ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

School Holiday: ಜನವರಿ 6ರ ತನಕ 1-8 ತರಗತಿ ಮಕ್ಕಳಿಗೆ ಶಾಲೆಗೆ ರಜೆ!!!

12:03 PM Jan 02, 2024 IST | ಹೊಸ ಕನ್ನಡ
UpdateAt: 12:03 PM Jan 02, 2024 IST
Advertisement

School Holiday: ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮೈಕೊರೆಯುವ ಚಳಿಯ ಜೊತೆಗೆ ಬಿರುಸಾದ ಮಂಜಿನ ಪ್ರಮಾಣ ಹೆಚ್ಚುತ್ತಿದೆ. ಭಾರೀ ಹವಾಮಾನ ವೈಪರೀತ್ಯದಿಂದಾಗಿ ಜೀವನ ಸಂಪೂರ್ಣ ಹಳಿ ತಪ್ಪಿರುವ ಕುರಿತು ವರದಿಯಾಗಿದೆ. ಮಂಜು ಮುಸುಕಿದ ಕಾರಣ ರೈಲು, ರಸ್ತೆ ಹಾಗೂ ವಿಮಾನ ಸಂಚಾರಕ್ಕೂ ತೊಂದರೆಯಾಗಿದೆ.

Advertisement

ಹಾಗಾಗಿ ಉತ್ತರ ಪ್ರದೇಶದ ಜಲೌನ್‌ ಜಿಲ್ಲೆಯಲ್ಲಿ ನರ್ಸರಿಯಿಂದ 8 ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚುವಂತೆ ಜಲೌನ್‌ನ ಡಿಎಂ ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ. ಹಾಗಾಗಿ 8 ನೇ ತರಗತಿಯವರೆಗಿನ ಶಾಲೆಗಳು ಜನವರಿ 6, 2024 ರವರೆಗೆ ಮುಚ್ಚಲ್ಪಡುತ್ತವೆ ಎಂದು ವರದಿಯಾಗಿದೆ.

ಜಿಲ್ಲಾ ಶಾಲಾ ನಿರೀಕ್ಷಕರು ಹೊರಡಿಸಿರುವ ಆದೇಶದಲ್ಲಿ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳು ಹಾಗೂ ಮದರಸಾಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಆದೇಶದಲ್ಲಿ ಎಂಟರನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಜನವರಿ 6 ರವರೆಗೆ ಶಾಲೆಗಳಲ್ಲಿ ಬೋಧನಾ ಕಾರ್ಯವನ್ನು ಮುಚ್ಚಲಾಗುವುದು ಎಂದು ನ್ಯೂಸ್‌ 18 ವರದಿ ಮಾಡಿದೆ.

Advertisement

ಈ ಮಧ್ಯೆ 9 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ನಿಗದಿತ ದಿನಾಂಕದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಶಾಲಾ ನಿರೀಕ್ಷಕರು ತಿಳಿಸಿದ್ದಾರೆ.

 

Related News

Advertisement
Advertisement