For the best experience, open
https://m.hosakannada.com
on your mobile browser.
Advertisement

Sanjeeda Sheikh: 'ನೋಡ ನೋಡುತ್ತಿದ್ದಂತೆ ನನ್ನ ಎದೆಗೆ ಕೈ ಹಾಕಿದರು' - ನೈಟ್ ಪಾರ್ಟಿಯ ಕಹಿ ಅನುಭವ ತೆರೆದಿಟ್ಟ ನಟಿ ಸಂಜೀದಾ !!

Sanjeeda Sheikh: ಹೀರಾಮಂಡಿ ವೆಬ್ ಸರಣಿಯ ಮೂಲಕ ಅನೇಕರ ಮನಸನ್ನ ಗೆದ್ದ ಸಂಜೀದಾ ಶೇಖ್(Sanjeeda Sheikh) ತಮ್ಮ ಬದುಕಿನ ಕಹಿ ಅನುಭವವೊಂದನ್ನ ಹಂಚಿಕೊಂಡಿದ್ದಾರೆ.
12:20 PM Jun 03, 2024 IST | ಸುದರ್ಶನ್
UpdateAt: 12:20 PM Jun 03, 2024 IST
sanjeeda sheikh   ನೋಡ ನೋಡುತ್ತಿದ್ದಂತೆ ನನ್ನ ಎದೆಗೆ ಕೈ ಹಾಕಿದರು    ನೈಟ್ ಪಾರ್ಟಿಯ ಕಹಿ ಅನುಭವ ತೆರೆದಿಟ್ಟ ನಟಿ ಸಂಜೀದಾ
Advertisement

Sanjeeda Sheikh: ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ, ಸಂದರ್ಶನ ಅಥವಾ ಯಾವುದಾದರೂ ಈವೆಂಟ್ ಗಳಲ್ಲಿ ಸ್ಟಾರ್ ಗಳು ತಮ್ಮ ಹಳೆಯ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರ್ತಾರೆ. ಅಂತೆಯೇ ಇದೀಗ ಹೀರಾಮಂಡಿ ವೆಬ್ ಸರಣಿಯ ಮೂಲಕ ಅನೇಕರ ಮನಸನ್ನ ಗೆದ್ದ ಸಂಜೀದಾ ಶೇಖ್(Sanjeeda Sheikh) ತಮ್ಮ ಬದುಕಿನ ಕಹಿ ಅನುಭವವೊಂದನ್ನ ಹಂಚಿಕೊಂಡಿದ್ದಾರೆ.

Advertisement

ಹೌದು, ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ(Interview)ತಮ್ಮ ನೈಟ್ ಕ್ಲಬ್ ಅನುಭವವನ್ನ ಸಂಜೀದಾ ಶೇಖ್ ಹಂಚಿಕೊಂಡಿದ್ದಾರೆ. 'ನಾನು ಒಂದು ನೈಟ್​ಕ್ಲಬ್​ನಲ್ಲಿದ್ದೆ. ನೈಟ್ ಕ್ಲಬ್(Night Club) ಪಾರ್ಟಿಯಲ್ಲಿರುವಾಗ ನನ್ನ ಸ್ತನವನ್ನು ಯಾರೋ ಹಿಡಿದಂತಾಯಿತು. ಅರೇ ಇದೇನು ಎಂದು ಆಕ್ರೋಶದಿಂದ ಪ್ರತಿಕ್ರಿಯೆ ನೀಡುವಷ್ಟರಲ್ಲೇ ಅವರು ಅಲ್ಲಿಂದ ತೆರಳಿದ್ದರು ಎಂದು ನಟಿ ಸಂಜೀದಾ ಖಾನ್ ಹೇಳಿದ್ದರೆ. ಆದರೆ ನನ್ನ ಸ್ತನಕ್ಕೆ ಕೈಹಾಕಿದ್ದು ಪುರುಷ ಅಲ್ಲ, ಓರ್ವ ಯುವತಿ ಎಂದು ಸಂಜೀದಾ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ! 

Advertisement

ಅಲ್ಲದೆ ಆಕೆ ಯುವತಿಯಾಗಿದ್ದ ಕಾರಣ ಅವತ್ತು ನಾನು ಸುಮ್ಮನಾದೆ. ಆದರೆ ಆಕೆ ಈ ತರಹದ ಕೆಲಸ ಮಾಡಬಹುದು ಅನ್ನುವ ಕಲ್ಪನೆ ನನಗೆ ಇರಲಿಲ್ಲ. ಖಾಸಗಿ ಭಾಗ(Private Part) ಟಚ್ ಮಾಡುವುದು ತಪ್ಪು. ಅದು ಯಾರೇ ಆಗಲಿ. ನಮ್ಮ ಖಾಸಗೀತನಕ್ಕೂ ಧಕ್ಕೆಯಾಗಬಾರದು. ನಿಮ್ಮ ಜೊತೆ ಮಹಿಳೆ ತಪ್ಪಾಗಿ ನಡೆದುಕೊಂಡಿದ್ದರೆ ಪ್ರಶ್ನೆಯನ್ನ ಮಾಡಿ. ಕೇವಲ ಹುಡುಗರು ಮಾತ್ರ ಅಲ್ಲ ಅಸಭ್ಯವಾಗಿ ವರ್ತಿಸುವುದರಲ್ಲಿ ಹುಡುಗಿಯರೂ ಕಡಿಮೆ ಇಲ್ಲ ಎಂದಿದ್ದಾರೆ.

ಅಂದಹಾಗೆ ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಸಂಜೀದಾ ಫೇಮಸ್​ ಆಗಿದ್ದಾರೆ. ‘ಹೀರಾಮಂಡಿ’ ವೆಬ್​ ಸರಣಿಯ ಯಶಸ್ಸಿನಿಂದ ಅವರಿಗೆ ಅವಕಾಶಗಳು ಹೆಚ್ಚಾಗಿವೆ 2012ರಲ್ಲಿ ಸಂಜೀದಾ ಶೇಖ್​ ಅವರು ಆಮಿರ್​ ಅಲಿ ಜೊತೆ ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರು ವಿಚ್ಛೇದನ ನೀಡಿದರು. ಬಳಿಕ ನಟ ಹರ್ಷವರ್ಧನ್​ ರಾಣೆ ಜೊತೆ ಸಂಜೀದಾ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಹರಡಿತ್ತು. ಇಬ್ಬರೂ ಜೊತೆಯಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ವರದಿ ಆಗಿತ್ತು.

ಇದನ್ನೂ ಓದಿ: ಇದೊಂದು ಮಾತ್ರೆ ಹಾಕಿ ಟಾಯ್ಲೆಟ್​ ಕ್ಲೀನ್ ಮಾಡಿ ನೋಡಿ! ಪಟಾಫಟ್ ಕ್ಲೀನಿಂಗ್ ಆಗೋಗುತ್ತೆ!

Advertisement
Advertisement
Advertisement