ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Savanuru: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ - ಸಹಕಾರ ಭಾರತಿ ಬೆಂಬಲಿತರಿಗೆ ಭರ್ಜರಿ ಜಯ

10:45 AM Jan 14, 2024 IST | Praveen Chennavara
UpdateAt: 11:31 AM Jan 14, 2024 IST
Advertisement

 

Advertisement

 

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನೂತನ ನಿರ್ದೇಶಕರ ಆಯ್ಕೆಗೆ ಜ.13ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 11 ಮಂದಿ ಅಭ್ಯರ್ಥಿಗಳೂ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.ಸಂಘದ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಸಹಕಾರ ಭಾರತಿಯ ಪ್ರಕಾಶ್ ರೈಯವರು ಅವಿರೋಧವಾಗಿ ಆಯ್ಕೆಯಾಗಿದ್ದರು.

Advertisement

ಉಳಿದ 11 ಸ್ಥಾನಗಳಿಗೆ ಜ.13ರಂದು ಚುನಾವಣೆ ನಡೆಯಿತು.ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳಲ್ಲಿಯೂ ಸ್ಪರ್ಧಿಸಿದ್ದರು.ಒಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಕೂಡಾ ಸ್ಪರ್ಧೆ ಮಾಡಿದ್ದರು. ಗೆಲುವು ಸಾಧಿಸಿದ ಸಹಕಾರ ಭಾರತಿ ಅಭ್ಯರ್ಥಿಗಳು.ಪಡೆದ ಮತಗಳ ಸಂಖ್ಯೆಯನ್ನು ಆವರಣದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Killer mother : ತಾಯಿ ಮಗುವನ್ನು ಕೊಂದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್- ಕಿಲ್ಲರ್ ಅಮ್ಮ ಟಿಶ್ಯೂ ಪೇಪರ್ ಅಲ್ಲಿ ಬರೆದ ರೋಚಕ ಸತ್ಯ ಬಹಿರಂಗ !!

ಸಾಮಾನ್ಯ ಕ್ಷೇತ್ರದಿಂದ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ(884),ಉದಯ ರೈ ಮಾದೋಡಿ(868), ತಾರಾನಾಥ ಕಾಯರ್ಗ( 854),ಅಶ್ವಿನ್ ಎಲ್ ಶೆಟ್ಟಿ ಸವಣೂರು(811),ಶಿವಪ್ರಸಾದ್ ಯಂ.ಎಸ್(638), ಮಹಿಳಾ ಮೀಸಲು ಸ್ಥಾನದಿಂದ ಜ್ಞಾನೇಶ್ವರಿ(837), ಸೀತಾಲಕ್ಷ್ಮಿ(817),ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಚೇತನ್ ಕುಮಾರ್ ಕೋಡಿಬೈಲು(798),ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಚೆನ್ನಪ್ಪ ಗೌಡ ನೂಜಿ(842),ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಗಂಗಾಧರ ನಾಯ್ಕ ಪೆರಿಯಡ್ಕ(861) ಹಾಗೂ ಅನುಸೂಚಿತ ಜಾತಿ ಮೀಸಲು ಸ್ಥಾನದಿಂದ ತಿಮ್ಮಪ್ಪ(846) ಅವರು ಗೆಲುವು ಸಾಧಿಸಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ಸಹಕಾರ ಭಾರತಿಯ ಪ್ರಕಾಶ್ ರೈ ಸಾರಕರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಪರಾಜಿತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಪಡೆದ ತಗಳು:

ಸಾಮಾನ್ಯ ಸ್ಥಾನದಿಂದ ಪ್ರವೀಣ್ ಕುಮಾ‌ರ್ ಕೆಡೆಂಜಿಗುತ್ತು(428),ಬಾಲಕೃಷ್ಣ ನೂಜಿ(167),ವಿಠಲ ಗೌಡ ಅಗಳಿ(246),ವೆಂಕಟೇಶ್ ಭಟ್ಕ ಯಕುಡೆ(250),ಸುಲೈಮಾನ್(204),ಮಹಿಳಾ ಮೀಸಲು ಸ್ಥಾನದಿಂದ ಕುಸುಮ(340), ತೇಜಾಕ್ಷಿ(360),ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸತೀಶ್ ಕುಮಾರ್ ಕೆಡೆಂಜಿ(397),ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಅವಿನಾಶ್ ಬೈತಡ್ಕ( 342), ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಗಂಗಾಧರ ನಾಯ್ಕ ಪರಣೆ(339)ಹಾಗೂ ಅನುಸೂಚಿತ ಜಾತಿ ಮೀಸಲು ಸ್ಥಾನದಿಂದ ಕೇಶವ(342).ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಯತೀಂದ್ರ ಶೆಟ್ಟಿ ಮಠ 315 ಮತಗಳನ್ನು ಪಡೆದುಕೊಂಡು ಪರಾಜಿತರಾಗಿದ್ದಾರೆ.

