Puttur: ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡುವ ಮೂಲಕ ಮಾದರಿಯಾದ ಶಾಲಾ ಬಾಲಕಿ!!
Puttur: ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡುವ ಮೂಲಕ ಕು. ಸೃಷ್ಟಿ ರೈ ಜಾರತ್ತಾರು ಅವರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.
ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಅಮೃತಕೇಶ ಕೂದಲು ದಾನ ಅಭಿಯಾನದ ಮೂಲಕ ಈ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: Best Sleeping Position: ಯಾವ ಕಡೆ ಮಲಗಬೇಕು? ಮಲಗುವ ಸರಿಯಾದ ಭಂಗಿಯನ್ನು ತಿಳಿದುಕೊಳ್ಳಿ, ಇಲ್ಲದಿದ್ದರೆ ಈ ಕಾಯಿಲೆ ಖಂಡಿತ
ಸಂಸ್ಥೆಯ ನಿರ್ವಾಹಕ ಉದಯಭಾಸ್ಕರ್ ಸುಳ್ಯ ಅವರ ಮೂಲಕ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದಾರೆ. ಸೃಷ್ಟಿ ರೈ’ಯವರು ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಮತ್ತು ಕವಿತಾ ದಂಪತಿಗಳ ಪುತ್ರಿಯಾಗಿದ್ದಾರೆ.
ಇದನ್ನೂ ಓದಿ: POK ಯಲ್ಲಿ ಪ್ರತಿಭಟನೆಗೆ ಹೆದರಿದ ಪಾಕಿಸ್ತಾನ ಸರ್ಕಾರ; ಭಾರತದೊಂದಿಗೆ ಸ್ನೇಹಕ್ಕಾಗಿ ಪಾಕ್ ಸಂಸತ್ತಿಗೆ ವಿದೇಶಾಂಗ ಸಚಿವರ ಮನವಿ
ಪುಟ್ಟ ಹುಡುಗಿಯ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.