Karnataka Seeds Price: ರೈತರಿಗೆ ಶಾಕಿಂಗ್ ನ್ಯೂಸ್; ಬಿತ್ತನೆ ಬೀಜ ದರ ರಾಜ್ಯದಲ್ಲಿ ಏರಿಕೆ
Karnataka Seeds Price: ಈ ಬಾರಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಬಿತ್ತನೆ ಬೀಜಕ್ಕೆಂದು ರೈತರು ರೈತ ಸಂಪರ್ಕ ಕೇಂದ್ರ ಸಂಪರ್ಕ ಮಾಡಿದವರಿಗೆ ದೊಡ್ಡ ಶಾಕಿಂಗ್ ನ್ಯೂಸ್ ಕಾದಿದೆ ಎಂದು ವರದಿಯಾಗಿದೆ. ಬಿತ್ತನೆ ಬೀಜದ ದರ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: KSRTC: ಕೆಎಸ್ಆರ್‌ಟಿಸಿ ಯಿಂದ ದರ ಪಟ್ಟಿ ಪರಿಷ್ಕರಣೆ!
ವಿವಿಧ ಭತ್ತದ ತಳಿಗಳ ಬಿತ್ತನೆ ಬೀಜದ ದರ ಕ್ವಿಂಟಾಲ್‌ಗೆ ರೂ.675 ನಿಂದ ರೂ.1875 ವರೆಗೆ ಏರಿಕೆ ಕಂಡಿದೆ. ಹೆಸರು (5kg) 501 ರಿಂದ 781ರೂ.ವರೆಗೆ, ತೊಗರಿ (5ಕೆಜಿ) 525 ರಿಂದ 770 ರವರೆಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ವಿವಿಧ ಭತ್ತದ ತಳಿಗಳ ದರ ಕ್ವಿಂಟಾಲ್‌ಗೆ ರೂ.675 ರಿಂದ ರೂ.1875 ರವರೆಗೆ ಏರಿಕೆಯಾಗಿದೆಯೆಂದು ವರದಿಯಾಗಿದೆ.
ಇದನ್ನೂ ಓದಿ: Government New Rules: ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್! ಸರ್ಕಾರದ ಹೊಸ ನಿರ್ಧಾರ ಹೀಗಿದೆ
ರಾಜ್ಯದಲ್ಲಿ ಭೀಕರ ಬರಗಾಲದಿಂದ 2023-24 ನೇ ಸಾಲಿನಲ್ಲಿ ಬೀಜೋತ್ಪಾದನೆ ಕಡಿಮೆಯಾಗಿತ್ತು. ಈ ಕಾರಣದಿಂದ ಬಿತ್ತನೆ ಬೀಜದ ಮಾರಾಟದ ದರ ಏರಿಕೆ ಕಂಡಿದೆ. ಹಾಗೆ ನೋಡಿದರೆ ಎಲ್ಲಾ ರಾಜ್ಯಗಳಲ್ಲಿಯೂ ಬಿತ್ತನೆ ಬೀಜಗಳ ದರ ಏರಿಕೆಯಾಗಿದ್ದು, ಉಳಿದ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜದ ದರ ಕಡಿಮೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.