ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Marriage: ಪತ್ನಿಗೆ ಬಾಲ್ಯದ ಪ್ರೇಮಿ ಜೊತೆ ಮದುವೆ ಮಾಡಿಸಿದ ತ್ಯಾಗಮಯಿ ಪತಿ! ಕೊನೆಗೆ ಪತ್ನಿಗೆ ಟ್ವಿಸ್ಟ್ ಇಟ್ಟ ಪತಿ!

Marriage: ಪ್ರೀತಿ ಅನ್ನೋದನ್ನು ಒತ್ತಾಯವಾಗಿ ಪಡೆಯಲು ಸಾಧ್ಯವಿಲ್ಲ. ಹಾಗಿದ್ದಾಗ ದೂರ ಸರಿಯುವುದೇ ಉತ್ತಮ.
12:44 PM Aug 01, 2024 IST | ಕಾವ್ಯ ವಾಣಿ
UpdateAt: 12:44 PM Aug 01, 2024 IST
Advertisement

Marriage: ಪ್ರೀತಿ ಅನ್ನೋದನ್ನು ಒತ್ತಾಯವಾಗಿ ಪಡೆಯಲು ಸಾಧ್ಯವಿಲ್ಲ. ಹಾಗಿದ್ದಾಗ ದೂರ ಸರಿಯುವುದೇ ಉತ್ತಮ. ಪ್ರೀತಿ ಕಿತ್ತುಕೊಂಡು ಬದುಕುವುದಕ್ಕಿಂದ ಬಿಟ್ಟು ಕೊಟ್ಟು ಬದುಕಿದರೆ ಬದುಕು ಸಾರ್ಥಕ. ಅಂತೆಯೇ ಪತ್ನಿ ಬಾಲ್ಯದ ಸ್ನೇಹಿತನನ್ನು ಪ್ರೀತಿ ಮಾಡ್ತಿದ್ದಾಳೆ ಎಂಬುದು ಗೊತ್ತಾದ ಪತಿಯೊಬ್ಬ, ತನ್ನ ಪತ್ನಿಯನ್ನು ಆತನಿಗೆ ಕೊಟ್ಟು ಮದುವೆ (Marriage)  ಮಾಡಿದ್ದಾನೆ. ಅಷ್ಟೇ ಅಲ್ಲ ಪತ್ನಿ ತನಗೆ ನೀಡಿದ ಎರಡು ವರ್ಷದ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ಕೂಡ ವ್ಯಕ್ತಿ ಹೊತ್ತಿದ್ದಾನೆ.

Advertisement

ಹೌದು, ಬಿಹಾರ (Bihar) ದ ಲಖಿಸರೈನಲ್ಲಿ ಈ ಘಟನೆ ನಡೆದಿದೆ. ಜುಲೈ 30ರಂದು ಖುಷ್ಬೂ ನೋಡಲು ಪ್ರಿಯಕರ ಚಂದನ್ ಆಕೆ ಮನೆಗೆ ಬಂದಿದ್ದ. ಆದ್ರೆ ಖುಷ್ಬೂ ಹಾಗೂ ಚಂದನ್ ರನ್ನು ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಖುಷ್ಬೂ ಪತಿ ರಾಜೇಶ್, ಪತ್ನಿ ಖುಷ್ಬೂ ಹಾಗೂ ಚಂದನ್ ಗೆ ಮದುವೆ ಮಾಡುವ ನಿರ್ಧಾರಕ್ಕೆ ಬಂದ. ಕುಟುಂಬದ ಎಲ್ಲರ ಸಮ್ಮುಖದಲ್ಲಿ ಖುಷ್ಬೂ ಹಾಗೂ ಚಂದನ್ ಮದುವೆ ನಡೆದಿದೆ.

