ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಮಹತ್ವದ ಸುದ್ದಿ- ಇಲ್ಲಿದೆ ನೋಡಿ ಹಣ ಡಬಲ್ ಮಾಡೋ ಟ್ರಿಕ್ಸ್

08:38 AM Mar 05, 2024 IST | ಹೊಸ ಕನ್ನಡ
UpdateAt: 09:20 AM Mar 05, 2024 IST
Advertisement

SBI: ಭಾರತದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪ್ರಮುಖವಾದ ಹಾಗೂ ಹೆಚ್ಚು ಪ್ರಸಿದ್ಧಿ ಹೊಂದಿದ ಬ್ಯಾಂಕ್ ಎಂದರೆ ಅದು SBI. ಇದೀಗ SBI ಗ್ರಾಹಕರಿಗೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಫಿಕ್ಸೆಡ್ ಡೆಪಾಸಿಟ್ (SBI FD) ನ ಹೊಸ ಸ್ಕೀಮ್ ನಿಮ್ಮ ಹಣವನ್ನು ದ್ವಿಗುಣ ಮಾಡಿಕೊಡುತ್ತದೆ.

Advertisement

ಇದನ್ನೂ ಓದಿ: Puttur: ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಸಾವು

ಇಂದು ಮಾರುಕಟ್ಟೆಗಳಲ್ಲಿ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ಜನರಿಗೆ ಮೋಸ ಮಾಡುವವರೇ ಹೆಚ್ಚು. ಆದರೆ ನಿಮಗೆ ತುಂಬಾ ನಂಬಲರ್ಹಲಾದ, ಹೆಚ್ಚು ಗ್ರಾಹಕರನ್ನು ಹೊಂದಿರುವ SBI ಬ್ಯಾಂಕಿನಲ್ಲಿ ನೀವು ಹೂಡಿಕೆ ಮಾಡಿರುವ ಹಣ ನಿಗದಿತ ಸಮಯದಲ್ಲಿ ದ್ವಿಗುಣವಾಗಿ ನಿಮ್ಮ ಕೈ ಸೇರಲಿದೆ. ಹಾಗಿದ್ದರೆ ಈ ಸ್ಕೀಮ್ ನ ಹೆಸರೇನು? ಏನೆಲ್ಲಾ ಲಾಭ ಇದೆ ಎಂದು ನೋಡೋಣ.

Advertisement

SBI Wecare: 

ಎಸ್‌ಬಿಐ ವಿ ಕೇರ್ (SBI Wecare) ಎಂಬ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಗೆ ನೀವು ಹೂಡಿಕೆಯನ್ನು ಮಾಡಬಹುದು. ಈ ಯೋಜನೆಯಲ್ಲಿ ನೀವು ನಿಗದಿತ ಅವಧಿಗೆ ಹಣ ಹೂಡಿಕೆ ಮಾಡಿದಾಗ ನಿಮ್ಮ ಹಣ ದುಪ್ಪಟ್ಟಾಗಿ ನಿಮ್ಮ ಕೈ ಸೇರಲಿದೆ. ಅಂದರೆ ಈ ಯೋಜನೆಯಲ್ಲಿ ನೀವು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 20 ಲಕ್ಷ ರೂಪಾಯಿಗಳಾಗಿ ನಿಮ್ಮ ಕೈ ಸೇರಲಿದೆ.

ಅಲ್ಲದೆ ಇಲ್ಲಿ ಹಿರಿಯ ನಾಗರಿಕರಿಗೆ 7.5% ಬಡ್ಡಿ ದರ ಸಿಗಲಿದೆ ಇದರಿಂದಾಗಿ ಹಣ 10 ವರ್ಷಗಳಲ್ಲಿ ದುಪ್ಪಟ್ಟು ಆಗಲಿದೆ. ನೀವು ಕೂಡ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿ ಇದ್ದೀರಿ ಎಂದಾದಲ್ಲಿ 31 ಮಾರ್ಚ್ 2024 ಕೊನೆಯ ದಿನಾಂಕ ಆಗಿರಲಿದೆ. ಹೀಗಾಗಿ ಕೂಡಲೇ ನಿಮ್ಮ ಸಮೀಪದ SBI ಶಾಖೆಗೆ ಭೇಟಿ ನೀಡಿ ಹೂಡಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ.

Related News

Advertisement
Advertisement