For the best experience, open
https://m.hosakannada.com
on your mobile browser.
Advertisement

Shobhana: ಒಳ ಉಡುಪು ಹಾಕದೆ ಮಳೆಯಲ್ಲಿ ಶೂಟಿಂಗ್ ಮಾಡಿದೆ - ರಜನಿ ಮೇಲೆತ್ತಿದಾಗ... !! ಕರಾಳ ಅನುಭವ ಬಿಚ್ಚಿಟ್ಟ ನಟಿ

11:20 AM Feb 29, 2024 IST | ಹೊಸ ಕನ್ನಡ
UpdateAt: 11:20 AM Feb 29, 2024 IST
shobhana  ಒಳ ಉಡುಪು ಹಾಕದೆ ಮಳೆಯಲ್ಲಿ ಶೂಟಿಂಗ್ ಮಾಡಿದೆ   ರಜನಿ ಮೇಲೆತ್ತಿದಾಗ       ಕರಾಳ ಅನುಭವ ಬಿಚ್ಚಿಟ್ಟ ನಟಿ

Shobhana : ದಕ್ಷಿಣ ಭಾರತ ನಟಿ ಶೋಭನಾ(Shobhana) ಅವರು ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅಭಿನಯದ ಶಿವ(Shiva movie)ಸಿನಿಮಾದ ಮಳೆಯ ನಡುವೆ ನಡೆದ ಶೂಟಿಂಗ್‌ ಸಂದರ್ಭದಲ್ಲಿ ಅನುಭವಿಸಿದ ಕರಾಳ ಅನುಭವವನ್ನು ಇದೀಗ ಬಿಚ್ಚಿಟ್ಟಿದ್ದಾರೆ.

Advertisement

ಹೌದು, ಹಿರಿಯ ನಟಿ ಸುಹಾಸಿನಿ ಮಣಿರತ್ನಂ(Suhasini maniratnam) ಅವರೊಂದಿಗಿನ ಸಂದರ್ಶನದಲ್ಲಿ ನಟಿ ಶೋಭನಾ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಈ ಸಮಯದಲ್ಲಿ ಶಿವ ಸಿನಿಮಾದ ಚಿತ್ರೀಕರಣದ ವೇಳೆ ಮಳೆಯ ನಡುವೆ ಹಾಡನ್ನು ಚಿತ್ರೀಕರಿಸುವುದಾಗಿ ನನ್ನ ಜತೆ ಚರ್ಚಿಸಿರಲಿಲ್ಲ. ಆದರೆ ನಾನು ಕಾಸ್ಟೋಮ್ ಅನ್ನು ನೋಡಿದಾಗ ಏನೋ ಒಂದು ನಡೆಯುತ್ತದೆ ಎಂದು ಅರ್ಥವಾಯಿತು. ಯಾಕೆಂದರೆ ಅದು ಬಿಳಿ ಬಣ್ಣದ ಪಾರದರ್ಶಕ ಸೀರೆಯಾಗಿತ್ತು. ಅಲ್ಲದೆ ಮಳೆಯ ದೃಶ್ಯಕ್ಕಾಗಿ ಧರಿಸಲು ನನ್ನ ಬಳಿ ಯಾವುದೇ ಒಳ ಉಡುಪು ಇರಲಿಲ್ಲ.

ಈ ವಿಚಾರವನ್ನು ನಾನು ಕಾಸ್ಟೋಮ್ ಹುಡುಗನಿಗೆ ಹೇಳಿದೆ. ಹಾಡಿಗೆ ರೆಡಿಯಾಗಲು ಮನೆಗೆ ಹೋಗಬಹುದೇ ಎಂದು ಕೇಳಿದೆ. ಆದರೆ ಇನ್ನೇನು 10 ನಿಮಿಷಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. ಶೂಟಿಂಗ್ ಅನ್ನು ತಡಮಾಡಲು ಬಯಸದ ಕಾರಣ, ನಾನು ಪ್ಲಾಸ್ಟಿಕ್ ಟೇಬಲ್ ಕವ‌ರ್ ಅನ್ನು ಶೂಟಿಂಗ್ ಸಮಯದಲ್ಲಿ ಒಳ ಉಡುಪುಗಳಾಗಿ ಬಳಸಿದ್ದೇನೆ. ರಜನಿ ಅವರು ನನ್ನನ್ನು ಡಾನ್ಸ್ ಮಾಡುವ ವೇಳೆ ಮೇಲಕ್ಕೆ ಎತ್ತಿದಾಗ ಕವ‌ರ್ ಸದ್ದು ಮಾಡತೊಡಗಿತು. ರಜನಿ ಅವರೇ ಗೊಂದಲಕ್ಕೊಳಗಾದರು, ಆದರೆ ಅದೃಷ್ಟವಶಾತ್, ಅವರು ಅದರ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಶೋಭಾನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Advertisement

ಇದನ್ನು ನಟಿ ಒಂದು ರೀತಿಯಲ್ಲಿ ಮಳೆ ಹಾಡು ಪೂರ್ವಭಾವಿ ಕೊಲೆಯಂತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದು ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ. ನನ್ನ ಪ್ರಕಾರ, ಮಳೆಯಲ್ಲಿ ನಡೆಯುವ ಹಾಡುಗಳು ಚಿತ್ರೀಕರಣ ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಮತ್ತು ಪಾರದರ್ಶಕ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

Advertisement
Advertisement