ಚುನಾವಣೆ ಪ್ರಕ್ರಿಯೆ:

ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರ ತನಕ ಚುನಾವಣೆ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯಿತು.ಸಂಜೆ 6.30ಕ್ಕೆ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಶೋಭಾ ಎನ್‌.ಎಸ್‌ರವರು ಅಧಿಕೃತವಾಗಿ ಘೋಷಿಸಿದರು.ಚುನಾವಣಾ ಪ್ರಕ್ರಿಯೆಗಳಲ್ಲಿ ಮಂಗಳೂರು ಎ.ಆರ್.ಕಚೇರಿಯ ಅಧೀಕ್ಷಕ ನಾಗೇಂದ್ರ ಹಾಗೂ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖ‌ರ್ ಪಿ.,ಉಪ ಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್.ರೈ, ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಹಾಗೂ ಸಂಘದ ಸಿಬ್ಬಂದಿಗಳು ಸಹಕಾರ ನೀಡಿದರು.

ಸಂಸದ ನಳಿನ್ ಸಹಿತ ಬಿಜೆಪಿ ಪ್ರಮುಖರ ಭೇಟಿ:

ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾ‌ರ್ ರೈ ಕೆದಂಬಾಡಿಗುತ್ತು, ಬಿಜೆಪಿ ಪ್ರಮುಖರಾದ ಎಸ್.ಅಪ್ಪಯ್ಯ ಮಣಿಯಾಣಿ, ಗೋಪಾಲಕೃಷ್ಣ ಹೇರಳೆ, ಹರೀಶ್ ಕಂಜಿಪಿಲಿರವರು ಬೆಳಿಗ್ಗೆ ಆಗಮಿಸಿ, ಬಿಜೆಪಿ ಬೆಂಬಿಲತ ಸಹಕಾರ ಭಾರತಿಯ ಅಭ್ಯರ್ಥಿಗಳು ಮತ್ತು ಕಾಯಕರ್ತರನ್ನು ಭೇಟಿ ಮಾಡಿ ತೆರಳಿದರು.

ವಿಜಯೋತ್ಸವ-ಸುಡುಮದ್ದುಗಳ ಸುರಿಮಳೆ:

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಸಂಭ್ರಮದಲ್ಲಿ ಸಂಜೆ ವಿಜಯೋತ್ಸವ ನಡೆಯಿತು. ಕಾಠ್ಯಕರ್ತರು ಗೆಲುವಿನ ಬಗ್ಗೆ ಹರ್ಷೋದ್ದಾರಗೈದರು.ಗೆದ್ದ ಅಭ್ಯರ್ಥಿಗಳಿಗೆ ಹಾರಹಾಕಿ ಸಂಭ್ರಮಿಸಿದರು.ಸವಣೂರು ಮುಖ್ಯರಸ್ತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ,ಸಹಕಾರ ಭಾರತಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ರಾಮ ಭಕ್ತರ ಗೆಲುವು ಎಂದರು.ಕಳೆದ ಅವಧಿಯಲ್ಲೂ ಸಂಸ್ಥೆಯಲ್ಲಿ ಉತ್ತಮ ಆಡಳಿತವನ್ನು ನೀಡಿದ ಕಾರಣಕ್ಕೆ ಈ ಗೆಲುವು ಸಾಧ್ಯವಾಯಿತು ಎಂದವರು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ದ.ಕ. ಜಿಲ್ಲೆಯಲ್ಲಿ ಸಹಕಾರ ಭಾರತಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ಸವಣೂರಿನ ಗೆಲುವು ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿದೆ ಎಂದರು.

ಕಾಣಿಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ, ಉಪಾಧ್ಯಕ್ಷೆ ಜಯಶ್ರೀ ಮತ್ತು ಸದಸ್ಯರು,ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು, ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾಠ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾಠ್ಯದರ್ಶಿ ಇಂದಿರಾ ಬಿ.ಕೆ ಬಂಬಿಲ, ಗಿರಿಶಂಕರ್ ಸುಲಾಯ, ಮಹೇಶ್ ಕೆ.ಸವಣೂರು, ಸಚಿನ್ ಕುಮಾ‌ರ್ ಜೈನ್, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್‌ ಕುಕ್ಕಜೆ, ಉಪಾಧ್ಯಕ್ಷೆ ಆಶಾ ರೈ ಕಲಾಯಿ ಮತ್ತು ನಿರ್ದೇಶಕರು,ತಾ.ಪಂ.ಮಾಜಿ ಅಧ್ಯಕ್ಷೆ ರಾಜೇಶ್ವರಿ, ಜಿ.ಪಂ, ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಮತ್ತು ಸಹಕಾರ ಭಾರತಿಯ ಪದಾಧಿಕಾರಿಗಳು ಸೇರಿದಂತೆ ೫೦೦ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

ಬಸದಿಗೆ ಭೇಟಿ:

ಚುನಾಯಿತ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸವಣೂರು ಚಂದ್ರನಾಥ ಜಿನ ಬಸದಿಗೆ ಭೇಟಿ ನೀಡಿ ಮಾತೆ ಪದ್ಮಾವತಿ ದೇವಿಗೆ ಪೂಜೆ ಸಲ್ಲಿಸಿದರು.

Advertisement
Advertisement