For the best experience, open
https://m.hosakannada.com
on your mobile browser.
Advertisement

SCDCC Bank Recruitment: ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆಗಳ ನೇಮಕ; ಈ ಕೂಡಲೇ ಅರ್ಜಿ ಸಲ್ಲಿಸಿ

SCDCC Bank Recruitment: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ಇಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
07:20 PM Jul 04, 2024 IST | ಸುದರ್ಶನ್
UpdateAt: 07:33 PM Jul 04, 2024 IST
scdcc bank recruitment  ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆಗಳ ನೇಮಕ  ಈ ಕೂಡಲೇ ಅರ್ಜಿ ಸಲ್ಲಿಸಿ

SCDCC Bank Recruitment: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ಇಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೇರ ನೇಮಕಾತಿಯಿಂದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೇಂದ್ರ ಕಚೇರಿಗೆ ದಿನಾಂಕ 18-07-2024 ರ ಅಪರಾಹ್ನ 4.30 ರ ಒಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

Advertisement

Hyderabad: 10 ರ ಬಾಲಕಿಯ ಮೇಲೆ ಹತ್ತು ಮಂದಿಯಿಂದ ಗ್ಯಾಂಗ್‌ರೇಪ್‌; ಬಾಲಕಿ ಗರ್ಭಿಣಿ

ಹುದ್ದೆಗಳ ವಿವರ: ದ್ವಿತೀಯ ದರ್ಜೆ ಗುಮಾಸ್ತರು
ಒಟ್ಟು ಹುದ್ದೆ: 123
ವೇತನ: ರೂ.24190- ರೂ.55655 ಹಾಗೂ ಇತರ ಭತ್ಯೆಗಳು

Advertisement

ಈಗಾಗಲೇ 07-08-2023 ರ ಪ್ರಕಟಣೆಯ ಮೂಲಕ ಆಹ್ವಾನಿಸಲಾಗಿರುವ ಅರ್ಜಿಗಳಲ್ಲಿ ಲಿಖಿತ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆದ್ಯತೆ: ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಬಿ.ಕಾಂ, ಬಿ.ಬಿ.ಎಂ. ಬಿ.ಸಿ.ಎ ಪದವಿಯಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ: ದಿನಾಂಕ 18-07-2024 ಕ್ಕೆ ಸರಿಯಾಗಿ ಅಭ್ಯರ್ಥಿಯ ಗರಿಷ್ಠ ವಯೋಮಿತಿಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ 40 ವರ್ಷ, ಇತರೆ ಹಿಂದುಳಿದ ಜಾತಿ ಮತ್ತು ವರ್ಗಗಳಿಗೆ 38 ವರ್ಷ, ಹಾಗೂ ಇತರರು 35 ವರ್ಷ ಮೀರಿರಬಾರದು. ಮಾಜಿ ಸೈನಿಕರು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಯೋಮಿತಿಗಿಂತ ಅವರು ಸೇವೆ ಸಲ್ಲಿಸಿದ ಅವಧಿಯನ್ನು ಅಥವಾ ಗರಿಷ್ಠ 10 ವರ್ಷದ ಹೆಚ್ಚುವರಿ ರಿಯಾಯಿತಿ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ.

Udupi: ಭಾರೀ ಮಳೆ; ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Advertisement
Advertisement
Advertisement