Arun yogiraj: ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣು ಯೋಗಿರಾಜ್'ರಿಂದ ಅಚ್ಚರಿ ಸತ್ಯ ಬಹಿರಂಗ !!
Arun yogiraj: ಅಯೋಧ್ಯೆಯ (Ayodhay) ರಾಮಮಂದಿರದಲ್ಲಿ ಬಾಲರಾಮನ (Balarama) ಪ್ರಾಣಪ್ರತಿಷ್ಠಾಪನೆಯಾಗಿದೆ. ಈ ಮೂಲಕ ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿದೆ. ಈ ಬಾಲರಾಮನ ವಿಗ್ರಹ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಮೂಡಿ ಬಂದಿದೆ. ಅರುಣ್ ಅವರ ಕೈ ಚಳಕಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೀಗ ಅರುಣ್ ಅವರು ಅಚ್ಚರಿ ಸತ್ಯವೊಂದನ್ನು ಬಯಲು ಮಾಡಿದ್ದಾರೆ.
ಇದನ್ನೂ ಓದಿ: Love Tips: ಈ ಗುಣಗಳು ಹುಡುಗಿಯರಲ್ಲಿ ಕಂಡು ಬಂದರೆ, ನಿಮ್ಮನ್ನು ಇಷ್ಟ ಪಡ್ತಾ ಇದ್ದಾರೆ ಅಂತ ಅರ್ಥ!
ಹೌದು, ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಹಲವು ಮಾಧ್ಯಮಗಳು ಮಾತನಾಡಿಸುತ್ತಿವೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನಗೆ ಈ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಬಹುಶಃ ಇಡೀ ಪ್ರಪಂಚದಲ್ಲಿ ನನ್ನಷ್ಟು ಅದೃಷ್ಟವಂತರು ಯಾರು ಇಲ್ಲ ಎಂದು ಹೆಮ್ಮೆ ಪಟ್ಟಿದ್ದಾರೆ. ಅಲ್ಲದೆ ತಾವು ಹೇಗೆ ಮೂರ್ತಿ ಕೆತ್ತನೆಗೆ ಆಯ್ಕೆ ಆದೆವು ಎಂದು ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಾಧ್ಯಮದವರೊಬ್ಬರು ಮೂರ್ತಿ ಕೆತ್ತನೆಗೆ ನಿಮ್ಮ ಹೆಸರು ಆಯ್ಕೆ ಆದದ್ದು ಹೇಗೆ ಎಂದು ಕೇಳಿದಾಗ ಕಳೆದ ಜನವರಿಯಿಂದಲೂ ಮೂರ್ತಿ ಕೆತ್ತನೆ ಕಾರ್ಯದ ತಯಾರಿಗಳು ನಡೆಯುತ್ತಿದ್ದವು. ಆದರೆ ನನ್ನ ಹೆಸರು ಶಿಲ್ಪಿಗಳ ಪಟ್ಟಿಯಿಂದ ಬಿಟ್ಟು ಹೋಗಿತ್ತು. ಬಿಟ್ಟು ಹೋಗಿತ್ತು ಅಲ್ಲ ಬೇಕಂತಲೇ ಕೈಬಿಟ್ಟಿದ್ದರು ಎಂದು ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅಲ್ಲದೆ ಕೊನೆ ಏಪ್ರಿಲ್ ನಲ್ಲಿ ಕೊನೆಯ ಹಂತದ ತಯಾರಿ, ಸಭೆ, ಸಿಧ್ದತೆಗಳು ನಡೆಯುವಾಗ 7,8 ಶಿಲ್ಪಿಗಳು ಬಂದಿರುತ್ತಾರೆ. ಆಗ ದೆಹಲಿಯ IGNCAಯ ಮುಖ್ಯಸ್ಥರಾದ ಸಚ್ಚಿದಾನಂದ ಜೋಶಿ ಅವರು ಪಟ್ಟಿಯಲ್ಲಿ ನನ್ನ ಹೆಸರಿಲ್ಲದ್ದನ್ನು ಕಂಡು ಒಂದೇ ದಿನದಲ್ಲಿ ನನ್ನನ್ನು ದೆಹಲಿಗೆ ಕರೆಸಿಕೊಂಡು ಈ ಅವಕಾಶ ಕೊಡುತ್ತಾರೆ. ಇದು ನನ್ನ ಏಳೇಳು ಜನುಮದ ಫಲ ಎಂದು ಹೇಳಿದ್ದಾರೆ.