ. ಆಗ ಅವಳು ದರ್ಶನ್‌ ಜೊತೆ ಸಂಬಂಧದಲ್ಲಿ ಇದ್ದಾಳೆ ಎಂಬ ವಿಚಾರ ತಿಳಿಯಿತು.

ಮಗಳ ಹತ್ತಿರ ವರ್ಷಕ್ಕೆ ಒಂದು ಸಾರಿ, ಎರಡು ವರ್ಷಕ್ಕೆ ಒಂದು ಬಾರಿ ಫೋನ್‌ನಲ್ಲಿ ಮಾತಾಡುತ್ತೇನೆ. ಆದರೆ ಡೈರೆಕ್ಟ್‌ ಆಗಿ ಮಾತನಾಡಲು ಆಗುವುದಿಲ್ಲ. ಆಕೆಯ ಫೋನ್‌ ನಂಬರ್‌ ನನ್ನ ಬಳಿ ಇಲ್ಲ. ನಮ್ಮ ಅತ್ತೆ ಮಾವರಿಗೆ ಫೋನ್‌ ಮಾಡಿದರೆ ನನ್ನ ಮಗಳ ಜೊತೆ ಮಾತನಾಡಬಹುದು.

ನಾನು ಅವಳನ್ನು ಚಿನ್ನು ಅಂತ ಕರೆಯುತ್ತಿದ್ದೆ. ಅವಳು ಸಂಜಯ್‌ ಎನ್ನುತ್ತಿದ್ದಳು. ನಾನು ಮತ್ತು ದರ್ಶನ್‌ ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್‌ ಕೊಡು ಎಂದಿದ್ದಳು. ನಾನು ಸರಿ ಎಂದು ಡಿವೋರ್ಸ್‌ ಕೊಟ್ಟೆ. ಅನಂತರ ಆಕೆ ದರ್ಶನ್‌ ಜೊತೆ ಜೀವನ ಮಾಡಲು ಶುರು ಮಾಡಿದಳು ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

ನಂತರ ಆಕೆ ಮದುವೆ ಆಗಿದ್ದಾಳೋ ಇಲ್ವೋ ಎಂದು ಗೊತ್ತಿಲ್ಲ. ಏಕೆಂದರೆ ನನಗೆ ಅವರ ಮೇಲೆ ಯಾವುದೇ ಆಸಕ್ತಿ ಇಲ್ಲ. ಪವಿತ್ರಾಗೆ ಕಷ್ಟ ಅಂತ ಆದಾಗ ಗಂಡನ ಬಳಿಗೆ ಹೋಗಿದ್ದಾಳೆ. ಅವರೊಬ್ಬ ಗಂಡನಾಗಿ ಸ್ಟೆಪ್‌ ತೆಗೆದುಕೊಳ್ಳಲೇಬೇಕು. ಆದರೆ ಇಲ್ಲಿ ಆ ಸ್ಟೆಪ್‌ ತಪ್ಪಾಗಿದೆ. ಇಲ್ಲಿ ಪವಿತ್ರಾ ಗೌಡರ ಒಂದೇ ಒಂದು ತಪ್ಪು, ಘಟನೆ ನಡೆದ ಜಾಗದಲ್ಲಿ ಇದ್ದಿದ್ದು, ಗಂಡ ಬಾ ಆ ಜಾಗಕ್ಕೆ ಹೋಗಿ ಬರೋಣ ಅಂತ ಕರೆದಿರಬಹುದು. ಹೋಗಿಲ್ಲ ಅಂದರೆ ದರ್ಶನ್‌ ಅವರು ಗೊತ್ತಲ್ವಾ ಯಾವ ತರಹ ಮನುಷ್ಯ ಅಂತಾ.

ನಾನು ದರ್ಶನ್‌ ಇಲ್ಲಿಯವರೆಗೆ ಒಂದು ಬಾರಿಯೂ ಫೇಸ್‌ ಟು ಫೇಸ್‌ ಭೇಟಿಯಾಗಿಲ್ಲ. ನಾನು ದರ್ಶನ್‌ ಅಭಿಮಾನಿಯಾಗಿದ್ದೆ. ಆದರೆ ಎಲ್ಲಾ ಘಟನೆ ಬಳಿಕ ನಾನು ಅವರ ಫಿಲ್ಮ್‌ ನೋಡುವುದನ್ನೇ ಬಿಟ್ಟೆ.

ನನಗೆ ಪವಿತ್ರಾ ಗೌಡ ತುಂಬಾ ಚೆನ್ನಾಗಿ ಗೊತ್ತು. ಬೈ ಮಿಸ್‌ ಇದು ಆಗಿರಬಹುದು. ಅವಳು ಮೆದುಳಿನಿಂದ ಬಹಳ ಸ್ಟ್ರಾಂಗ್‌ ಇದ್ದಾಳೆ. ಹೃದಯದಿಂದ ಬಹಳ ಸಾಫ್ಟ್‌ ಇದ್ದಾಳೆ. ಏನೋ ತಪ್ಪಾಗಿದೆ. ಇಲಿ ಸಾಯಿಸೋಕೂ ಹಿಂಜರಿಯುತ್ತಿದ್ದ ಹುಡುಗಿ ಅವಳು. ಕೊಲೆ ಮಾಡ್ತಾಳೆ ಅಂದರೆ ಇದು ಸುಳ್ಳು ಎಂದು ಮಾಧ್ಯಮವೊಂದಕ್ಕೆ ನೀಡಿದ ಫೋನ್‌ ಸಂದರ್ಶನದಲ್ಲಿ ಹೇಳಿದ್ದಾರೆ.

Viral Video Of Couples: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಕುಚುಕುಚು ಮಾಡ್ತಾ ನಿರತ ಜೋಡಿ; ಟಿಸಿ ಬಂದರೂ ಕ್ಯಾರೇ ಇಲ್ಲ; ವಿಡಿಯೋ ವೈರಲ್‌

Advertisement
Advertisement
Advertisement