ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Shivmogga: ಶಾಲಾ ಶಿಕ್ಷಕಿಗೆ ಒಮ್ಮೆಲೆ ಬಂತು ರಾಶಿ ಮೆಸೇಜ್ - ಓಪನ್ ಮಾಡ್ತಿದ್ದಂತೆ ಕಾದಿದ್ದು ಶಾಕ್ !!

Shivmogga: ಇದೀಗ ಶಾಲಾ ಶಿಕ್ಷಕಿಯೊಬ್ಬರಿಗೂ ಅದೇ ಸ್ಥತಿ ಬಂದೊದಗಿದೆ. ರಾಶಿ ರಾಶಿ ಮೆಸೇಜ್ ಗಳೇ ಅವರಿಗೆ ಕಂಕಟವಾಗಿದೆ.
09:16 PM May 06, 2024 IST | ಸುದರ್ಶನ್
UpdateAt: 09:18 PM May 06, 2024 IST

Shivmogga: ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರನ್ನು ಯಾರು ಹೇಗೆ ಮೋಸಗೊಳಿಸುತ್ತಾರೆ ಎಂಬುದೇ ತಿಳಿಯದು. ಎಷ್ಟೋ ಜನ 'ಹ್ಯಾಕ್' ಜಾಲದಲ್ಲಿ ಸಿಲುಕಿ ಬದುಕನ್ನೇ ನಾಶ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಅಂತೆಯೇ ಇದೀಗ ಶಾಲಾ ಶಿಕ್ಷಕಿಯೊಬ್ಬರಿಗೂ ಅದೇ ಸ್ಥತಿ ಬಂದೊದಗಿದೆ. ರಾಶಿ ರಾಶಿ ಮೆಸೇಜ್ ಗಳೇ ಅವರಿಗೆ ಕಂಕಟವಾಗಿದೆ.

Advertisement

ಹೌದು, ಶಿವಮೊಗ್ಗದ(Shivmogga) ಶಾಲಾ ಶಿಕ್ಷಕಿಯೊಬ್ಬರಿಗೆ(School Teacher) ಒಮ್ಮೆಲೆ ಬಂದ ರಾಶಿ ಮೆಸೇಜ್ ಗಳು ದೊಡ್ಡ ಆಘಾತ ಉಂಟುಮಾಡಿದೆ. ಯಾಕೆಂದರೆ ತಮ್ಮ ಖಾತೆಯಲ್ಲಿದ್ದ 7 ಲಕ್ಷ ರೂಪಾಯಿ ನಿಮಿಷದಲ್ಲಿ ಮಂಗ ಮಾಯವಾಗಿಹೋಗಿದೆ. ಹಣ ಕಡಿತದ ಸಾಲು ಸಾಲು ಮೆಸೇಜ್‌ ಬಂದಾಗ ಶಿಕ್ಷಕಿ ಆಘಾತಕ್ಕೊಂಡಿದ್ದಾರೆ.

ಏನಿದು ಘಟನೆ?

Advertisement

ಶಿವಮೊಗ್ಗ ಶಾಲೆಯ ಶಿಕ್ಷಕಿ ಯುನಿಯನ್‌ ಬ್ಯಾಂಕ್‌(Union Bank) ನಲ್ಲಿ ಖಾತೆ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ಹೊಂದಿದ್ದಾರೆ. ಇತ್ತೀಚಿಗೆ ಮೇ 3ರಂದು ಮಧ್ಯಾಹ್ನ ಶಿಕ್ಷಕಿಯ ಮೊಬೈಲ್‌ಗೆ ಯುನಿಯನ್‌ ಬ್ಯಾಂಕ್‌ನಿಂದ ಸಾಲು ಸಾಲು ಮೆಸೇಜ್‌ ಬಂದಿವೆ. ಒಮ್ಮೆ 3 ಲಕ್ಷ, ಎರಡನೇ ಬಾರಿ 2 ಲಕ್ಷ, ಮೂರನೆ ಬಾರಿ 2 ಲಕ್ಷ ರೂ. ಹಣ ಕಡಿತವಾಗಿದೆ ಎಂದು ಒಮ್ಮೆಲೆ ಬಂದ ಮೆಸೇಜ್ ಗಳು ತಿಳಿಸಿವೆ.

ಗಾಬರಿಗೊಂಡ ಶಿಕ್ಷಕಿ ಕೂಡಲೆ ಎಚ್ಚೆತ್ತು ತಮ್ಮ ಖಾತೆಯಲ್ಲಿದ್ದ ಉಳಿಕೆ ಹಣದ ಪೈಕಿ 50 ಸಾವಿರ ರೂ. ಅನ್ನು ಮಗಳ ಖಾತೆಗೆ ವರ್ಗಾಯಿಸಿದ್ದಾರೆ. ಅಲ್ಲದೆ ತಕ್ಷಣ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಶಿಕ್ಷಕಿಯ ವೈಯಕ್ತಿಕ ಮಾಹಿತಿ ಕದ್ದು, ಒಟಿಪಿ(OTP) ಕೂಡ ಶೇರ್‌ ಆಗದೆ 7 ಲಕ್ಷ ರೂ. ಹಣವನ್ನು ಪಾಪಿಗಳು ಲಪಟಾಯಿಸಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂಧ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Advertisement
Advertisement
Next Article