New Research: ಕೋಳಿ ಮೊದಲಾ? ಮೊಟ್ಟೆ ಮೊದಲಾ ? ಪ್ರಶ್ನೆಗೆ ಸಿಕ್ಕೇಬಿಡ್ತು ಉತ್ತರ !! ವಿಜ್ಞಾನಿಗಳು ಕೊಟ್ರು ನೋಡಿ ಅಚ್ಚರಿ ಆನ್ಸರ್
New Research: ಬಾಲ್ಯದಿಂದಲೂ ಮೊಟ್ಟೆ(Egg)ಮೊದಲೋ ಕೋಳಿ ಮೊದಲೋ ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಾವೆಲ್ಲ ಮಾಡಿದ್ದೇವೆ. ಆದರೆ, ಇದಕ್ಕೆ ಉತ್ತರ ಇದೀಗ, ಹೊರ ಬಿದ್ದಿದೆ.
ಶೆಫೀಲ್ಡ್ ಮತ್ತು ವಾರ್ವಿಕ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಇದಕ್ಕೆ ಉತ್ತರ ಕಂಡುಕೊಂಡಿದ್ದಾರೆ. ಮೊದಲು ಬಂದದ್ದು ಕೋಳಿ ಎಂದು ಬಹಿರಂಗಪಡಿಸಿದೆ(New Research) . ಈ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಯುನಿಲಾಡ್ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಸ್ಟ್ ಅನುಸಾರ, ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸುವ ಜೊತೆಗೆ ಅನೇಕ ಸಾಕ್ಷಿಗಳನ್ನು ನೀಡುತ್ತವೆ.
ವರದಿಯ ಅನುಸಾರ, ಮೊದಲು ಬಂದದ್ದು ಕೋಳಿ ಎನ್ನಲಾಗಿದ್ದು, "ಮೊಟ್ಟೆಯ ಚಿಪ್ಪುಗಳ ರಚನೆಯು ಕೋಳಿಯ ಅಂಡಾಶಯದಲ್ಲಿ ಮಾತ್ರ ಕಂಡುಬರುವ ಪ್ರೋಟೀನ್ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೀಗಾಗಿ, ಮೊಟ್ಟೆಯು ಕೋಳಿಯೊಳಗೆ ಇದ್ದರೆ ಮಾತ್ರವೇ ಅಸ್ತಿತ್ವದಲ್ಲಿರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಒವೊಕ್ಲೆಡಿಡಿನ್-17 ಅಥವಾ OC-17 ಎಂಬ ನಿರ್ದಿಷ್ಟ ಪ್ರೋಟೀನ್ ಶೆಲ್ನ ಬೆಳವಣಿಗೆಯನ್ನು ವೇಗಗೊಳಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಅಧ್ಯಯನದ ಪ್ರಕಾರ, ಮೊಟ್ಟೆಯ ರಚನೆಯ ಮೇಲೆ 'ಝೂಮ್ ಇನ್' ಮಾಡುವ ಸೂಪರ್ ಕಂಪ್ಯೂಟರ್ ಅನ್ನು ಬಳಸಲಾಗಿದೆ.