ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Arun yogiraj: 'ರಾಮನ ಮೂರ್ತಿ ಕೆತ್ತಿದ್ದು ನಾನೆ, ಆದರೆ ಮಂದಿರದೊಳಗಿರುವುದು ನಾ ಕೆತ್ತಿದ ವಿಗ್ರಹವಲ್ಲ'!! ಹೊಸ ಸತ್ಯ ಬಿಚ್ಚಿಟ್ಟ ಅರುಣ್ ಯೋಗಿರಾಜ್

06:25 AM Jan 26, 2024 IST | ಹೊಸ ಕನ್ನಡ
UpdateAt: 06:25 AM Jan 26, 2024 IST
Advertisement

Arun yogiraj: ಅಯೋಧ್ಯೆಯ (Ayodhay) ರಾಮಮಂದಿರದಲ್ಲಿ ಬಾಲರಾಮನ (Balarama) ಪ್ರಾಣಪ್ರತಿಷ್ಠಾಪನೆಯಾಗಿದೆ. ಈ ಸುಂದರ ಮೂರ್ತಿಗೆ ಇಡೀ ದೇಶದ ಜನ ಮನಸೋತಿದ್ದಾರೆ. ಈ ಬಾಲರಾಮನ ವಿಗ್ರಹ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಮೂಡಿ ಬಂದಿದ್ದು, ಅರುಣ್ ಅವರ ಕೈ ಚಳಕಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೀಗ ಅರುಣ್ ಅವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದು, ಎಲ್ಲರಿಗೂ ಮೈ ರೋಮಾಂಚನವಾಗಿದೆ.

Advertisement

ಹೌದು, ಶಿಲ್ಪಿ ಅರುಣ್ ಯೋಗಿರಾಜ್(Arun yogiraj) ಅವರನ್ನು ಹಲವು ಮಾಧ್ಯಮಗಳು ಮಾತನಾಡಿಸುತ್ತಿವೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನಗೆ ಈ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಬಹುಶಃ ಇಡೀ ಪ್ರಪಂಚದಲ್ಲಿ ನನ್ನಷ್ಟು ಅದೃಷ್ಟವಂತರು ಯಾರು ಇಲ್ಲ ಎಂದು ಹೆಮ್ಮೆ ಪಟ್ಟಿದ್ದಾರೆ. ಅಲ್ಲದೆ ಮೂರ್ತಿಯನ್ನು ದೇವಾಲಯದೊಳಗೆ ಕೊಂಡೊಯ್ಯುವಾಗ ಆದ ರೋಮಾಂಚನ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ವಿಗ್ರಹ ಪೂರ್ಣವಾದ ಬಳಿಕ ಒಂದು ಕಾರ್ಯಗಾರಕ್ಕೆ ಕೊಡಲಾಗಿತ್ತು. ದೇವಸ್ಥಾನಕ್ಕೆ ಎಂಟ್ರಿ ಕೊಡುವಾಗಲೇ ವಿಗ್ರಹ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳಲು ಆರಂಭಿಸಿತು. ಕೊನೆಗೆ ಪ್ರತಿಷ್ಠಾಪನೆಯಾಗಿ ಅಲಂಕಾರವೆಲ್ಲಾ ಆದ್ಮೇಲೆ ಇದು ನಾನು ಮಾಡಿದ ವಿಗ್ರಹ ಅಲ್ಲ. ಇದು ನನ್ನ ಕೆಲಸ ಅಲ್ಲ. ದೇವರೇ ಈ ಕೆಲಸ ಮಾಡಿಕೊಂಡಿದ್ದಾರೆ ನನ್ನ ಅನುಭವಕ್ಕೆ ಬಂತು ಎಂದಿದ್ದಾರೆ.

Advertisement

ಇಷ್ಟೇ ಅಲ್ಲದೆ ನನಗೆ ಅನಿಸಿದ್ದಿಷ್ಟೇ ಇದು ನನ್ನ ಕೆಲಸವಲ್ಲ. ಇಡೀ ವಿಗ್ರಹ ಬೇರೆಯದೇ ರೀತಿಯಲ್ಲಿ ಕಾಣುತ್ತಿತ್ತು. ಭಗವಂತ ಬೇರೆಯದೇ ರೂಪ ಪಡೆದುಕೊಂಡಿದ್ದಾನೆ ಎಂದು ಬಾಲಕ ರಾಮನ ವಿಗ್ರಹಕ್ಕೆ ಜೀವ ಕಳೆ ಬಂದಿರುವ ಬಗ್ಗೆ ಅವರು ಮಾತನಾಡಿದ್ದಾರೆ.

Advertisement
Advertisement