For the best experience, open
https://m.hosakannada.com
on your mobile browser.
Advertisement

College Girl Jumps to Death: ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ; ಬಿಲ್ಡಿಂಗ್‌ನಿಂದ ಹಾರಿ ಬಾಲಕಿ ಆತ್ಮಹತ್ಯೆ

College Girl Jumps to Death: 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
12:35 PM Mar 31, 2024 IST | ಮಲ್ಲಿಕಾ ಪುತ್ರನ್
UpdateAt: 12:41 PM Mar 31, 2024 IST
college girl jumps to death  ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ  ಬಿಲ್ಡಿಂಗ್‌ನಿಂದ ಹಾರಿ ಬಾಲಕಿ ಆತ್ಮಹತ್ಯೆ
Image Credit: kerala Kaumudi
Advertisement

College Girl Jumps to Death: 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

Advertisement

ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾಳೆ. ಸಾಯುವ ಮೊದಲು ಈಕೆ ತನ್ನ ಕುಟುಂಬದವರಿಗೆ ಮೆಸೇಜ್‌ ಮಾಡಿದ್ದು, ಲೈಂಗಿಕ ಕಿರುಕುಳ ಘಟನೆಯಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾಳೆ.

ಯಾರ ಹೆಸರನ್ನು ಹೇಳಿಲ್ಲ. ನನ್ನ ಫೋಟೋಗಳನ್ನು ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದಾಗಿ ಹೆದರಿಸುತ್ತಿರುವುದಾಗಿ ಹುಡುಗಿ ಆರೋಪ ಮಾಡಿದ್ದಾಳೆ. ಈಕೆ ಪಾಲಿಟೆಕ್ನಿಕ್‌ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ಇದ್ದಳು.

Advertisement

"ನನ್ನನು ಕ್ಷಮಿಸಿ. ನನ್ನ ತಂದೆ ತಾಯಿ ನನ್ನನ್ನು ಚೆನ್ನಾಗಿ ಬೆಳೆಸಿದರು. ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಮಗುವಿನ ನಿರೀಕ್ಷೆಯಲ್ಲಿರುವ ತನ್ನ ಅಕ್ಕನನ್ನು ಅಭಿನಂದಿಸಿದ್ದು ಮತ್ತು ತನ್ನ ತಂಗಿಗಾಗಿ ಸಂದೇಶವನ್ನು ಕಳುಹಿಸಿದ್ದಳು. ನಿಮ್ಮ ಭವಿಷ್ಯದ ಮೇಲೆ ಕೇಂದ್ರೀಕರಿಸು, ಮತ್ತು ನೀವು ಇಷ್ಟಪಡುವದನ್ನು ಅಧ್ಯಯನ ಮಾಡು. ಇತರರಿಂದ ಪ್ರಭಾವಿತರಾಗಬೇಡ ಮತ್ತು ನಿಮ್ಮ ಸ್ವಂತ ನಿರ್ಧಾರಗಳೊಂದಿಗೆ ಮುಂದುವರಿ. ನನ್ನಂತೆ ಆಗಬೇಡ. ಯಾವಾಗಲೂ ಸಂತೋಷವಾಗಿರಿ ಮತ್ತು ಒಳ್ಳೆಯ ಜೀವನವನ್ನು ಹೊಂದಿ ಎಂದು ಬರೆದಿದ್ದಾಳೆ.

ನಂತರ ಹುಡುಗಿ ತನ್ನ ತಂದೆಗೆ 'ಅಧ್ಯಾಪಕರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ, ಅವರು ಸಹಾಯ ಮಾಡುವುದಿಲ್ಲ. ನನ್ನ ಚಿತ್ರಗಳನ್ನು ತೆಗೆದು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಇತರ ಹುಡುಗಿಯರೂ ಇದ್ದಾರೆ. ಇದನ್ನು ಯಾರಿಗೂ ತಿಳಿಸಲು ನಮಗೆ ಸಾಧ್ಯವಾಗುತ್ತಿಲ್ಲ. ದೂರು ದಾಖಲಾದರೆ, ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಾರೆ. ನಾನು ಈಗ ದೂರ ಹೋದರೆ, ನೀವು ಕೆಲವು ವರ್ಷಗಳ ಕಾಲ ಕೆಟ್ಟದ್ದನ್ನು ಅನುಭವಿಸುತ್ತೀರಿ ಮತ್ತು ನಂತರ ನೀವು ಮರೆತುಬಿಡುತ್ತೀರಿ. ನಾನು ನಿಮ್ಮ ಸುತ್ತಲೂ ಇದ್ದರೆ, ನೀವು ನನ್ನನ್ನು ನೋಡುತ್ತೀರಿ ಮತ್ತು ಯಾವಾಗಲೂ ಕೆಟ್ಟದ್ದನ್ನು ಅನುಭವಿಸುತ್ತೀರಿ. ಕ್ಷಮಿಸಿ ದೀದಿ, ನಾನು ನಿಮ್ಮನ್ನೆಲ್ಲಾ ಟೆನ್ಶನ್ ಮಾಡಿದ್ದೇನೆ, ನಾನು ಹೋಗುತ್ತಿದ್ದೇನೆ.' ಎಂದು ಮೆಸೇಜ್‌ ಮಾಡಿದ್ದಾಳೆ.

ಮನೆ ಮಂದಿ ಈಕೆಗೆ ಕೂಡಲೇ ಕರೆ ಮಾಡುತ್ತಾರೆ. ಫೋನ್‌ ರಿಸೀವ್‌ ಮಾಡದೇ ಹೋದಾಗ ಪೊಲೀಸರಿಗೆ ದೂರು ನೀಡಲಾಗುತ್ತದೆ. ರಾತ್ರಿ 12.50 ಕ್ಕೆ ಈಕೆ ತನ್ನ ಮೊಬೈಲ್‌ನಿಂದ ಅಪ್ಪ, ಅಮ್ಮ. ಅಕ್ಕ ಮತ್ತು ತಂಗಿಗೆ ಮೆಸೇಜ್‌ ಮಡಿದ್ದಾಳೆ. ನನ್ನನ್ನು ಕ್ಷಮಿಸಿ ಎಂದು ಹೇಳಿ ಕೂಡಾ ಮೆಸೇಜ್‌ ಮಾಡಿದ್ದಾಳೆ. ಕೆಲವೇ ನಿಮಿಷಗಳಲ್ಲಿ ಈಕೆ ಬಿಲ್ಡಿಂಗ್‌ನಿಂದ ಹಾರಿ ಸಾವಿಗೀಡಾಗಿದ್ದಾಳೆ.

ಇದನ್ನೂ ಓದಿ: Belthangady (Mundaje): ವಿಷ ಆಹಾರ ಸೇವನೆ; 10 ಕ್ಕೂ ಅಧಿಕ ನಾಯಿ ಸಾವು

Advertisement
Advertisement
Advertisement