ಈ ಮದುವೆಯಿಂದ ಚಂದನ್ ತುಂಬಾ ಖುಷಿಯಾಗಿದ್ದಾನೆ. ಖುಷ್ಬೂ ಮತ್ತು ಚಂದನ್ ಒಂದೇ ಊರಿನವಾರಗಿದ್ದು, ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಸ್ನೇಹ ಪ್ರೀತಿಯಾಗಿ ಚಿಗುರಿತ್ತು. ಈ ವಿಶ್ಯ ಚಂದನ್ ಹಾಗೂ ಖುಷ್ಬೂ ಮನೆಯವರಿಗೆ ತಿಳಿದಿತ್ತು. ಆದ್ರೆ ಖುಷ್ಬೂ ಮನೆಯವರು ಮದುವೆಗೆ ಒಪ್ಪಲಿಲ್ಲ. ಆದ್ದರಿಂದ ಖುಷ್ಬೂನನ್ನು ರಾಜೇಶ್ ಗೆ ಕೊಟ್ಟು ಮದುವೆ ಮಾಡಿದ್ದರು. ಈಗ ರಾಜೇಶ್ ಹಾಗೂ ಖುಷ್ಬೂಗೆ ಎರಡು ವರ್ಷದ ಒಂದು ಗಂಡು ಮಗುವಿದೆ. ಆದರೂ ಮದುವೆ ನಂತ್ರವೂ ಖುಷ್ಬೂ ಹಾಗೂ ಚಂದನ್ ಭೇಟಿಯಾಗ್ತಿದ್ದರು. ಇಬ್ಬರ ಮಧ್ಯೆ ಫೋನ್ ನಲ್ಲಿಯೇ ಮಾತುಕತೆ ನಡೆಯುತ್ತಿತ್ತು. ಜುಲೈ 30ರಂದು ಇಬ್ಬರ ಪ್ರೇಮ ಪ್ರಸಂಗ ಬಹಿರಂಗವಾಗಿದೆ.

Advertisement

ಇದೀಗ ಬಾಲ್ಯದ ಪ್ರೇಮಿಯನ್ನು ಮದುವೆ ಆಗಿರುವ ಚಂದನ್ ಖುಷಿಯಾಗಿದ್ದಾನೆ. ಖುಷ್ಬೂಳನ್ನು ಮದುವೆಯಾಗಿದ್ದು ಸಂತೋಷ ನೀಡಿದೆ. ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆಕೆಯನ್ನು ಸುಖವಾಗಿಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಎಂದು ಚಂದನ್ ಹೇಳಿದ್ದಾನೆ.

ಇನ್ನು ಖುಷ್ಬೂ ಹಳೆ ಪ್ರೀತಿ ಸಿಕ್ಕಿದ್ದಕ್ಕೆ ಖುಷಿಯಾಗಿದ್ರೂ, ಮಗನನ್ನು ಬಿಟ್ಟು ಹೋಗುವ ನೋವಿದೆ. ನಾನು ರಾಜೇಶ್ ಜೊತೆ ವಾಸಿಸ್ತಿದ್ದೆ. ಆದ್ರೆ ರಾಜೇಶ್ ಇದಕ್ಕೆ ಅವಕಾಶ ನೀಡಲಿಲ್ಲ. ಮಗನನ್ನು ಬಿಟ್ಟು ಬದುಕುವುದು ಕಷ್ಟ ಎಂದು ಖುಷ್ಬೂ ಹೇಳಿದ್ದಾಳೆ.

ಸದ್ಯ ಖುಷ್ಬೂ ತನ್ನ ಮಗುವಿನ ಜವಾಬ್ದಾರಿಯನ್ನು ಗಂಡನಿಗೆ ನೀಡಿದ್ದು, ಆಸ್ತಿಯಲ್ಲಿ ಪಾಲು ಕೇಳೋದಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾಳೆ. ಇದೀಗ ಖುಷ್ಬೂ ಹಾಗೂ ರಾಜೇಶ್ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ರಾಜೇಶ್ ತಾಯಿ ತೆಗೆದುಕೊಂಡಿದ್ದಾಳೆ.

Mangaluru: ಎಚ್ಚರ! ಸಮುದ್ರಪಾಲಾಗಲಿದೆ ಮಂಗಳೂರು, ಉಡುಪಿಯ ಶೇ.5 ರಷ್ಟು ಭೂಮಿ!

Related News

Advertisement
Advertisement